Thursday, April 1, 2010

ಕಾಡುವುದೇತಕೆ?













ಅಂದೆಂದೋ ನನ್ನವಳಾಗಿದ್ದ ನೀನು

ಇಂದು ಕನಸಿನಲ್ಲಿ ಬಂದಿದ್ದೇಕೆ........?

ಮನಸಿನಾಳದಿಂದ ಕಿತ್ತೋಗೆದ ಮೇಲೂ

ನೆನಪಾಗಿ ನೀ ಕಾಡುವುದೇಕೆ........?



ಪ್ರೀತಿಯ ಹೊಳೆ ಹರಿಸಿದ್ದೆ ಅಂದು

ನಿನ್ನೊಲುಮೆಯ ಪರಿಗೆ ನಾ ಸೋತಿದ್ದೆ.........,

ಬಣ್ಣದ ಮಾತುಗಾರನ ಮೋಡಿಗೆ

ಸೋತು ನನ್ನ ದೂರ ಏಕೆ ತಳ್ಳಿದ್ದೆ.............!



ಕಾಡಿದೆ ಬೇಡಿದೆ ಅಂಗಲಾಚಿದೇ  

ಆದರೂ ನೀನು ಮಣಿಯಲಿಲ್ಲವಲ್ಲಾ.............,

ಹೆಣ್ಣೇ ನಿನಗೇಕೆ ಬಂತು ಈ ದುರ್ಬುದ್ಧಿ

ಪ್ರೀತಿಸಿ ನಂಬಿಸಿ ಕೈ ಕೊಟ್ಟೆಯಲ್ಲಾ...........!



ಹರಸಿದ್ದೆನಲ್ಲ ಚನ್ನಾಗಿರೆಂದು ದೂರದಿಂದ

ನಿನ್ನ ಮದುವೆಯ ಸುದ್ಧಿ ತಿಳಿದಾಗ.............

ತಡೆಯಲಾರದೆ ಹೋದೆ ನಿನ್ನ ನೆನಪುಗಳ

ಕಣ್ಣೀರು ಹರಿಸಿದ್ದೆ ನೀ ಬಿಟ್ಟು ಹೊರಟಾಗ......



ಬೇಡ ಬೇಡವೆಂದರೂ ನೆನಪಾಗುವೆಯಲ್ಲ

ಮನಸಿಗೆ ಹೇಗೆ ಹಾಕಲಿ ಕಡಿವಾಣ.......?

ನೆಮ್ಮದಿ ಇಲ್ಲವಾಗಿದೆ ಜೀವಕೆ

ಎಂದಿಗೂ ಇಲ್ಲವೇ ನೆನಪುಗಳಿಗೆ ಮರಣ........?




10 comments:

  1. ಯಾವ ಹೂವು ಯಾರ ಮುಡಿಗೋ ,ಯಾರ ಒಲವು ಯಾರ ಕಡೆಗೋ !

    ReplyDelete
  2. ಪ್ರೀತಿಯ ನೆನಪುಗಳು ಅಷ್ಟು ಬೇಗ ಅಳಿಸಿಹೋಗುವುದಿಲ್ಲ. ಕಾಡುತ್ತಲೇ ಇರುತ್ತದೆ. ನಿಮ್ಮ ಕವನದಲ್ಲಿ ಆ ಅಭಿವ್ಯಕ್ತಿ ಸುಂದರವಾಗಿ ಬಂದಿದೆ. ಧನ್ಯವಾದ

    ReplyDelete
  3. ಯಾಕ್ರೀ ಮುಖೇಶನ ಗೀತೆ ಬರೆದಿದ್ದೀರಿ? ಚೆನ್ನಾಗಿದೆ ಅಂತ ಸುಮ್ಮನಿದ್ದೇನೆ, sad song ಬರೀಬೇಕಾ ನೀವು? ಅಲ್ಲೇ ಪಕ್ಕ ಇದ್ದಾರಲ್ಲ ಮತ್ತೆ ಬೆಕ್ಕಿನ ಥರ ಮುಸಿ ಮುಸಿ ಮುಚ್ಚಿ ಅಳುವುದೇಕೆ ?

    ReplyDelete
  4. ನಿಜ ಡಾಕ್ಟ್ರೆ, ಯಾವ ಹೂವು ಯಾರ ಮುಡಿಗೋ?
    ನಾವು ಬಯಸಿದ್ದು ನಮಗೆ ಸಿಗುವುದು ತುಂಬಾ ಕಡಿಮೆ ಅಲ್ವಾ? ನಾವು ಬಯಸಿದ್ದೆಲ್ಲಾ ಸಿಗುವುದಾಗಿದ್ದರೆ ಮನುಷ್ಯ ದೇವರಾಗ್ತಿದ್ದ!
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಪ್ರೀತಿಯ ಸುಬ್ರಮಣ್ಯ ಅವ್ರೆ,
    ಪ್ರೀತಿಯ ಅನುಭವಗಳು ಅದರಲ್ಲೂ ಮೊದಲ ಪ್ರೀತಿಯ ಅನುಭವ ಜೀವನ ಪರ್ಯಂತ ಮರೆಯಲು ಆಗದು.
    ನೆನಪಾಗಿ ಕಾಡುತ್ತಲೇ ಇರುತ್ತವೆ. ನಾವೆಷ್ಟೇ ವೇಗವಾಗಿ ಓಡಿದರೂ ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತವೆ.

    ಚಂದದ ಪ್ರತಿಕ್ರಿಯೆಗೆ ಚಿರಋಣಿ.

    ReplyDelete
  6. ರೀ ಭಟ್ರೇ, ಪಕ್ಕದಲ್ಲಿ ಯಾರೇ ಇದ್ರೂ ಮೊದಲ ಪ್ರೀತಿ ಕಾಡುತ್ತಲೇ ಇದೆ ಸ್ವಾಮೀ. ಎರೆಡು ವರ್ಷದ ಪ್ರೀತಿಯನ್ನು ಮರೆಯೋಕೆ ಇನ್ನೊಂದು ಜನ್ಮದಲ್ಲೂ ಸಾಧ್ಯವಿಲ್ಲವೇನೋ!
    "ಪ್ರಥಮ ಪ್ರೆಮಂ ಹೃದಯ ಭಗ್ನಂ" ಕತೆ ಇದು!
    ನನ್ನ ಮೊದಲ ಪ್ರೀತಿಯ ಅನುಭವ ಸದ್ಯದಲ್ಲೇ ಕಥೆಯಾಗಿ ಬರಲಿದೆ!
    ನಿಮ್ಮ ಪ್ರತಿಕ್ರಿಯೆಗೆ ದನ್ಯವಾದಗಳು.

    ReplyDelete
  7. ಮರೆಯಲಾಗದ ಭಗ್ನ ಪ್ರೇಮದ ಸುತ್ತಲಿನ ಕವನ ಚೆ೦ದವಿದೆ.

    ReplyDelete
  8. manassige tumbaa kaaditu kavana.......... tumbaa chennaagide. sarala shabdagala novina bhandaara........

    ReplyDelete
  9. ದಿನಕರ್ sir,
    ಭಗ್ನ ಪ್ರೇಮದ ನೋವು ಎಂದೆಂದಿಗೂ ಕಾಡದೆ ಬಿಡದು. ಅದರಲ್ಲೂ ಮೊದಲ ಪ್ರೇಮಾನುಭವ ಅಂದ್ರೆ ನೆನಪಾಗದೆ ಇರುತ್ತಾ?
    ದನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

    ReplyDelete