Tuesday, September 27, 2011

ಇದೇ ರೀತಿ.....


ಪ್ರಕಾಶಣ್ಣ ಬರೆದ ರೀತಿ........  ಮತ್ತು ಅದನ್ನು ಮುಂದುವರೆಸಿ ದಿನಕರ್ ಸರ್ ಬರೆದ ಈ ರೀತಿ........  ಕಥೆಯನ್ನು ನಾನು ಮುಂದುವರೆಸುವ ಒಂದು ಸಣ್ಣ ಅಧಿಕಪ್ರಸಂಗತನ ಮಾಡಿದ್ದೇನೆ :) 



 'ONE MESSAGE RECEIVED.............!!!!!'

ಯಾವುದೋ MESSAGE ಬಂದಿದೆ.
ಯಾರದಿರಬಹುದು?

ಏನೋ ಇದೆ, INBOX ಖಾಲಿ ಆಗಿದೆ, SENT MAIL ಖಾಲಿ ಇದೆ, CALL LOG ಲ್ಲಿ ಯಾವ CALL ಗಳ ಸುಳಿವಿಲ್ಲ! 
ಹಾಗಾದರೆ ಏನು ಇದರ ಅರ್ಥ? ಮನಸ್ಸು ಕಹಿಯನ್ನು ನೆನೆಯತೊಡಗಿತು. ಯೋಚಿಸುತ್ತಿದ್ದಂತೆಯೇ ಮತ್ತೊಮ್ಮೆ ಮೊಬೈಲ್ "ಟೀವ್.... ಟೀವ್......" ಎಂದು ಹಾಡಿತು.

ನೋಡುತ್ತಿದ್ದಂತೆ ಕಾತುರ ತಡೆಯಲಾಗಲಿಲ್ಲ! ಯಾರ MESSAGE ಇದು? ನಿನ್ನೆ ರಾತ್ರಿ, ಇಂದು ಬೆಳಿಗ್ಗೆ ಯಾರಿಗೋ  MESSAGE  ಕಳಿಸುತ್ತಿದ್ದರು, ಅವರದೇ ಇರಬಹುದೇ?
ತೆಗೆದು ನೋಡಿಬಿದಲೇ?
ಛೆ! ತಪ್ಪು! ಹಾಗೆಲ್ಲ ಅನುಮಾನ ಪಟ್ಟು ಇವರ ಮೊಬೈಲ್ ತೆಗೆದು ನೋಡಬಾರದು!
ಆದರೆ...........
ಕುತೂಹಲ............!

ಅದು ತಣಿಯಲಿಲ್ಲ...........! 
ಮನಸ್ಸು ಕೇಳಲಿಲ್ಲ..........!

ಏನಾದರೂ ಅಗಲಿ ನೋಡೇ ಬಿಡುವುದು. ಇಷ್ಟು ಬೇಗ ಸ್ನಾನ ಮುಗಿಸಿ ಬರಲಾರರು. ಎಂದು ಆಲೋಚಿಸುತ್ತ ನಡುಗುವ ಕೈಗಳಿಂದ ಮೊಬೈಲ್ ಎತ್ತಿಕೊಂಡೆ.

ಎದೆ ಡವಗುಟ್ಟುತ್ತಿತ್ತು!
ಎರಡು Massage  ಗಳು!
ತೆರೆಯುತ್ತಿದ್ದಂತೆಯೇ..................




ಮೊದಲನೆಯದು ಯಾವುದೊ ಜಾಹಿರಾತಿನ SMS ಆಗಿತ್ತು............!


ನೆಮ್ಮದಿಯ ನಿಟ್ಟುಸಿರೊಂದು ಹೊರಟಿತು.


ಆದರೆ ಅದು ಹೆಚ್ಚು ಹೊತ್ತು ಇರಲಿಲ್ಲ! 


ಎರಡನೆಯ SMS ನೋಡುತ್ತಿದ್ದಂತೆಯೇ ಶಾಕ್.........!

ಅಲ್ಲಿ ಕಂಡಿದ್ದೇನು? 

SWEET HEART........!

ಒಮ್ಮೆಲೇ ಗುಡುಗು ಸಿಡಿಲು ಬಿರುಗಾಳಿ ಬಡಿದ ಅನುಭವ!
ಕೋಪ ಇನ್ನೂ ಹೆಚ್ಚಾಯಿತು.  ಎಷ್ಟು ಧೈರ್ಯ ಇವರಿಗೆ? ನಾನು ಬಂದ ಮೇಲೂ ಮೊಬೈಲಿನಲ್ಲಿ ಈ ತರ ಹೆಸರು ಇಟ್ಟುಕೊಂಡಿದ್ದಾರಲ್ಲ . ಇವರಿಗೆ ಯಾವುದೇ ಭಯವಿಲ್ಲವೇ? 

ಯಾರು ಈ SWEET HEART, ಅವಳೇ ಇರಬಹುದೇ? ನನ್ನಲ್ಲಿ ಏನೂ ಇಲ್ಲ ಎಂದು ಹೇಳಿದ್ದರಲ್ಲ, ಹಾಗಾದರೆ ಇವರಿಗೂ ಅವಳಿಗೂ ಏನೋ ಸಂಬಂಧವಿದೆ. ನನಗೆ ತಿಳಿಯಲೇ ಇಲ್ಲ. ನಾನು ಮೋಸ ಹೋದೆ!

ಏನು MESSAGE ಕಳಿಸಿರಬಹುದು? ಕಣ್ಣೀರು ಕಣ್ಣ ತುದಿಯವರೆಗೂ ಬಂದಿತ್ತು, ಅಕ್ಷರಗಳು ಮಂಜಾಗಿ ಕಾಣುತ್ತಿವೆ, 

'OK DEAR, THEN SEE YOU IN OFFICE!'

ಕಣ್ಣೀರು ಒರೆಸಿಕೊಳ್ಳುತ್ತಾ MESSAGE DELETE ಮಾಡಿ ಪಟಪಟನೆ ಅವಳ ನಂಬರ್ ಬರೆದುಕೊಂಡು ಮೊಬೈಲನ್ನು ಯಥಾಸ್ಥಾನದಲ್ಲಿಟ್ಟು ಮಂಚದ ಮೇಲೆ ಬೋರಲಾಗಿ ಮಲಗಿಕೊಂಡೆ.

ಪತಿರಾಯ ಸ್ನಾನ ಮುಗಿಸಿ ಸಿಳ್ಳು ಹಾಕುತ್ತ ಕನ್ನಡಿಯ ಮುಂದೆ ಸಿಂಗರಿಸಿಕೊಳ್ಳುತ್ತಿದ್ದರು. ವಾರೆಗಣ್ಣಿನಿಂದ ಅವರನ್ನೇ ನೋಡುತ್ತಿದ್ದ ನನಗೆ ಕೋಪ ಉಕ್ಕಿ ಬರುತ್ತಿತ್ತು.

ಮೋಸಗಾರ..............!

ನಂಬಿ ಬಂದ ನನಗೆ ಮೋಸ ಮಾಡಿದರು..............!
ದುಃಖ ಉಮ್ಮಳಿಸಿ ಬರುತ್ತಿತ್ತು.

'ಸರಿ ಹಾಗಾದ್ರೆ, ಮದುವೆಯ ಗಡಿಬಿಡಿಯಲ್ಲಿ ಮೂರು ದಿನ OFFICEಗೇ ಹೋಗಲಿಲ್ಲ. ನಾನು OFFICE ಗೆ ಹೊರಡುತ್ತೇನೆ. ಬೇಗ ತಿಂಡಿ ತಂದು ಕೊಡ್ತೀಯ PLEASE...........'

ಕೇಳುವುದು ನೋಡು, ಇವರ ಮನೆ ಆಳು ನಾನು..............

ಇರಲಿ, ಇವತ್ತು ಎರಡರಲ್ಲಿ ಒಂದು ತೀರ್ಮಾನ ಆಗಲೇ ಬೇಕು, ನಾನೋ ಇಲ್ಲ ಅವಳೋ ಅಂತ............

ತಂದು ಕೊಟ್ಟ ತಿಂಡಿಯನ್ನು ಬಕಾಸುರನಂತೆ ತಿಂದು ಮುಗಿಸಿದರು.
ಹೊರಡುತ್ತಾ ಹೇಳಿದರು.............

'ಸಂಜೆ ಬೇಗ ಮನೆಗೆ ಬರುತ್ತೇನೆ, ಸಿನೆಮಾ ನೋಡಲು ಹೋಗೋಣ, ಆಗಬಹುದಾ?'

ಓಹ್ಹೋ..............

ಬೆಣ್ಣೆ ಹಚ್ಚುವ ಬುದ್ಧಿಯೂ ಇದೆ, ಇರಲಿ ಬನ್ನಿ, ಯಾವ ಸಿನೆಮಾ ಅಂತ ತೀರ್ಮಾನ ಆಗಿರುತ್ತದೆ.

ಹ್ಞೂಂ.............., ನಿಧಾನಕ್ಕೆ ಹ್ಞೂಂಗುಟ್ಟಿದೆ ನೋವನ್ನು ತೋರ್ಪಡಿಸದೆ.


ಈಗ ನಿಜವಾದ ಚಡಪಡಿಕೆ ಆರಂಭವಾಗಿತ್ತು, ಏನು ಮಾಡುವುದು? ನಾನು ಮೋಸ ಹೋದೆನಲ್ಲ, ಮದುವೆಯಾದ ಮೊದಲದಿನದಿಂದಲೇ ಅನುಮಾನಕ್ಕೆ ಎಡೆ ಮಾಡಿಕೊಟ್ಟರಲ್ಲ?

ನಮ್ಮಿಬ್ಬರನ್ನೇ ಬಿಟ್ಟು ಇವರ ಅಮ್ಮ ಮತ್ತು ಅಪ್ಪ ನಗರದ ಹೊರವಲಯದಲ್ಲಿರುವ GUEST HOUSE ನಲ್ಲಿ ಉಳಿದುಕೊಂಡಿದ್ದಾರೆ. ಅವರಿದ್ದಿದ್ದರೆ ಅವರನ್ನೇ ದಬಾಯಿಸಿ ಅವರ ಮಗನ ಲೀಲೆಗಳನ್ನು ತೋರಿಸುತ್ತಿದ್ದೆ. ಛೆ! ಏನು ಮಾಡಲಿ? ಏನಾದವು ನನ್ನ ಆದರ್ಶಗಳೆಲ್ಲ?

ಅಮ್ಮನಿಗೆ ಹೇಳಿಬಿಡಲೇ? 
ಉಪಯೋಗವಿಲ್ಲ, ಅಮ್ಮ ಏನು ಹೇಳಿಯಾಳು............

ಆದರೂ.........

ಅಮ್ಮನಿಗೆ ಹೇಳುವುದೇ ಸರಿ, ಅವಳೇ ಈ ಸಮಯದಲ್ಲಿ ನನಗೆ ಸ್ನೇಹಿತೆ.........

ಎಂದು ಯೋಚಿಸುತ್ತ ಅಮ್ಮನಿಗೆ PHONE ಮಾಡಿದೆ..........

"ಹಲೋ......."

ಅತ್ತ ಕಡೆಯಿಂದ ಅಮ್ಮನ ಧ್ವನಿ, 

"ಹಲೋ.........ಅಮ್ಮ ನಾನಮ್ಮ........"

ಅಮ್ಮನ ಸ್ವರ ಕೇಳುತ್ತಿದ್ದಂತೆಯೇ ಕಣ್ಣೀರ ಕಟ್ಟೆ ಒಡೆದಿತ್ತು, ಬಿಕ್ಕಿ ಬಿಕ್ಕಿ ಅಳುತ್ತಿದ್ದ ನನ್ನ ಧ್ವನಿ ಕೇಳಿ ಅಮ್ಮ ಗಾಭಾರಿಯಾಗಿದ್ದಳು, 

"ಯಾಕೆ ಮಗಳೇ ಅಳುತ್ತಿದ್ದೀಯಾ? ಏನಾಯ್ತು ಕಂದಾ?"

"ಅಮ್ಮ..............."

ಮಾತೇ ಹೊರಡುತ್ತಿಲ್ಲ!

"ಯಾಕೆ ಮಗಳೇ, ಏನಾಯ್ತೆ, ಅಲ್ಲಿ ಯಾರಾದ್ರೂ ಏನಾದ್ರೂ ಅಂದ್ರಾ?"

"ಇಲ್ಲಮ್ಮ, ಯಾಕೋ ನಿನ್ನ ನೆನಪಾಯ್ತು ಅದಕ್ಕೆ PHONE ಮಾಡಿದೆ"

"ಯಾಕೆ ಮಗಳೇ ಸುಳ್ಳು ಹೇಳ್ತೀಯ, ನಿನ್ನ ಹೆತ್ತಮ್ಮ ನಾನು, ಒಮ್ಮೆಯೂ ನೀನು ಅತ್ತ ನೆನಪಿಲ್ಲ. ಈಗ ಯಾಕೆ? ಏನಾಯ್ತು ಅಂತ ಹೇಳು"

ಅಮ್ಮನ ಪ್ರೀತಿಯ ಮಾತಿಗೆ ಕರಗಿ ಹೋದೆ, ಈ ಪ್ರೀತಿಯನ್ನು ನಾನೆಂದೂ ಅರ್ಥ ಮಾಡಿಕೊಳ್ಳಲಿಲ್ಲ, ನನ್ನ ಹಠ ಪ್ರೀತಿಯ ಅಪ್ಪ ಅಮ್ಮನನ್ನು ಅರ್ಥ ಮಾಡಿಕೊಳ್ಳಲೇ ಬಿಡಲಿಲ್ಲ! ಛೆ! ಎಂತಹ ಪಾಪಿಷ್ಟೆ ನಾನು?

ಅಮ್ಮನಿಗೆ ನಡೆದ ಎಲ್ಲಾ ಸಂಗತಿಗಳನ್ನೂ ವಿವರಿಸಿದೆ...........

"ನೋಡು ಮಗಳೇ, ನಿನ್ನಷ್ಟು ಓದಿಕೊಂಡ ವಿಧ್ಯಾವಂತೆ, ಬುದ್ಧಿವಂತೆ ನಾನಲ್ಲ. ಆದರೆ ಜೀವನದ ಎಲ್ಲ ಆಗುಹೋಗುಗಳನ್ನೂ ಅನುಭವಿಸಿದ್ದೇನೆ. ಆ ಅನುಭವದಲ್ಲೇ ಒಂದೆರೆಡು ಮಾತು ಹೇಳ್ತೇನೆ ಕೇಳು, ನಿನಗೆ ಮದುವೆಯಾಗಿ ಎರಡನೆಯ ದಿನ. ಇಷ್ಟು ಬೇಗ ಗಂಡನ ಜೊತೆ ಮುನಿಸು ಕಟ್ಟಿಕೊಳ್ಳಬೇಡ. ಗಂಡು ಯಾವತ್ತಿದ್ದರೂ ಗಂಡಸೇ, ಹೊರಗೆ ದುಡಿಯುವ ಅವರಿಗೆ ಎಲ್ಲರೊಂದಿಗೂ ಒಡನಾಟ ಬೇಕು. ಇಷ್ಟಕ್ಕೂ ನೀನು ಏನು ನೋಡಿದೆ ಅಂತ ಅಷ್ಟು ಅನುಮಾನ ಪಡ್ತೀಯ? ಕೇವಲ MESSAGE ನೋಡಿದ ಮಾತ್ರಕ್ಕೆ ಅಲ್ಲಿ ಏನೋ ನಡೆಯುತ್ತಿರಬಹುದೆಂದು ಅನುಮಾನ ಪಡುವುದು ಸರಿಯಲ್ಲ. ಮೊದಲು ನೀನು ನೋಡಿದ್ದನ್ನು ಪ್ರರೀಕ್ಷಿಸಿ ನೋಡು. ಒಂದು ವೇಳೆ ನಿಜವೇ ಆಗಿದ್ದಲ್ಲಿ ನಿನಗದು ಪರೀಕ್ಷೆಯ ಕಾಲ. ಗಂಡನ ಪ್ರೀತಿಯನ್ನು ಗೆಲ್ಲು. ಹೆಂಗಸರಾದ ನಾವು ಸಹನೆ ತಾಳ್ಮೆಯಿಂದ ವರ್ತಿಸಬೇಕು.

ಗಂಡನಾದವನಿಗೆ ಮನೆಯಲ್ಲಿ ಪ್ರೀತಿ ಸಿಗಲಿಲ್ಲ ಅಂದರೆ ಆ ಪ್ರೀತಿಯನ್ನು ಹೊರಗೆ ಹುಡುಕುವ ಮನಸ್ಸು ಮಾಡುತ್ತಾನೆ. 

ಅದಕ್ಕೆ ಎಂದಿಗೂ ನಿನ್ನ ಕಯ್ಯಾರೆ ಅವಕಾಶ ಕೊಡಬೇಡ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಒಮ್ಮೆ ಚನ್ನಾಗಿ ಯೋಚಿಸು."

"ಹಾಗೆ ಆಗ್ಲಮ್ಮಾ" ಎಂದಷ್ಟೇ ಹೇಳಿ PHONE ಇಟ್ಟೆ.

ಅಮ್ಮನ ಮಾತುಗಳೇ ನನ್ನ ತಲೆಯಲ್ಲಿ ಕೊರೆಯುತ್ತಿದ್ದವು.

ಹೌದು............

ನಾನು ತಪ್ಪು ಮಾಡಿದೆ, ಅನುಮಾನ ಒಳ್ಳೆಯದಲ್ಲ. 
ಹಾಲಿನಂತ ಸಂಸಾರದಲ್ಲಿ ಹುಳಿ ಹಿಂಡುವುದು ಈ ಅನುಮಾನ
ಚಂದದ ಪ್ರೇಮಿಗಳು ಬೆರಾಗುವುದಕ್ಕೆ ಕಾರಣ ಈ ಅನುಮಾನ
ಹೆಚ್ಚು ಯಾಕೆ, ಸೀತೆಯ ಅಗ್ನಿಪರೀಕ್ಷೆಗೂ ಕಾರಣ ಈ ಅನುಮಾನವೇ ಅಲ್ಲವೇ?

ನನ್ನ ಮನಸ್ಸಿನಲ್ಲಿ ಮೂಡಿದ ಅನುಮಾನವನ್ನು ನಾನೇ ಪರಿಹರಿಸಿಕೊಳ್ಳಬೇಕು 

ಆದರೆ ಹೇಗೆ?

ಬೆಳಗ್ಗಿನ ತಿಂಡಿ ಮುಗಿಸಿ ಟೀವಿ ನೋಡುತ್ತಾ ಕುಳಿತಿದ್ದೆ.........
ಮನೆಯಲ್ಲಿ ಏನೂ ಕೆಲಸವಿರಲಿಲ್ಲ. ಯಾಂತ್ರಿಕವಾಗಿ ಟೀವಿ ನೋಡುತ್ತಾ ಆಲೋಚನೆಯಲ್ಲಿ ಮುಳುಗಿ ಹೋದೆ.

ಟ್ರಿಣ್ ಟ್ರಿಣ್........
ಟ್ರಿಣ್ ಟ್ರಿಣ್..........

ಮನೆಯ PHONE ಒಂದೇ ಸಮನೆ ಬಡಿದುಕೊಳ್ಳುತ್ತಿತ್ತು.
ಅತ್ತ ಕಡೆಯಿಂದ ಅವರ ಧ್ವನಿ,

"ಪುಟ್ಟಣ್ಣಿ........., ಯಾಕೆ ನಿನ್ನ ಮೊಬೈಲ್ ಎತ್ತುತ್ತಿಲ್ಲ? ಅಡುಗೆ ಮನೆಯಲ್ಲಿದ್ಯಾ?"

ಹೆಂಗಸರೆಂದರೆ ಅಡುಗೆ ಮನೆಗೆ ಮಾತ್ರ ಸೀಮಿತವೇ?
"ಹ್ಞಾಂ.........ಹೌದು............"

ಮಾತಾಡುವ ಮನಸ್ಸಿಲ್ಲದೆ ಸಮಯಕ್ಕೊಂದು ಸುಳ್ಳು ಹೇಳಿದೆ. 

"ಏನಿಲ್ಲ, ನಾನು ಊಟಕ್ಕೆ ಮನೆಗೆ ಬರ್ತೇನೆ, ಜೊತೆಗೆ ನನ್ನ SWEET HEART ಕೂಡ ಬರ್ತಾ ಇದ್ದಾಳೆ"

ಇವರಿಗೆ ತಲೆ ಸರಿ ಇಲ್ವಾ?
ಎಷ್ಟು ಧೈರ್ಯ?

ನನ್ನ ಎದುರಿಗೇ ಅವರ SWEET HEART ಅನ್ನೋ ಹೆಸರು? ಆ ಹಾಳಾದವಳು ಬೇರೆ ಬರಬೇಕಾ? SWEET HEART ಅಂತೆ SWEET HEART.......!

"ಹಾಗೆ ಅಪ್ಪ ಕೂಡ ಬರ್ತಾ ಇದ್ದಾರೆ........... "

ಅಂದರೆ.........
ಓ ದೇವರೇ,

ಇದೆಂತ ಸಂಸಾರವಪ್ಪ, ಇವರ ಅಪ್ಪನಿಗೆ ಗೊತ್ತಿದ್ದೂ ನನ್ನ ಜೀವನ ಹಾಳುಗೆಡವಿದರೆ????

"ಹಲೋ, ಕೇಳಿಸ್ತಾ? ನೀನು ಊಟಕ್ಕೆ ಏನಾದರೂ ಅಡುಗೆ ಮಾಡು, ಅಪ್ಪನಿಗೆ ಕೆಲಸದವರ ಅಡುಗೆ ಹಿಡಿಸುವುದಿಲ್ಲ. ಆಯ್ತಾ, ಇಡ್ತೇನೆ. ಮಧ್ಯಾಹ್ನ ಸಿಗ್ತೇನೆ, ಬೈ ಬೈ............"

ಇಷ್ಟು ಕೆಲಸದವರಿದ್ದೂ ನಾನೇ ಅಡುಗೆ ಮಾಡಬೇಕಂತೆ, ಯಾಕೆ ಇವರಿಗೆ ಕೆಲಸದವರು ಮಾಡಿದ ಅಡುಗೆ ಗಂಟಲ ಕೆಳಗೆ ಇಳಿಯುವುದಿಲ್ಲವೇ?

ಇರಲಿ, ಎಲ್ಲರೂ ಬರಲಿ, ಮಾವನವರ ಮುಂದೆಯೇ ತೀರ್ಮಾನವಾಗಲಿ, ನಾನು ಇನ್ನು ಈ ಮನೆಯಲ್ಲಿ ಇರಲಾರೆ. ಅಮ್ಮನ ಮನೆಗೆ ಹೋಗುತ್ತೇನೆ. ನನ್ನ ಕಾಲಮೇಲೆ ನಾನು ನಿಂತುಕೊಳ್ಳುತ್ತೇನೆ.

ನನಗೆ ಆಲೋಚನೆ ಶುರುವಾಯ್ತು. ಹೇಗಿರಬಹುದು ಮಿಟುಕಲಾಡಿ, ನನಗಿಂತಾ ಚನ್ನಾಗಿದ್ದಾಳ? ಮದುವೆಗೂ ಮೊದಲೇ ಹೇಳಬಹುದಿತ್ತಲ್ಲಾ? ನನ್ನನ್ನು ಮದುವೆಯಾಗಿ ನನ್ನ ಜೀವನ ಯಾಕೆ ಹಾಳು ಮಾಡಿದರು?

ಅಡುಗೆಯ ಕೆಲಸವನ್ನೆಲ್ಲಾ ಮುಗಿಸಿ ಬರುವಷ್ಟರಲ್ಲಿ ಕರೆಗಂಟೆ ಶಬ್ದ ಮಾಡಿತು, 
ಅವರೇ ಇರಬೇಕು. ನನಗೆ ಕುತೂಹಲ ತಡೆಯಲಾಗಲಿಲ್ಲ, ಹೇಗಿರಬಹುದು ಅವಳು? 

"ರಾಮೂ....... ಯಾರು ನೋಡು?" ಕುತೂಹಲವನ್ನು ತಡೆದುಕೊಂಡು ಕೆಲಸದವನಿಗೆ ಹೇಳಿದೆ............

ಬಾಗಿಲಲ್ಲಿ ನಗುಮುಖದ ಸುಂದರಾಂಗ ನಿಂತಿದ್ದರು!

ಅವರ ಆ SWEET HEART ಗಾಗಿ ಕಣ್ಣಾಡಿಸಿದೆ, ಮಾವಯ್ಯ ಕಾರಿನಿಂದ ಇಳಿಯುತ್ತಿದ್ದರು,

ಅವರ ಜೊತೆಗೆ...........

ಹಿಂದಿನಿದ ಬಂಗಾರದ ಬಣ್ಣದ ರೇಷ್ಮೆ ಸೀರೆ ಉಟ್ಟ ಮಹಾ ಲಕ್ಷ್ಮಿಯಂತೆ ಅತ್ತೆ ನಡೆದು ಬರುತ್ತಿದ್ದರು!

ದಾರಿಯುದ್ದಕ್ಕೂ ಕಣ್ಣರಳಿಸಿ ನೋಡಿದೆ ಬೇರಾರೂ ಕಾಣಲಿಲ್ಲ..............!

ಎಲ್ಲಿ ಇವರ SWEET HEART? ಬರಲಿಲ್ಲವೇ?
ಅಥವಾ ಹಿಂದಿನಿಂದ ಬರುತ್ತಿದ್ದಾಳೆಯೇ?

ಎಲ್ಲರೂ ಕೈ ಕಾಲು ಮುಖ ತೊಳೆದುಕೊಂಡು ಊಟಕ್ಕೆ ಕುಳಿತರು.

"ನೀನ್ಯಾಕೆ ನಿಂತಿದ್ದೀಯಮ್ಮ, ಬಾ ಕುಳಿತುಕೋ, ಕೆಲಸದವರು ಬಡಿಸುತ್ತಾರೆ" ಅತ್ತೆ ಪ್ರೀತಿಯಿಂದ ಕರೆದರು.

"ಇಲ್ಲ ನೀವು ಊಟ ಮಾಡಿ, ಇವರ ಸ್ನೇಹಿತೆ ಬರ್ತಾರಲ್ಲ, ನಾನು ಅವರ ಜೊತೆ ಊಟ ಮಾಡುತ್ತೇನೆ" 

"ನನ್ನ ಸ್ನೇಹಿತೆಯಾ? ಯಾರು?"

ಇದೇನಿದು? ಹೀಗೆ ಕೇಳ್ತಾ ಇದ್ದಾರೆ? ಅಮ್ಮ ಬಂದಿದ್ದಾರೆ ಅಂತ ರಾಯರು ಮಾತು ಬದಲಿಸಿದರೋ ಹೇಗೆ? ಹಾಗಾದ್ರೆ ಈಗಲೇ ಹೇಳಿಬಿಡಬೇಕು.

"ಅದೇ............

ನಿಮ್ಮ SWEET HEART ಬರ್ತಾರೆ ಅಂದಿದ್ರಲ್ಲ?" 

SWEET HEART ಅನ್ನುವುದನ್ನು ಒತ್ತಿ ಹೇಳಿದೆ.

"ನನ್ನ SWEET  HEART  ಇಲ್ಲೇ ಇದ್ದಾರಲ್ಲ?" 

 ಬಿಟ್ಟ ಬಾಯಿ ಬಿಟ್ಟಂತೆಯೇ ಇತ್ತು..............
ಮಾತೇ ಹೊರಡಲಿಲ್ಲ..............
ಅಘಾತದಿಂದ ಹೊರಬರಲು ಕೆಲವು ಕಾಲವೇ ಬೇಕಾಯಿತು.................!

"ಈಗ ಬಂದೆ, ಕೈ ಕಾಲು ತೊಳೆದು ಬರುತ್ತೇನೆ" ಎಂದಷ್ಟೇ ಹೇಳಿ ಓಡುವ ನಡಿಗೆಯಲ್ಲಿ ರೂಮಿಗೆ ಬಂದು ದಪ್ಪನೆ ಬಿದ್ದೆ..........

ಕಣ್ಣೇರು ಕೋಡಿಯಾಗಿ ಹರಿಯುತ್ತಿತ್ತು.

"ಯಾಕೆ ಪುಟ್ಟಣ್ಣಿ........... ಏನಾಯ್ತು?"
ನನ್ನವರು ನನ್ನ ಹಿಂದೆಯೇ ಬಂದಿದ್ದರು.......

ತಿರುಗಿ ನೋಡಿದೆ, ಮಹಾಪುರುಷ ಶ್ರೀರಾಮನಂತೆ ದಿವ್ಯರೂಪನಾಗಿ ನಿಂತಿದ್ದರು. 

ಓಡಿ ಹೋಗಿ ತಬ್ಬಿಕೊಂಡೆ, ಮನದಲ್ಲಿ ಮೂಡಿದ ಅನುಮಾನವೆಂಬ ವಿಷ ಕಣ್ಣೀರಾಗಿ ಕರಗಿ ಬೀಳುತ್ತಿತ್ತು.

"ರೀ, ನನ್ನ ಕ್ಷಮಿಸ್ತೀರಾ?"

ಕಷ್ಟಪಟ್ಟು ನನ್ನ ಬಾಯಿಂದ ಹೊರಟಿದ್ದು ಇಷ್ಟೇ!

"ಅಯ್ಯೋ ಹುಚ್ಚಿ, ಯಾಕೆ ಹೀಗೆ ಮಗು ತರ ಆಡ್ತೀಯ? ನೀನು ಮಗೂನೆ ಬಿಡು, ಒಂದು ಕ್ಷಣ ಕೋಪ, ಒಮ್ಮೊಮ್ಮೆ ಪ್ರೀತಿ, ಇನ್ನೊಮ್ಮೆ ಅಳು............ ನನ್ನ ಮುದ್ದು ಕಣೆ ಪುಟ್ಟಣ್ಣಿ ನೀನು, ಏಳು, ಅಳಬಾರದು, 

ಅದ್ಸರಿ........... ವಿಷಯ ಏನೂ ಅಂತ ಹೇಳಲೇ ಇಲ್ಲ?"

ನನ್ನವರ ಪ್ರೀತಿಯ ಮುಂದೆ ನಾನು ಕುಬ್ಜಲಾಗಿ ಹೋಗಿದ್ದೆ, ನಿನ್ನೆಯಿಂದ ನನ್ನ ಮನದಲ್ಲಿ ಮೂಡಿದ ಎಲ್ಲಾ ಅನುಮಾನವನ್ನು ಒಂದೂ ಬಿಡದಂತೆ ಹೇಳಿದೆ.

ನನ್ನ ಮನ್ಮಥ ಗಹಗಹಿಸಿ ನಗಲಾರಂಭಿಸಿದರು.

"ಹ್ಹ ಹ್ಹ ಹ್ಹಾ..........
ಒಳ್ಳೆ ಕತೆ ನಿನ್ನದ್ದು. ಅಷ್ಟಕ್ಕೂ ತಪ್ಪು ನನ್ನದೇ, ಅಮ್ಮನೊಂದಿಗೆ ಯಾವಾಗಲೂ ಮೊಬೈಲಲ್ಲಿ MESSAGE ಕಳಿಸ್ತಾ ಇರ್ತೇನೆ. ನಿನ್ನೆ ನೀನು ಸಿಟ್ಟು ಮಾಡಿಕೊಂಡಿದ್ದು ಅಮ್ಮನಿಗೆ ಹೇಳಿದ್ದೆ. ನನ್ನ ಅಭ್ಯಾಸ ಬಲದಂತೆ ಎಲ್ಲಾ CALL ಮತ್ತು MESSAGE ಅನ್ನು ಮಾಡಿದ್ದೆ........

ಮತ್ತೆ ನನ್ನ ಅಮ್ಮ ಅಂದ್ರೆ ನನಗೆ ಪಂಚಪ್ರಾಣ. ಎಲ್ಲರೂ ತಾವು ಇಷ್ಟಪಟ್ಟ ಹುಡುಗಿಗೆ ಚಿನ್ನ ರನ್ನ ಮುದ್ದು ಬಂಗಾರ ಅಂತ ಏನೇನೋ ಹೆಸರಿಟ್ಟು ಕರಿತಾರೆ. ಆದರೆ ಒಂಬತ್ತು ತಿಂಗಳು ಹೊತ್ತು, ಹೆತ್ತು ತಾಯಿಯಾಗಿ, ಸಹೋದರಿಯಾಗಿ, ಗೆಳತಿಯಾಗಿ ನಮ್ಮ ಜೀವನ ರೂಪಿಸುವ ದೇವತೆಗೆ ಯಾಕೆ ಕರೆಯಬಾರದು?

 ಅದಕ್ಕೆ ನಾನು ಅಮ್ಮನಿಗೆ SWEET HEART ಅಂತ ಕರೆಯುವುದು. ಅದನ್ನು ನಿನಗೆ ಹೇಳದೆ ನಾನು ತಪ್ಪು ಮಾಡಿದೆ.
ಏಳು, ಅಪ್ಪ ಅಮ್ಮ ಕಾಯ್ತಾ ಇದ್ದಾರೆ, ಊಟಕ್ಕೆ ಬಾ, ಆಮೇಲೆ ನಿಧಾನಕ್ಕೆ ಎಷ್ಟು ಬೇಕೋ ಅಷ್ಟು ಅಳುವಿಯಂತೆ!"

ನನ್ನಿನಿಯನ ತೋಳ್ತೆಕ್ಕೆಯಲ್ಲಿ ಹುದುಗಿದ ನನಗೆ ನನ್ನ ಮನಸ್ಸಿಗೆ ಮುಸುಕಿದ ಮೋಡ ಪಶ್ಚಾತ್ತಾಪದ ಕಣ್ಣೀರಾಗಿ ಕರಗಿ ಹೋಗಿತ್ತು. ಈ ಜನ್ಮದಲ್ಲಿ ಇವರ ಬಾಹುಬಂಧನ ಬಿಡಿಸಿಕೊಳ್ಳಬಾರದೆಂದು ಮನಸ್ಸು ದೃಢ ನಿರ್ಧಾರ ಮಾಡಿತು!

ಟೀವಿಯಲ್ಲಿ ಹಾಡು ಮೊಳಗುತ್ತಿತ್ತು.................
"ಈ ಬಂಧನ....................
               ಜನುಮ ಜನುಮದ ಅನುಬಂಧನ......................"

ಇದನ್ನೂ ಓದಿ.....
ಭಾಗ ಒಂದು: ಪ್ರಕಾಶಣ್ಣನ ಕಥೆ 

ಭಾಗ ಎರಡು: ದಿನಕರಣ್ಣನ ಕಥೆ 





 



16 comments:

  1. ಚೆನ್ನಾಗಿದೆ ಪ್ರವೀಣ್ ಒಳ್ಳೆ ತಿರುವನ್ನು ಕೊಟ್ಟಿದ್ದೀಯ... ಮನಸ್ಸಿಗೆ ಅಂಟಿದ್ದ ಕಲ್ಮಷ ತೊಳೆದಿದೆ..

    ReplyDelete
  2. ಕಥೆ ಚನ್ನಾಗಿ ಮೂಡಿಬ೦ದಿದೆ. ಪ್ರಕಾಶಣ್ಣನ ಶೈಲಿಯಲ್ಲಿಯೇ ಇದೆ. ಆದರೆ ಕಥಾನಾಯಕಿ ಕೂಡಾ ಕೆಲಸಕ್ಕೆ ಹೋಗುವವಳು ಅಲ್ಲವೇ.. ಅದರ ಬಗ್ಗೆ ಸ್ವಲ್ಪ ವಿವರಿಸಿದ್ದರೆ ಇನ್ನೂ ಸೊಗಸಿರುತ್ತಿತ್ತೇನೋ..
    ಒಳ್ಳೆ ಪ್ರಯತ್ನ.. ಪ್ರಥಮ ಬಹುಮಾನ ನಿಮಗೇ ಸಿಗಲಿ...:))

    ReplyDelete
  3. ಪ್ರವೀಣ್;ನೀವು ಕಥೆಗೆ ಕೊಟ್ಟ ಅಂತ್ಯ ತುಂಬಾ ಚೆನ್ನಾಗಿದೆ.ಅಂತೂ ನೀವೂ ಒಬ್ಬ ಅದ್ಭುತ ಕಥೆಗಾರ ಅಂತ ಪ್ರೂವ್ ಮಾಡಿದಿರಿ.

    ReplyDelete
  4. hha hha... ee kathe odi yaryaarU " mundenu..? " anta keLabaaradu haage barediddiraa.....

    tumbaa chennaagide.....

    naanU bareyalu prayatna maadtene noDoNa.....

    ReplyDelete
  5. ಪ್ರವೀಣು....

    ನಿಮ್ಮಲ್ಲೊಬ್ಬ ಕಥೆಗಾರ ಇದ್ದಾನೆಂಬುದು ಸಾಬೀತು ಪಡಿಸಿದ್ದೀರಿ..

    ಕಥೆ ಬೆಳೆಸಿದ ರೀತಿ ತುಂಬಾ ಇಷ್ಟವಾಯಿತು...
    ಕಥಾ ಸ್ಪರ್ಧೆಗೆ ಒಂದು ಕಥೆ ಪ್ರವೇಶವಾಯಿತು...

    ದಾಂಪತ್ಯದ ಹೊಸತರಲ್ಲಿನ "ಅನುಮಾನವೆಂಬ" ಕೆಟ್ಟರೋಗದ ಬಗೆಗಿನ ಕಥೆಗಳು !!
    ಅದಕ್ಕೊಂದು ಸ್ಪರ್ಧೆ ವಾಹ್ !!

    ಸಧ್ಯದಲ್ಲೆ ನಿರ್ಣಾಯಕರನ್ನೂ ಆರಿಸಲಾಗುವದು...

    ನಮ್ಮ ಡಾ.ಕೃಷ್ಣಮೂರ್ತಿಯವರು ನಿರ್ಣಯಕಾರರಲ್ಲಿ ಒಬ್ಬರಾದರೆ ಹೇಗೆ..?
    ಮತ್ತೆ ಗೆಳೆಯ "ಆಜಾದ್" ಮತ್ತು "ಬಾಲಣ್ಣ...."

    ಇವರ್ಯಾರೂ ಇಲ್ಲವೆನ್ನಲ್ಲ ಎನ್ನುವ ಭರವಸೆ ಇದೆ..

    ಸಧ್ಯದಲ್ಲಿಯೇ "ಪ್ರಕಟಣೆ" ಹೊರಬೀಳಲಿದೆ...

    ನೀವೆಲ್ಲ ಕಥೆ ಬರೆಯಿರಿ....

    ಜೈ ಜೈ ಜೈ ಹೋ !!



    !! ಜೈ ಹೋ !!

    ReplyDelete
  6. ಕಥೆ ಚೆನ್ನಾಗಿ ಮೂಡಿ ಬಂದಿದೆ ಪ್ರವೀಣ್. ಪ್ರಕಾಶಣ್ಣ ಅವರ ಶೈಲಿಯಲ್ಲೆ ಮೂಡಿ ಬಂದಿದೆ. ಕಥೆಯ ಅಂತ್ಯ ಕೂಡ ಚೆನ್ನಾಗಿದೆ. ಸ್ಪರ್ಧೆ ಅಂತಿದ್ದಾರೆ ಎಲ್ಲಾ ....ಹ್ಹ ಹ್ಹ ಹ್ಹ...all the best ..:)

    ReplyDelete
  7. nijavaagiyu neevu kotta tiruvu hidisitu.. blog galalliye onde concept ge 3 kathe baredu spardhege ilididdiri.. shubhavaagali :)

    ReplyDelete
  8. ಉಫ್.. ಎಲ್ಲೋ ಕಳೆದೋಯ್ತು.... ಶುರುಮಾಡಿದಾಗಿನಿಂದ ಇಲ್ಲಿಗೆ ಬರುವ ತನಕವೂ ಮೂರು ಬಸ್ಸು ಹತ್ತಿದ್ದೇನೆ...ನೋಡೋಣ ಎಲ್ಲಿಗೆ ಹೋಗಿ ಮುಟ್ಟುತ್ತೇನೆ ಅಂತ..ಒಂದೊಂದು ಅಂಕಣದಲ್ಲಿ ಒಂದೊಂದು ಜಿಲೇಬಿ...
    ಸಧ್ಯಕ್ಕೆ ನನ್ನ ಸಂಸಾರದಲ್ಲಿ ಅಪ್ಪ ,ಅಮ್ಮ ತಂಗಿ ಮೂರೇ ಜನ ಇರುವುದರಿಂದ ಜಾಸ್ತಿ ಎನೂ ಹೇಳಲಾರೆ..... ದೇವರ ದಯವಿದ್ದಲ್ಲಿ ಮುಂದೊಂದು ದಿನ ಈ ಕಥೆಗೆ ಇನ್ನೊಂದು ಅಧ್ಯಾಯ ಸೇರಿಸುವಾಸೆ....
    ನೋಡೋಣ..


    ಆದ್ರೆ ಸದ್ಯಕ್ಕಂತೂ ,ಸಖತ್ ಇಸ್ಟಾ ಅಯ್ತು...
    ಕನ್ನಡದಲ್ಲಿ ೨-೩ ಜನ ಸೇರಿ ಒಂದು ಕಾದಂಬರಿ ಬರ್ದ್ರೆ ಹೆಂಗಿರತ್ತೆ????
    ಎಲ್ರೂ ಹೇಳಿ.. ನಾನ್ ಹೇಳಿದ್ ತಪ್ಪಾದ್ರೂ ದಯವಿಟ್ಟು ಹೇಳಿ.

    ಬನ್ನಿ ನಮ್ಮನೆಗೂ,
    http://chinmaysbhat.blogspot.com/


    ಹೊಸ ಸಾಹಿತ್ಯವ ನೋಡುವ ಆಸೆ ಹೊತ್ತು,
    ನಿಮ್ಮನೆ ಹುಡುಗ
    ಚಿನ್ಮಯ ಭಟ್

    ReplyDelete
  9. ಪ್ರವೀಣ್,

    ಕತೆ ತುಂಬಾ ಚೆನ್ನಾಗಿ ಬರೆದಿದ್ದೀರಿ..ತಿರುವು ಇಷ್ಟವಾಯ್ತು...ಇನ್ನಷ್ಟು ಬರೆಯಿರಿ..

    ReplyDelete
  10. ಅಯ್ಯೋ ಪ್ರಕಾಶಾ...ಇಕ್ಕಟ್ಟಿಗೆ ಸಿಲುಕಿಸಿಬಿಟ್ಟೆಯಲ್ಲಪ್ಪಾ ಸಾಮಿ...ಏನೋ ಇಲ್ಲಿ ಪ್ರವೀಣನ ಕಥೆ ಬಗ್ಗೆ ಬರೆಯೋಣ ಅಂತ ಇದ್ದೆ...!!!!
    ಛೇ,,ಛೇ..ಹೋಗ್ಲಿ...ಬಿಡು ಕಡೆಯಲ್ಲಿ ಕೊಡೋಣ ನಮ್ಮ ಓಟು...

    ReplyDelete
  11. ಪ್ರವೀಣಾ ಗುಡ್ ಲಕ್ಕೂ....ನನ್ನ ಲೇಖನಿಗೆ ತಡೆ ಹಾಕ್ಬಿಟ್ಟ ಪ್ರಕಾಶಾ...ಒಳ್ಳೆ ತಿರುವುಗಳು ಸಿಗ್ತಾ ಇವೆ ಜೊತೆಗೆ ಒಳ್ಳೆ ಕಥೆಗಾರರೂ ಇದ್ದಾರೆ ಅನ್ನೋದೂ ವಿದಿತವಾಗ್ತಿದೆ..ಛುಪಾ ರುಸ್ತುಮ್ ಗಳು...

    ReplyDelete
  12. ಪ್ರವೀಣ್ ನಿಮ್ಮ ಕಥೆ ಬಹಳ ಸುಂದರವಾಗಿದೆ. ಪ್ರಕಾಶ್ ಹೆಗ್ಡೆ, ಹಾಗು ದಿನಕರ್ ಮೊಗೆರಾ ಕಥೆಗಳಿಗೆ ಕಳಶವಿಟ್ಟಂತೆ ಮೂಡಿದೆ. ಅಚ್ಚರಿಯ ವಿಷಯವೆಂದರೆ ಆ ಕಥೆಗಳಲ್ಲಿನ ಪದಗಳ ಬಳಕೆ ನಿಮ್ಮ ಹೃದಯದ ಮಾತುಗಳೇ ಆಗಿವೆ. ತಾಯಿಯ ಬಗ್ಗೆ ನಿಮಗಿರುವ ಗೌರವಕ್ಕೆ ಜೈ ಹೋ. ಒಳ್ಳೆಯ ಕಥೆಗೆ ಸುಂದರ ಅಂತ್ಯ ಹಾಡಿದ್ದೀರ. ನಿಮಗೆ ಜೈ ಹೋ ಜೈ ಹೋ ಜೈ ಹೋ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  13. This comment has been removed by the author.

    ReplyDelete
  14. ಕಥೆ ಕಥೆಯ೦ತಿಲ್ಲ ..................

    ReplyDelete
  15. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಕೆಲಸದ ಒತ್ತಡದಿಂದಾಗಿ ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಪ್ರತ್ಯೇಕವಾಗಿ ಉತ್ತರಿಸಲಾಗುತ್ತಿಲ್ಲ. ದಯವಿಟ್ಟು ಕ್ಷಮೆ ಇರಲಿ.
    ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ. ನಿಮ್ಮ ಪ್ರತಿಕ್ರಿಯೆಗಳೇ ನನ್ನ ಬರವಣಿಗೆಗೆ ಸ್ಫೂರ್ತಿ.

    ReplyDelete