Tuesday, March 16, 2010

ಯುಗ ಯುಗಾದಿ ಕಳೆದರೂ..........

ನಮ್ಮೆಲ್ಲಾ ಬ್ಲಾಗ್ ಮಿತ್ರರಿಗೂ


ಹೊಸ ವರುಷ ಯುಗಾದಿಯ ಹಾರ್ದಿಕ ಶುಭಾಶಯಗಳು.













ಯುಗವೆಷ್ಟೇ ಕಳೆಯಲಿ...........


ಜಗವೇನೇ ಹೇಳಲಿ..............


ಯುಗಾದಿಗೆ ನಿಲುವಿಲ್ಲ ..........


ಆಗಮನವ ಮರೆತಿಲ್ಲ............



ಹೊಸ ಜೀವನದ ಲೆಕ್ಕಾಚಾರದಿ........


ಬೆಸಸರಿಗಳ ಗುಣಾಕಾರದಿ ..............


ಪಸರಿಸಿತು ಮಗದೊಮ್ಮೆ ................


ಹೊಸವರುಷ ಸಂತೋಷದಿ ............



ಇಳೆಯು ಅದುರಿದರೇನು..............


ಪ್ರಳಯ ಬರುವುದೆಂದರೇನು...........


ನಾಳೆಯ ರವಿ ಮೂದಡಿದ್ದರೇನು..............


ಬಳಿಗೆ ಬರುವುದು ಯುಗಾದಿ ಎಂದಿನಂತೆ...........




ಕಷ್ಟವೆಲ್ಲವ ಮರೆತು ಬೇವು ಬೆಲ್ಲವ.......................


ಇಷ್ಟಿಷ್ಟೇ ಬೆಲ್ಲವ ಸೇರಿಸಿ................


ನಿಷ್ಟೇಯಲಿ ಬೇವಿನ ಕಹಿಯೊಂದಿಗೆ.........


ಸೃಷ್ಥೀಶನ  ನೆನೆಯುತ ಸವಿಯೋಣ ನಾವಿಂದು...............


ಸವಿಯಾದ ಬೇವು ಬೆಲ್ಲದಂತೆ ...............


ನವಿರಾದ ಆದರ್ಶ ನಮದಾಗಲಿ..................


ನವ ಸಂವತ್ಸರದ ಶುಭಗಳಿಗೆಯಲಿ..............


ನವೀನ ಸಂತೋಷ ಎಲ್ಲರಿಗೂ ಸಿಗಲಿ..........

Monday, March 8, 2010

ನೀನೆಲ್ಲಿರುವೆ?


ಎಲ್ಲಿರುವೆ ದೇವರೇ ಕಣ್ಣಿಗೆ ಕಾಣದೆ,


ನಿನ್ನ ಹುಡುಕಿ ನಾ ಸೋತು ಹೋದೆ........


ದುರಾಚಾರದಿ ಧರೆ ಹತ್ತಿ ಉರಿದಿದೆ,


ಉದ್ಧರಿಸದೆ ಜಗವ ಎಲ್ಲಿ ಕಾಣೆಯಾದೆ......






ಭಯವಿಲ್ಲ ಭಕ್ತಿಯಿಲ್ಲ  ಸತ್ಯದ ಸುಳಿವಿಲ್ಲ


ನ್ಯಾಯ ನೀತಿಗಳಿಲ್ಲ ಧರ್ಮ ಇಲ್ಲವೇ ಇಲ್ಲ........


ಸುಳ್ಳು ಮೋಸ ತುಂಬಿಹುದಲ್ಲ


ದಗ ವಂಚನೆ ಜಗವ ಸುಡುತಿವೆಯಲ್ಲ...........






ಬಾರಲ್ಲಿ ರಮ್ಮು ಬೀರಿನ ಮತ್ತಲ್ಲಿ


ಗುಂಡು ಬಾಡಿನೂಟದಲಿ..........


ಮನುಜಕುಲದ ಮಹನೀಯರು


ಮಾನವೀಯತೆಯ ಮರೆತಿಹರಿಲ್ಲಿ..........






ಹೆಣ್ಣು ಗಂಡಿನ ಮಧ್ಯೆ ಭೆಧವೆಂಬುದಿಲ್ಲ


ಹೆಣ್ಣು ಆಧುನಿಕತೆಯಲ್ಲಿ ತಾ ಹೆಣ್ಣಾಗಿ ಉಳಿದಿಲ್ಲ........


ಧೂಮ-ಮದ್ಯಪಾನದಲಿ ಮೈ ಮರೆತಿಹಳಲ್ಲ


ನಾರಿ ದೇವತಾ ರೂಪ ಸುಳ್ಳಾಗಿ ಹೋಯ್ತಲ್ಲ.........




ಕಾಡನ್ನೇ ಕಡಿದು ನಾಡನ್ನು ಮಾಡಿ


ಭೂತಾಯಿ ಮಾನಭಂಗ ಮಾಡಿದರಲ್ಲ.........


ಅದಿರು ನಿಕ್ಷೆಪವೆಂದು ಎಲ್ಲೆಲ್ಲೂ ಅಗೆದು


ತಾಯಿಯ ಒಡಲನ್ನೇ ಬಗೆದರಲ್ಲ........






ಅಲ್ಲಿ ಇಲ್ಲಿ ಎಲ್ಲಿ ಅಡಗಿಹೆ ಅದಾವ ಮೂಲೆಯಲ್ಲಿ


ನಿನ್ನ ಹುಡುಕದ ತಾಣವೇ ಉಳಿದಿಲ್ಲ


ಒಮ್ಮೆ ಬರಬಾರದೇ ಇಲ್ಲಿ........


ಇಳಿದು ಬಾ ನೋಡು ಧರೆಯಲ್ಲಿ


ಉದ್ಧರಿಸು ಧರಣಿಯ ಇನ್ನೊಂದು ಅವತಾರದಲ್ಲಿ ...