ಗೆಳೆಯರೇ, ಸೋಮವಾರ ನನ್ನ ತಮ್ಮ ಮತ್ತು ಅಮ್ಮ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಅಪಘಾತವಾಗಿತ್ತು. ಅಮ್ಮನಿಗೆ ಕೈ ಮೂಳೆ ಮುರಿದಿದ್ದು, ತಲೆಗೆ ಹೊಡೆತ ಬಿದ್ದು ೮ ಹೊಲಿಗೆ ಹಾಕಲಾಗಿದೆ. ದೇವರ ದಯೆಯಿಂದ ಹೆಚ್ಚೇನೂ ತೊಂದರೆಯಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇಂದು ಬೆಳಿಗ್ಗೆ ಪ್ರಜ್ಞೆ ಬಂದು, ನನ್ನೊಂದಿಗೆ ಮಾತನಾಡಿದಾಗಲೇ ನನಗೆ ಹೋದ ಜೀವ ಬಂದಿದ್ದು! ಅಮ್ಮ ಈಗ ನಿದಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಪ್ರದೀಪನಿಗೆ (ತಮ್ಮ) ಯಾವುದೇ ತೊಂದರೆಗಲಾಗಲಿಲ್ಲ.
ಈ ಸಮಯದಲ್ಲಿ ಅಮ್ಮನ ನೆನಪಾಗಿ ಹರಿದ ಕಣ್ಣೀರಿಗೆ ಬರಹದ ರೂಪ ಕೊಟ್ಟಿದ್ದೇನಷ್ಟೇ. ನನ್ನ ಸಹೃದಯಿ ಬ್ಲಾಗ್ ಸ್ನೇಹಿತರು ಒಳ್ಳೆ ಮನಸಿನಿಂದ ಹರಸಿದರೆ ಸಾಕು, ನನ್ನಮ್ಮ ಬೇಗ ಗುಣವಾಗುತ್ತಾಳೆಂಬ ಆಸೆಯಿಂದ ನೋವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.
ಅಮ್ಮಾ.................,
ನಿನ್ನ ಕೈ ತುತ್ತಿಗಾಗಿ ಮನ ಕಾಡಿದೆ.........
ನಿನ್ನ ಕಾಲಮೇಲೆ ಮಲಗುವ ಆಸೆ.........
ಪದೇ ಪದೇ ಮೂಡುತಿದೆ...............
ತಲೆಗೊಂದು ಬ್ಯಾಂಡೇಜು.............
ಕೈಗೊಂದು ಪ್ಲಾಸ್ಟರು.................
ಆಸ್ಪತ್ರೆಯ ಹಾಸಿಗೆಯಲಿ...............
ಇದೇನು ನಿನ್ನ ಕಾರುಬಾರು............?
ಅಯ್ಯೋ,
ಇದೇಕಮ್ಮಾ ಹೀಗಾಯ್ತು...........?
ಹಾಸಿಗೆ ಹಿಡಿಯುವ ಗತಿ ನಿನಗಾಯ್ತು.......
ನಾ ನೋಡಲಾರೆ ನಿನ್ನೀ ಸ್ಥಿತಿಯ........
ಹಠ ಮಾಡಲಾರೆ, ರಚ್ಚೆ ಹಿಡಿಯಲಾರೆ.........
ನೀ ಹೇಳಿದಂತೆ ಕೇಳುವೆ ....
ಒಮ್ಮೆ ನನ್ನೊಂದಿಗೆ ಮಾತಾಡಬಾರದೆ......?
ನಸುಕಿನಲಿ ನೀನೆದ್ದು..........
ಅಂಗಳ ಕಂಗಳವ ಸಾರಿಸಿ..........
ಬಿಸಿಬಿಸಿ ಕಾಫಿ ತಂದು..........
ಏಳು ಮಗನೆ ಎನ್ನುವರಿಲ್ಲ.........
ಇತ್ತಲ್ಲೇ ಕಾಫಿ ತಣ್ಣಗಾದಾಗ............
ಮುಸುಕೆಳೆದು ಹಣೆಗೆ ಮುತ್ತಿಟ್ಟು.........
ತಲೆಗೂದಳಲಿ ಕೈಯಾಡಿಸುತ........
ಹೊತ್ತಾಯ್ತು ಮಗನೆ ಎನ್ನುವರಿಲ್ಲ..........
ಸಾಕಮ್ಮ ಇನ್ನು ನೀ ದುಡಿದೆ ...............
ಜೀವ ತೆಯ್ದೆ ನಮಗಾಗಿ............
ಇನ್ನು ಸಾಕು ನೀಡು ನಮಗೆ..........
ನಿನ್ನ ಸೇವೆಗಯ್ಯುವ ಪುಣ್ಯವ.........
ಬೇಗ ಗುಣವಾಗಿ ಗಾಯ ಮಾಯವಾಗಿ..........
ಮೊದಲಿನಂತೆ ನೀ ಪಗಡೆಯಾಡಲು..........
ನನ್ನೊಂದಿಗೆ ಜಗಳವಾಡಲು.................
ನಿನ ಸೇವೆ ಮಾಡುವ ಈ ನಿನ್ನ ಕಂದ..........
ಓ ದೇವರೇ ನನ್ನಮ್ಮ ಒಬ್ಬಳೇ...........
ಗುಣವಾಗಿಸು ಬೇಗ ಮೊದಲಿನಂತೆ...........
ನಿನಗೂ ಅಮ್ಮನಿಲ್ಲವೇ.................
ಅಮ್ಮನ ನೋವು ನನದಲ್ಲವೇ...........
ಕರುಣಿಸಬಾರದೆ ಓ ಕರುಣಾಮಯಿ............
ತರತರದ ಪುಷ್ಪಗಳಿಂದ.............
ಚಂದನ ಸಾಂಬ್ರಾಣಿ ಕರ್ಪೂರದಿಂದ............
ನಿನಗೆ ಹರಕೆ ನೀಡುವೆ................
ನನ್ನಮ್ಮನಿಗೆ ನೋವು ಕೊಡದೆ...........
ಔಷದಗಳೇ ಅಮೃತವಾಗಿ.................
ಬೇಗ ಬರಲಿ ಅಮ್ಮ ಮನೆಗೆ.................
ತಮ್ಮ ಮಾತೋಶ್ರೀಯವರು ಬೇಗ ಗುಣಮುಖರಾಗಲೆ೦ದು ಹಾರೈಸುತ್ತೆನೆ. "ಅಮ್ಮ"ನ ಬಗ್ಗೆ ಏಷ್ಟೋ ಜನ ಬ್ಲೊಗ್-ನಲ್ಲಿ ಬರೆದಿದ್ದಾರೇ! ಸಾಹಿತಿಗಳು ಕವನ, ಕಥೆ, ಕಾದ೦ಬರಿ ಮು೦ತಾದವನ್ನೂ ಬರೆದು ಅಮ್ಮನ ಬಗೆಗಿನ ಹೇರಳ ಸಾಹಿತ್ಯವಿದ್ದರೂ ಅಮ್ಮನ ಬಗ್ಗೆ ಹೇಳಿವದೂ ಇನ್ನೂ ಇದೆ ಎನ್ನುವಷ್ತು ಅಪಾರ ಅಮ್ಮನ ವಾತ್ಸಲ್ಯದ ಹರವು. ತಮ್ಮ ಕವನ ತಮ್ಮ ಮತ್ತು ಅಮ್ಮನ ನಡುವಿನ ಅವಿನಾಭಾವವನ್ನ ಸೂಕ್ತವಾಗಿ ಮಿಡಿದಿದೆ. ಅಮ್ಮ ಬೇಗ ಗುಣಮುಖರಾಗಿ ಬರುತ್ತಾರೇ... ಧೈರ್ಯದಿ೦ದಿರಿ..
ReplyDeleteನಿಮ್ಮ ಅಮ್ಮ ಮತ್ತು ತಮ್ಮ ಇಬ್ಬರೂ ಆದಷ್ಟು ಬೇಗ ಗುಣಮುಖರಾಗಲಿ.ಅಮ್ಮನ ಬಗ್ಗೆ ಬರೆದ ಕವನ ಕಕ್ಕುಲತೆಯಿ೦ದ ಕೂಡಿ ಸು೦ದರವಾಗಿದೆ.
ReplyDeleteಚಿ೦ತಿಸದಿರಿ.. ಬೇಗ ಗುಣವಾಗಿ ಬರುತ್ತಾರೆ.
ದೇವರು ಕೆಲವೊಮ್ಮೆ ಒಳ್ಳೆಯವರಿಗೆ ಇಂತಹ ಪರಿಸ್ಥಿತಿಗಳನ್ನು ಟೆಸ್ಟ್ ಡೋಸ್ ಅಂತ ಕೊಡುತ್ತಿರುತ್ತಾನೆ, ನಿಮ್ಮ ಕವನ ಚೆನ್ನಾಗಿದೆ, ಅದಕ್ಕಿಂತ ಹೆಚ್ಚಿಗೆ ನಿಮ್ಮ ಅಮ್ಮ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಹಾರೈಸುತ್ತೇನೆ, ಬಹಳ ತಲೆನೋವು ಬೇಡ, ಅಮ್ಮ ಶೀಘ್ರ ಗುಣಮುಖರಾಗುತ್ತಾರೆ.ನೀವು ಶೃಂಗೇರಿಯ ನೆರೆಹೊರೆಯವರು, ತಾಯಿ ಶಾರದಾಂಬೆ ತ್ರಿಶಕ್ತಿ ಸ್ವರೂಪಿಣಿ, ಅವಳ ಅನುಗ್ರಹ ನಿಮಗೊದಗುತ್ತದೆ,ಚಿಂತಿಸಬೇಡಿ,ಧನ್ಯವಾದಗಳು
ReplyDeleteನಿಮ್ಮ ತಾಯಿಯವರು ಬೇಗನೆ ಚೇತರಿಸಿಕೊಂಡು ಮೊದಲಿನಂತಾಗಲಿ ಎಂದು ಹಾರೈಸುತ್ತೇನೆ .
ReplyDeleteಅಪಘಾತದ ವಿಷಯ ಓದಿ ತುಂಬಾ ದು:ಖವೆನಿಸಿತು. ನಮಗೆ ಏನಾದ್ರೂ ಅನಾರೋಗ್ಯವಾದ್ರೂ ಸಹಿಸಿಕೊಳ್ಳಬಹುದು ಆದರೆ ನಮ್ಮ ಹತ್ತಿರದವರಿಗೆ ಏನಾದ್ರೂ ಆದ್ರೆ ಮನಸ್ಸು ತುಂಬಾ ಅಳುತ್ತೆ. ನಿಮ್ಮ ನೋವು ಅರ್ಥವಾಗುತ್ತೆ. ನಿಮ್ಮ ಅಮ್ಮ ಹಾಗೂ ತಮ್ಮನಿಗೆ ಬೇಗ ವಾಸಿ ಆಗಿ ನಿಮ್ಮ ಮನೆ ಮನ ದಿ ಮತ್ತೆ ಸಂತೋಷದ ಅಲೆ ತುಂಬಲಿ ಎಂದು ದೇವರಲ್ಲಿ ನಮ್ಮ ಪ್ರಾರ್ಥನೆ.
ReplyDeleteಅಮ್ಮಾ.... ಎಂದರೆ ಸಾಕು....... ಬರೆಯೋ ಅವಶ್ಯ ಇರಲ್ಲ..... ಅಷ್ಟು ಅಪಾರವಾದ ಅರ್ಥ ಇದೆ ಅದಕ್ಕೆ.... ಅಮ್ಮನ ಬಗ್ಗೆ ಕವನ ಓದಿ ಕಣ್ಣು ಮಂಜಾಯಿತು....... ಅಮ್ಮ ಬೇಗ ಗುಣಮುಖರಾಗಲಿ......... ತಮ್ಮನೂ ಸಹ... ನಮ್ಮೆಲ್ಲರ ಪ್ರಾರ್ಥನೆ ಆ ದೇವರಲ್ಲಿ......
ReplyDeleteಅಮ್ಮ ಬೇಗ ಗುಣಮುಖರಾಗಲಿ .. ಅದಕ್ಕಿಂತ ಸಂತೋಷ ಇನ್ನೊಂದು ಇಲ್ಲ ..
ReplyDeleteನಿಮ್ಮ ಅಮ್ಮ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಹಾರೈಸುತ್ತೇನೆ
ReplyDeleteಸೀತಾರಾಂ ಸರ್, ಮನಮುಕ್ತಾ, V R ಭಟ್ರೇ, ಡಾಕ್ಟ್ರೆ, ಓ ಮನಸೇ......., ದಿನಕರ್ ಸರ್, ರಂಜಿತಾ ಮೇಡಂ, ನಿಶಾ ಅವರೇ,
ReplyDeleteನಿಮ್ಮೆಲ್ಲರ ಹಾರೈಕೆ-ಆಶಿರ್ವಾದಗಳಿಂದ ನನ್ನಮ್ಮ ಚೇತರಿಸಿಕೊಂಡಿದ್ದಾರೆ. ಅಘಾತದಿಂದ ದಿಕ್ಕೇ ತೋಚದಂತ ಸಂದರ್ಭದಲ್ಲಿ ನಿಮ್ಮೆಲ್ಲರ ಸಾಂತ್ವಾನದ ಮಾತುಗಳು ನನ್ನಲ್ಲಿ ಧೈರ್ಯವನ್ನು ಮೂಡಿಸಿತು. ಮನೆಗೆ ಹೋಗಿ ಅಮ್ಮನ ಸೇವೆ ಮಾಡಿ, ಅಮ್ಮ ಚೇತರಿಸಿಕೊಂಡ ನಂತರ ನಿನ್ನೆಯಷ್ಟೇ ವಾಪಾಸು ಬಂದೆ. ಮುರಿದ ಕೈ ಮೂಳೆ ಸರಿಯಾಗಲು ಇನ್ನು ಹಲವು ದಿನಗಳು ಬೇಕಾಗಬಹುದು. ದೇವರ ದಯೆಯಿಂದ ತಲೆಗೆ ಬಿದ್ದ ಪೆಟ್ಟು ಅಪಾಯಕಾರಿ ಆಗಲಿಲ್ಲ.
ನಿಮ್ಮೆಲ್ಲರ ಪ್ರೀತಿ ಹೀಗೆ ಸದಾ ತುಂಬಿರಲಿ