ಸದಾ ನೀ ಕಿಲಕಿಲಾ ಎಂದು
ನಗುತಾ ಇರಬೇಕು............,
ನಿನ್ನ ಖುಷಿಯಲಿ ನನ್ನೇ ಮರೆತು
ನಾ ಕುಣಿಯಬೇಕು................,
ನೀನು ಅತ್ತರೆ ನನ್ನ ಕಣ್ಣಲಿ
ರಕ್ತ ಸುರಿವುದು ಚಿನ್ನ.............,
ನೀ ನಕ್ಕರೆ ನಾ ಬಿಡುವೆ
ನೆಮ್ಮದಿಯ ನಿಟ್ಟುಸಿರನ್ನ.........,
ನಿನ್ನ ಜೀವಕೆ ನೆರಳಾಗುವೆ
ನೋವೆಲ್ಲಾ ಮರೆಸುವೆ............,
ತುತ್ತು ಉಣಿಸುತ ಮುತ್ತು ನೀಡುತ
ಎಂದೆಂದೂ ಪ್ರೀತಿಸುವೆ..........,
ಬಾ ಬೇಗನೆ ತಡ ಮಾಡದೆ
ನಿನಗಾಗಿ ಕಾದಿರುವೆ.............,
ನನ್ನೆದೆಯ ಮೇಲೆ ಮಲಗಿಸಿ ನಿನ್ನ
ಲಾಲಿ ನಾ ಹಾಡುವೆ................
ಬರೀರಿ, ಬರೀರಿ ! ಗುಡ್
ReplyDelete"ಬಡವನಾದರೆ ಏನು ಪ್ರಿಯೆ, ಕೈತುತ್ತು ತಿನಿಸುವೆ" ಹಾಡನ್ನು ನೆನಪಿಸುವ ಕವನ. ಸೊಗಸಾಗಿದೆ
ReplyDeletenice poem....!
ReplyDeleteಪ್ರವೀಣ್ ಸರ್ ,
ReplyDeleteತುಂಬಾ ಚೆನ್ನಾಗಿದೆ ನಿಮ್ಮ ಒಲವಿನ ಭಾವ
ಪ್ರವೀಣ್ ಏನಪ್ಪಾ ಇದು ಇಷ್ಟೊಂದು ಪ್ರೀತಿಯ ನಿವೇದನೆ...ಯಾವ ಹುಡುಗಿಗೆ..ಅದೃಷ್ಟಮಾಡಿದ್ದಾಳೆ ಬಿಡಿ...ನಿಮ್ಮ ಮಾತು ಕೇಳೋಕೆ ಮತ್ತೆ..ಆಚರಣೆ ಅನುಭವಿಸೋಕೆ....ಚನಾಗಿವೆ ಚುಟುಕು ಸಾಲುಗಳು
ReplyDeleteನಿಮ್ಮ ಕವನ ನೋಡಿ ಬೇಗ ಬರುವರು...
ReplyDeleteಚೆನ್ನಾಗಿದೆ...
V R B sir, thanks for coments,
ReplyDeleteದೀಪಸ್ಮಿತ, ಚುಕ್ಕಿ ಚಿತ್ತಾರ, ರಂಜಿತ ಮೇಡಂ, ಸವಿಗನಸು ಎಲ್ಲರಿಗೂ, ದನ್ಯವಾದಗಳು.
ಜಲನಯನ ಅವರೇ, ಇದು ನನ್ನ ಜೀವನ ಸಂಗಾತಿ ಅಗುವವಳ ನೆನಪಲ್ಲಿ ಬರೆದ ಸಾಲುಗಳು. ಹೀಗೆ ಅಭಿಪ್ರಾಯ ತಿಳಿಸ್ತಾ ಇರಿ. ದನ್ಯವಾದಗಳು.
tumbaa sogasaagide kavana.........
ReplyDeleteಏನ್ರಿ ಪ್ರವೀಣ ಲೇಟ ಆಗಿ ಬಂದರೂ ಒಳ್ಳೆಯ Entry ಕೊಟ್ಟಿದ್ದಿರಾ , ನಿಮ್ಮವಳ ಬಗ್ಗೆ ಇರುವ ಕಾಳಜಿ,ಪ್ರೀತಿಗಾಗಿ ಹಂಬಲ ಎರಡು ತುಂಬ ಮುದ್ದಾಗಿ ಮೂಡಿ ಬಂದಿವೆ . . .ಗುಡ್ ಗುಡ್ ಬರೀತಾ ಇರಿ . . :)
ReplyDeleteಸಂಜು ಅವರೇ, ನಿಮ್ಮೆಲ್ಲರ ಆಶಿರ್ವಾದ, ಪ್ರೋತ್ಸಾಹ ಹೀಗೆ ಇರಲಿ. ಖಂಡಿತ ಬರಿತೇನೆ.
ReplyDeleteದಿನಕರ್ ಸಾರ್, ಆಗಾಗ ಬರ್ತಾ ಇರಿ, ಬಂದು ಹೀಗೆ ಸಾತ್ ಕೊಡ್ತಾ ಇರಿ.
ದನ್ಯವಾದಗಳು
ಪ್ರೀತಿಯ ಉತ್ಕಟ ಭಾವದ ಚೆ೦ದದ ಚುಟುಕುಗಳು.
ReplyDeleteಪ್ರೀತಿಯ ಉತ್ಕಟ ಭಾವದ ಚೆ೦ದದ ಚುಟುಕುಗಳು.
ReplyDeleteಚೆನ್ನಾಗಿದೆ ಕವನ. ಬರುತ್ತಾರೆ ಬಿಡಿ ಬೇಗ ..:).
ReplyDelete