Monday, March 8, 2010

ನೀನೆಲ್ಲಿರುವೆ?


ಎಲ್ಲಿರುವೆ ದೇವರೇ ಕಣ್ಣಿಗೆ ಕಾಣದೆ,


ನಿನ್ನ ಹುಡುಕಿ ನಾ ಸೋತು ಹೋದೆ........


ದುರಾಚಾರದಿ ಧರೆ ಹತ್ತಿ ಉರಿದಿದೆ,


ಉದ್ಧರಿಸದೆ ಜಗವ ಎಲ್ಲಿ ಕಾಣೆಯಾದೆ......






ಭಯವಿಲ್ಲ ಭಕ್ತಿಯಿಲ್ಲ  ಸತ್ಯದ ಸುಳಿವಿಲ್ಲ


ನ್ಯಾಯ ನೀತಿಗಳಿಲ್ಲ ಧರ್ಮ ಇಲ್ಲವೇ ಇಲ್ಲ........


ಸುಳ್ಳು ಮೋಸ ತುಂಬಿಹುದಲ್ಲ


ದಗ ವಂಚನೆ ಜಗವ ಸುಡುತಿವೆಯಲ್ಲ...........






ಬಾರಲ್ಲಿ ರಮ್ಮು ಬೀರಿನ ಮತ್ತಲ್ಲಿ


ಗುಂಡು ಬಾಡಿನೂಟದಲಿ..........


ಮನುಜಕುಲದ ಮಹನೀಯರು


ಮಾನವೀಯತೆಯ ಮರೆತಿಹರಿಲ್ಲಿ..........






ಹೆಣ್ಣು ಗಂಡಿನ ಮಧ್ಯೆ ಭೆಧವೆಂಬುದಿಲ್ಲ


ಹೆಣ್ಣು ಆಧುನಿಕತೆಯಲ್ಲಿ ತಾ ಹೆಣ್ಣಾಗಿ ಉಳಿದಿಲ್ಲ........


ಧೂಮ-ಮದ್ಯಪಾನದಲಿ ಮೈ ಮರೆತಿಹಳಲ್ಲ


ನಾರಿ ದೇವತಾ ರೂಪ ಸುಳ್ಳಾಗಿ ಹೋಯ್ತಲ್ಲ.........




ಕಾಡನ್ನೇ ಕಡಿದು ನಾಡನ್ನು ಮಾಡಿ


ಭೂತಾಯಿ ಮಾನಭಂಗ ಮಾಡಿದರಲ್ಲ.........


ಅದಿರು ನಿಕ್ಷೆಪವೆಂದು ಎಲ್ಲೆಲ್ಲೂ ಅಗೆದು


ತಾಯಿಯ ಒಡಲನ್ನೇ ಬಗೆದರಲ್ಲ........






ಅಲ್ಲಿ ಇಲ್ಲಿ ಎಲ್ಲಿ ಅಡಗಿಹೆ ಅದಾವ ಮೂಲೆಯಲ್ಲಿ


ನಿನ್ನ ಹುಡುಕದ ತಾಣವೇ ಉಳಿದಿಲ್ಲ


ಒಮ್ಮೆ ಬರಬಾರದೇ ಇಲ್ಲಿ........


ಇಳಿದು ಬಾ ನೋಡು ಧರೆಯಲ್ಲಿ


ಉದ್ಧರಿಸು ಧರಣಿಯ ಇನ್ನೊಂದು ಅವತಾರದಲ್ಲಿ ...

12 comments:

  1. ಸುಂದರ ಕವನ.. ಹೀಗೆ ಬರೆಯುತ್ತ ಇರಿ...
    ನಿಮ್ಮವ,
    ರಾಘು.

    ReplyDelete
  2. ಚಿಕ್ಕ ಪದ್ಯಗಳಾದರೂ ಚೆನ್ನಾಗಿವೆ..ಇನ್ನಷ್ಟು ಬರೆಯಿರಿ..

    ReplyDelete
  3. ಪ್ರವೀಣ್ ಚಿಕ್ಕವಾದ್ರೂ ಚೊಕ್ಕವಾಗಿ ಮೂಡಿವೆ ನಿಮ್ಮ ಕವನಗಳು...
    ನಿಮ್ಮ ಈ ಕವನ ಇಷ್ಟವಾಯ್ತು,...
    ಕಾಡನ್ನೇ ಕಡಿದು ನಾಡನ್ನು ಮಾಡಿ
    ಭೂತಾಯಿ ಮಾನಭಂಗ ಮಾಡಿದರಲ್ಲ.........
    ಅದಿರು ನಿಕ್ಷೆಪವೆಂದು ಎಲ್ಲೆಲ್ಲೂ ಅಗೆದು
    ತಾಯಿಯ ಒಡಲನ್ನೇ ಬಗೆದರಲ್ಲ........

    ReplyDelete
  4. ಪ್ರವೀಣ
    ಸುಂದರ ಕವನ
    ಎಲ್ಲೋ ಹುಡುಕಿದೆ ಇಲ್ಲದ ದೇವರ
    ಎಂಬ ಕವಿತೆ ನೆನಪಾಗುತ್ತಿದೆ

    ReplyDelete
  5. thanks for your valueble comment to all my blog friends

    ReplyDelete
  6. ನನ್ನ ಬ್ಲಾಗ್ ನಲ್ಲಿ ನಿಮ್ಮ ಪ್ರತಿಕ್ರಿಯೆ ನೋಡಿ ಇಲ್ಲಿಗೆ ಬಂದೆ.ಬರೆಯುವ ಅಳುಕು ಇದ್ದರೂ ಚೆಂದ ಬರೆದಿದ್ದೀರಿ.ಕುಂದಾದ್ರಿ,ಯಕ್ಷಗಾನ,ಕವನಗಳು ಚೆನ್ನಾಗಿವೆ.

    ನನ್ನ ಬ್ಲಾಗ್ ನಲ್ಲಿ ಯುಗಾದಿ ಕವಿತೆ,ಕಲ್ಪನೆಗೆ ಚಿತ್ರಗಳಿವೆ.ವಿವಿರ ಅಲ್ಲೆ ಇದೆ.ನೀವೂ ನೋಡಿ,ನಿಮ್ಮ ಗೆಳೆಯರಿಗೂ ತಿಳಿಸಿ.
    ಧನ್ಯವಾದ
    ಅಶೋಕ ಉಚ್ಚಂಗಿ

    ReplyDelete
  7. ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಈ ಕವನ. ನೀವು ಹೇಳಿದಂತೆ ಆ ದೇವರೇ ಇನ್ನೊಂದು ಅವತಾರವೆತ್ತಿ ನಮ್ಮ ಭೂತಾಯಿಯನ್ನು ಉಳಿಸಬೇಕು.

    ReplyDelete
  8. ಪ್ರೀತಿಯ ಅಶೋಕ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
    ಹೀಗೆ ಆಗಾಗ ಬಂದು ಹೋಗ್ತಾ ಇರಿ,
    ಓ ಮನಸೇ, ನಿಮ್ಮ ಆಗಮನ, ಪ್ರತಿಕ್ರಿಯೆ ಹೀಗೆ ನಿರಂತವಾಗಿರಲಿ
    ದನ್ಯವಾದಗಳು.

    ReplyDelete
  9. praveen
    neenelliruve?
    chennagide kavana.
    nimma kalaji arthavaagatte.

    devaru anno nambike kooda ondu marulu.

    it is free will through which any thing can be achieved.
    ethakke avatharakke kayuthiruviri?
    namma-nimma prayathna munduvarisona.

    any way good work.

    ReplyDelete
  10. Dear Ashok,
    ದೇವರೆಂಬುದು ಅವರವರ ನಂಬಿಕೆಗೆ ಬಿಟ್ಟಿದ್ದು. ಈ ಭೂಮಿಯಲ್ಲಿ ಅನಾಚಾರ ಅತ್ಯಾಚಾರ ಮೋಸ ವಂಚನೆಗಳು ತುಂಬಿ ತುಳುಕಾಡುತ್ತಿವೆ. ದೇವರ ಮೇಲೆ ನಂಬಿಕೆ ಇರುವವರು ಭಯ ಪಡಬಹುದು ಅಷ್ಟೇ. ಹಾಗಂತ ಮೋಸ ಮಾಡುವುದಿಲ್ಲ ಅಂತಲ್ಲ! ಪರಿಸ್ಥಿತಿ ನಮ್ಮ ಹತೋಟಿ ಮೀರಿ ಹೋಗಿದೆ. ಕಾಕತಾಳೀಯ ನಡೆಯಬೇಕೆ ಹೊರತು ನಮ್ಮ ನಿಮ್ಮ ಪ್ರಯತ್ನದಿಂದ ಏನೂ ಸಾದ್ಯವಿಲ್ಲ. ಆದರೂ ಪ್ರಯತ್ನಿಸೋಣ!
    ನಿಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು.

    ReplyDelete