Thursday, July 28, 2011

ವಿಧಿ ವಿಲಾಸ.........

ಆಘಾತ!!!!
ಅನಿರೀಕ್ಷಿತ!!!!
ನಂಬಲೂ ಆಗದ ಆಘಾತ!!!!

ಅಲ್ಲದೆ ಮತ್ತೇನು? ಪಾದರಸದಂತೆ ಚುರುಕಾಗಿ ಓಡಾಡಿಕೊಂಡು ವ್ಯವಹಾರದ ಬಗ್ಗೆಯೇ ಸದಾ ಯೋಚಿಸುತ್ತಾ, ಐದು ನಿಮಿಷಕ್ಕೊಂದರಂತೆ ಸಿಗರೆಟ್ ಸುಟ್ಟು ಒಗೆಯುತ್ತಿದ್ದ ನಮ್ಮ ಬಾಸ್ ಇಂದು ಇಹ ಲೋಕ ತ್ಯಜಿಸಿದ್ದು ಯಾರಿಂದಲೂ ನಂಬಲು ಸಾಧ್ಯವಾಗುತ್ತಿಲ್ಲ!!!

ಅಂದು ನನ್ನ ಪಾಡಿಗೆ ದುರ್ದಿನ. ಸುಮಾರು ಮಧ್ಯಾಹ್ನ 12 ಘಂಟೆಯ ಸಮಯ. ಇತ್ತೀಚೆಗಷ್ಟೇ ತೆರೆದ ಹೊಸ ರೆಸ್ಟೋರೆಂಟಿನ ಕೆಲಸದಲ್ಲಿ ಬ್ಯುಸಿಯಾಗಿದ್ದ ನನಗೆ ಫೋನ್ ಮಾಡಿದರು ಬಾಸ್. ಇಂದು ನಾನು ಬರುವುದಿಲ್ಲ, ಸ್ವಲ್ಪ ರೆಸ್ಟ್ ತೆಗೆದುಕೊಳ್ಳುತ್ತೇನೆ, ಎಲ್ಲಾ ಕಡೆ ನೋಡಿಕೋ ಎಂದು ಹೇಳಿದ್ದರು, 15 ನಿಮಿಷದ ನಂತರ ಮ್ಯಾನೇಜರ್ ಫೋನ್ ಮಾಡಿ ' ಸರ್, ಅನಿಲ್ ಸರ್ ಗೆ ಹುಷಾರಿಲ್ಲ, ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದೇವೆ, ನೀವು ಬೇಗ ಬನ್ನಿ' ಎಂದ. ಅರ್ಧ ಗಂಟೆಯಲ್ಲೇ ಆಸ್ಪತ್ರೆ ತಲುಪಿ ನೋಡಿದರೆ ಸರ್ ನಾಲ್ಕು ಜನ ಡಾಕ್ಟರ್ ಮತ್ತು ಮಿಶಿನ್ನುಗಳ ಮಧ್ಯೆ ಮಲಗಿದ್ದರು.
ಹೊರ ಬಂದ ವೈಧ್ಯರು ಹೇಳಿದ್ದು ಕೇಳಿದಾಗಲೇ ಆಘಾತ! Brain Hemorrhage ಎಂಬ ಹೆಮ್ಮಾರಿಗೆ  ಬಲಿಯಾಗಿದ್ದರು ನಮ್ಮ ಮಾಲೀಕರು! ಮೆದುಳಿನಲ್ಲಿ ರಕ್ತ ಹರಿದು ಹೆಪ್ಪುಗಟ್ಟಿ ಇಡೀ ಮೆದುಳೇ ಕಪ್ಪಾಗಿ ಹೋಗಿದ್ದು CT Scan ರಿಪೋರ್ಟಿನಲ್ಲಿ ನೋಡಿ ಮಾತೇ ಹೊರಡಲಿಲ್ಲ.

Medanta Medicity ಆಸ್ಪತ್ರೆಯಲ್ಲಿ ನಾಲ್ಕು ದಿನ ಕೊಮಾ ದಲ್ಲಿದ್ದು ಐದನೇ ದಿನ ಹೊರ ಬಂದಿದ್ದು ನಿರ್ಜೀವವಾಗಿ. ಹೆಂಡತಿ ಮತ್ತು ಎಂಟು ವರ್ಷದ ಮಗಳ ಅಳು, ಗೋಳಾಟ ಹೃದಯ ವಿದ್ರಾವಕ ಸನ್ನಿವೇಶ. ಏನು ಹೇಳುವುದು? ಅವರಿಗೆ ಧೈರ್ಯ ಯಾವರೀತಿ ಹೇಳಬೇಕೆಂಬುದೇ ತಿಳಿಯದ ಪರಿಸ್ಥಿತಿ.

ನಮ್ಮ ಹತ್ತಿರದವರ ಸಾವು ನಮ್ಮನ್ನೆಷ್ಟು ತಲ್ಲಣಗೊಳಿಸುತ್ತದೆ ಎಂಬುದು ನನಗೆ ಅರಿವಾಗಿತ್ತು. ಆರು ವರ್ಷದಿಂದ ನಾನು ಅವರೊಂದಿಗಿದ್ದು ಕಲಿತಿದ್ದು, ಪಡೆದಿದ್ದು ಬಹಳ. ಎಂದೆಂದೂ ತೀರಿಸಲಾಗದ ಋಣ ನಾ ಹೊತ್ತಿದ್ದೇನೆ. ನನಗೆ ಗುರುವಾಗಿ, ಅಣ್ಣನಾಗಿ ತಿದ್ದಿ ತೀಡಿ ದೆಹಲಿಯಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊತ್ತವರು ನಮ್ಮ ಬಾಸ್.

ಊಟ ತಿಂಡಿ ನಿದ್ದೆ ಮರೆತು ನಾಲ್ಕು ದಿನವೂ ಆಸ್ಪತ್ರೆಯಲ್ಲೇ ಇದ್ದು ನೋಡಿಕೊಂಡೆವು. ಆದರೆ ಎಂದೂ ತಿರುಗಿ ಬಾರದ ಲೋಕಕ್ಕೆ ಹೊರಟು ಹೋದರು. ಶನಿವಾರ ಅವರು ಮರಣ ಹೊಂದಿದ ದಿನ. ವಿಪರ್ಯಾಸ ಅಂದರೆ ಅಂದೇ ಅವರ ಜನ್ಮ ದಿನ ಕೂಡಾ! ಸರಿಯಾಗಿ ನಲವತ್ತ ನಾಲ್ಕು ವಸಂತಗಳನ್ನು ಪೂರೈಸಿ ಈ ಲೋಕದ ಜಂಜಡಗಳಿಂದ ಮುಕ್ತಿ ಪಡೆದರು.

ಆ ದಿನ ಅವರ ಕಳೆಬರದ ಮುಂದೇ ಶೋಕತಪ್ತರಾಗಿ ಕುಳಿತಿದ್ದಾಗ ನನಗೆ ವಿಪರೀತ ಹಸಿವು! ಒಮ್ಮೆ ಪ್ರಕಾಶಣ್ಣನ ಬ್ಲಾಗಿನಲ್ಲಿ ಸಾವಿನಲ್ಲಿ ಹಸಿವಾದರೆ ಆಗುವ ಕಷ್ಟ ಏನೆಂದು ಓದಿದ್ದೆ. ಆದರೆ ಅಂದು ನನಗೆ ಆ ಸತ್ಯದ ಅರಿವಾಗಿತ್ತು. ನಾಲ್ಕು ದಿನ ಉಪವಾಸ ಇದ್ದರೂ ಒಮ್ಮೆಯೂ ಕೂಡ ಹಸಿವಾಗಲಿಲ್ಲ ಆದರೆ ಆ ಸಮಯದಲ್ಲಿ ಮಾತ್ರ ಹಸಿವನ್ನು ತಡೆದುಕೊಳ್ಳಲು ಆಗುತ್ತಿರಲಿಲ್ಲ. ಪ್ರಕಾಶಣ್ಣ ಹೇಳುವಂತೆ ಅತೀ ಕಷ್ಟದ ಸಮಯವೆಂದರೆ ಇದೇ!

ಈಗ ಉಳಿದಿರುವುದು ಅವರ ನೆನಪು, ಅವರು ಬಿಟ್ಟು ಹೋದ ವ್ಯವಹಾರ. ಜೊತೆಗೆ ಹಲವಾರು ನಿಗೂಡ ಪ್ರಶ್ನೆಗಳನ್ನು ಮಾತ್ರ. ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂಬುದೊಂದೇ ನಮ್ಮೆಲ್ಲರ ಹಾರೈಕೆ...........


16 comments:

  1. This is very sad praveen..
    Hope his soul rest in peace.

    unfortunately recently nan colleague obba ide Brain Hemorrhage ge baliyaada...
    http://mookasmita.blogspot.com/2011/06/blog-post_13.html

    ReplyDelete
  2. Avara aatmakke shaanti koruvalli naanu nimmodane seruttene...

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com/

    ReplyDelete
  3. ಪ್ರವೀಣ,
    ಅರ್ಧ ವರ್ಷ ಪೂರ್ತಿ ಕಾಣೆಯಾಗಿದ್ದಿರಿ. ಇದೀಗ ನಿಮ್ಮ ವ್ಯಥೆಯ ಲೇಖನ ಓದಿ, ನನಗೂ ದುಃಖವಾಯಿತು. Well,ಬದುಕು ನಮ್ಮ ಕೈಯಲ್ಲಿದೆಯೆ?

    ReplyDelete
  4. So sad !! let his soul rest in peace...

    ReplyDelete
  5. May the soul rest in peace. touching write up praveen!!
    malathi S

    ReplyDelete
  6. ಪ್ರವೀಣು..

    ನೀವು ಮಾತಾನಾಡುವಾಗಲೆಲ್ಲ ನಿಮ್ಮ ಬಾಸ್ ಒಳ್ಳೆಯತನದ ಬಗೆಗೆ ಮಾತನಾಡುತ್ತಿದ್ದೀರಿ...
    ಒಳ್ಳೆಯವರೆಂದರೆ ದೇವರಿಗೂ ಪ್ರೀತಿ ಅನ್ನಿಸುತ್ತದೆ...
    ಬೇಗನೆ ಕರೆಸಿಕೊಂಡು ಬಿಟ್ಟ..

    ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ..

    ಬದುಕಿರುವ ನಮಗೆ ಹಸಿವೆಯಾಗುತ್ತದೆ..
    ಹಸಿವೆಗೋಸ್ಕರ ದುಡಿಯಲೇ ಬೇಕು..
    ಕೆಲಸದಲ್ಲಿ ತೊಡಗಿ ನಿಮ್ಮ ದುಃಖವನ್ನು ಕಡಿಮೆ ಮಾಡಿಕೊಳ್ಳಿ..

    ಕಾಲ ಎಲ್ಲವನ್ನೂ ಮರೆಸುತ್ತದೆ..

    ReplyDelete
  7. May the soul rest in peace. - shama, nandibetta

    ReplyDelete
  8. ವಿಧಿವಿಲಾಸ ಯಾರಿಗೂ ತಿಳಿಯುವುದಿಲ್ಲ. ಅದೇ ರೀತಿ ಪ್ರತಿಯೊಬ್ಬ ಬರಹಗಾರನೂ ಅದಕ್ಕೆ ಹೊರತಲ್ಲ, ಕೆಲವರಿಗೆ ಬರೆಯಲು ಸಮಯವಿಲ್ಲ, ಇನ್ನು ಕೆಲವರಿಗೆ ವಿಷಯವಿಲ್ಲ, ಮತ್ತೆ ಕೆಲವರಿಗೆ ಪರಿಸ್ಥಿತಿ ಸರಿ ಇರುವುದಿಲ್ಲ--ಹೀಗೇ ನಿಮಗೂ ಬರೆಯದಿದ್ದುದಕ್ಕೆ ಕಾರಣ ಅರ್ಥವಾಯ್ತು. ಲೇಖನ ಕರುಳು ಹಿಂಡಿತು. ಜೀವನದಲ್ಲಿ ಒಂದಿಲ್ಲೊಂದು ದಿನ ಸಾವು ಅನಿವಾರ್ಯ, ಆದರೆ ಹೀಗೆ ನಡುವಯಸ್ಸಿನಲ್ಲಿ ನಂಬಿದವರನ್ನು ಬಿಟ್ಟುಹೋಗಬೇಕಾದ ಸ್ಥಿತಿ ಬಂದರೆ ಕುಟುಂಬದ ಕಥೆ ಏನು ? ಹಿಂದೆಲ್ಲಾ ಪಾಲಕರೋ ಅಣ್ಣ-ತಮ್ಮಂದಿರೋ ನೋಡಿಕೊಳ್ಳುತ್ತಿದ್ದರು, ಈಗ ಅವರವರ ಪಾಡೇ ಅವರವರಿಗೆ ಅನ್ನೋ ಹಾಗಾಗಿದೆ, ಅಂಥದ್ದರಲ್ಲಿ ಯಜಮಾನರ ಕುಟುಂಬದ ಕಥೆ ಏನು ? ಎನ್ನುವುದು ತಲೆತಿನ್ನುವ ಬೇಸರಕ್ಕೆ ಕಾರಣವಾಗುತ್ತದೆ. ಏನೂ ಇರಲಿ ಅವರಿಗೆ ದೇವರು ಯಾವುದೋ ರೂಪದಲ್ಲಿ ಸಹಾಯಮಾಡಲಿ ಎಂದು ಪ್ರಾರ್ಥಿಸುತ್ತೇನೆ.

    ReplyDelete
  9. ಪ್ರವೀಣ್ ನಿನ್ನ ಈ ನೋವಿನ ಘಳಿಗೆಯಲ್ಲಿ ನನ್ನ ಸಾಂತ್ವನ ಕೇವಲ ಎರಡು ಹನಿ ಬರಡು ನೆಲಕ್ಕೆ ಅಷ್ಟೇ....ನಿಮ್ಮೆಲ್ಲರ ಶೋಕದಲ್ಲಿ ನಾವೂ ಭಾಗಿ. ನಿಮಗೆ ಮತ್ತು ಮೃತರ ಕುಟುಂಬಕ್ಕೆ ದೇವರು ಸಾಂತ್ವನ ನೀಡಲಿ ಎಂದು ನಮ್ಮ ಪ್ರಾರ್ಥನೆ.

    ReplyDelete
  10. ಪ್ರವೀಣ್,
    ತುಂಬಾ ದಿನಗಳ ಮೇಲೆ ಒಂದು ಮನಕಲಕುವ ಲೇಖನವನ್ನು ಬರೆದಿದ್ದೀರಿ. ನಿಮ್ಮ ಬಾಸ್ ಸಾವಿನ ವಿಚಾರವನ್ನು ಓದಿ ಮನಸ್ಸಿಗೆ ಬೇಸರವಾಯಿತು. ಬೆಂಗಳೂರಿನಲ್ಲಿ ಬೇಟಿಯಾಗೋಣ.

    ReplyDelete
  11. So Sad, May the soul rest in peace.

    ReplyDelete
  12. ಪ್ರವೀಣ್ - ನಿಮ್ಮ ತಾಣಕ್ಕೆ ಬ೦ದು ಬಹಳ ದಿನಗಳಾಗಿದ್ದವು. ಹೃದಯ ವಿದ್ರಾವಕ ಘಟನೆಯನ್ನು ಪ್ರಸ್ತುತಿಸಿದ್ದೀರಿ. ದು:ಖಿತ ಕುಟು೦ಬಕ್ಕೆ ಸಾ೦ತ್ವನವನ್ನು ಮಾತ್ರ ನಾವು ಕೊಡಬಲ್ಲೆವು ಅಷ್ಟೇ ಅಲ್ಲವೆ?

    ಅನ೦ತ್

    ReplyDelete
  13. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬುವ ಹಾರೈಕೆಯೊಂದೇ ನಮ್ಮಿಂದ ಸಾಧ್ಯ.ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು,

    ReplyDelete
  14. praveen sir agalikeya
    novu anubhavavaadaagale arivaaguvudu,
    nimma novige kalave parihaara niduvudu.

    ReplyDelete
  15. ಪ್ರವೀಣ್ ಅವರೇ..

    ತುಂಬಾ ದಿನಗಳ ನಂತರ ಕಾಣಿಸಿಕೊಂಡಿರಿ ಅಂದುಕೊಂಡು ಇಲ್ಲಿಗೆ ಬಂದೇ. ನಿಮ್ಮ ಲೇಖನ ಓದಿ ಮನಸ್ಸಿಗೆ ನೋವಾಯಿತು. ನಾವು ಏನೇ ಮಾತಿನ ಸಮಾಧಾನ ಹೇಳಿದರೂ, ಆಘಾತಕ್ಕೊಳಗಾಗಿರುವ ಮನಸ್ಸುಗಳು ಮತ್ತೆ ದೈನಂದಿನ ಚಟುವಟಿಕೆಗೆ ಬರಲು ಸ್ವಲ್ಪ ಸಮಯ ಬೇಕಾಗುತ್ತದೆ. ನಿಮ್ಮಂತಹ ಸಹೃದಯರ ಸ್ನೇಹದ ಬೆಂಬಲ ನೊಂದ ಜೀವಗಳಿಗೆ ಅಧಾರವಾಗುತ್ತದೆಂಬ ನಂಬಿಕೆ ನನಗಿದೆ. ದುಃಖಿತ ಕುಟುಂಬದವರಿಗೆ ಶಕ್ತಿ ಕೊಡುವಂತೆ ಪ್ರಾರ್ಥಿಸುತ್ತೇನೆ.

    ಶ್ಯಾಮಲ

    ReplyDelete
  16. Hmmm it must be a huge shift for you!
    Hope things fall in place soon for all of you...

    ReplyDelete