Monday, November 7, 2011

ಅಮ್ಮನ ಮಡಿಲಿಗೆ

ಇತ್ತೀಚಿಗೆ ಕೆಲಸದಲ್ಲಿ ಬಹಳ ಬ್ಯುಸಿ. ಹಬ್ಬದ ದಿನಗಳು, ಮದುವೆಯ ದಿನಗಳು ಎಂದರೆ ನಮ್ಮಂತ ಹೋಟೆಲ್ ಉಧ್ಯಮದವರಿಗೆ ಎಲ್ಲಿಲ್ಲದ ಕೆಲಸ. ಹಗಲು ರಾತ್ರಿ ಪುರುಸೊತ್ತೇ ಇರಲ್ಲ!
ನಿಮ್ಮೆಲ್ಲರ ಬ್ಲಾಗ್ ಓದಿದರೂ ಪ್ರತಿಕ್ರಿಯೆ ನೀಡಲು ಆಗುತ್ತಿಲ್ಲ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. 

ಇದ್ದಿದ್ದರಲ್ಲಿ ಒಂದು ತಿಂಗಳ ರಜೆ ತೆಗೆದುಕೊಂಡು ಊರಿಗೆ ಹೊರಟಿದ್ದೇನೆ. ಅದೇ ಸಂತೋಷ. ಜೊತೆಗೆ ಒಂದು ತಿಂಗಳು ದೆಹಲಿಯ ಚಳಿಗಾಲವನ್ನು ಮಿಸ್ ಮಾಡಿಕೊಳ್ಳುವ ಬೇಸರ :( 

ನಿಮ್ಮೆಲ್ಲರೊಂದಿಗೆ ಇನ್ನೊಂದು ವಿಷಯವನ್ನು ಹಂಚಿಕೊಳ್ಳಲೇ ಬೇಕು. 

ನಾನು ನಮ್ಮ ಬ್ರಹ್ಮಚಾರಿ ಸಂಘಕ್ಕೆ ರಾಜಿನಾಮೆ ಕೊಡಲು ನಿರ್ಧರಿಸಿದ್ದೇನೆ!

ಹೌದು. ಇದೇ ತಿಂಗಳು ನನ್ನ ಬಾಳ ಸಂಗಾತಿಯಾಗುವ ಸುಪ್ರಿಯಾ ಳೊಂದಿಗೆ ನನ್ನ ನಿಶ್ಚಿತಾರ್ಥ. ನೀವೆಲ್ಲರೂ ನಮ್ಮನ್ನು ಹರಸುತ್ತೀರಾ ತಾನೇ? ನಿಶ್ಚಿತಾರ್ಥ ಯಾವುದೇ ಆಡಂಬರವಿಲ್ಲದೆ ಸರಳವಾಗಿ ಆಚರಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ನಿಮ್ಮನ್ನು ಕರೆಯುವುದಿಲ್ಲ! ಮದುವೆಗೆ ಖಂಡಿತಾ ಕರೆಯುತ್ತೇನೆ.



13 comments:

  1. ತಮ್ಮಾ ನಿನೆಗೆ ಮನಃಪೂರ್ವಕ ಶುಭಾಶಯಗಳು ಮತ್ತು ದೇವರಲ್ಲಿ ಪ್ರಾರ್ಥನೆ ನಿನ್ನ ಬಾಳು ಆನಂದಾರೋಗ್ಯ ಸಮೃದ್ಧಿಯಿಂದ ತುಂಬಿರಲೆಂದು.

    ReplyDelete
  2. ನಿಮಗೆ ಸುಖಬಾಳನ್ನು ಹಾಗು ಸಮಾರಂಭಕ್ಕೆ grand success ಕೋರುತ್ತೇನೆ.

    ReplyDelete
  3. ಪ್ರೀತಿಯ ತಮ್ಮನೇ ಶುಭವಾಗಲಿ...

    ReplyDelete
  4. ನಮಗೆ ಜಾಸ್ತಿ ಖಾರದ ಅಭ್ಯಾಸವಿಲ್ಲ. ೫-೬ ಕೆಜಿ ಸ್ವೀಟು ಕೇಳಿ ಪಡೆಯಲು ಯಾವುದೇ ಮುಜುಗರವೂ ಇಲ್ಲ! ಅಷ್ಟು ಕೊಟ್ಟರೆ ಮದುವೆ ವರೆಗೆ ಹಾಗೂ ಹೀಗೂ ಮೆಲ್ಲುತ್ತೇವೆ, ಆಮೇಲೆ ಮದುವೆ ಸ್ವೀಟು ಹೇಗೂ ಇದ್ದೇಇದೆ! ಸೈಜು ಮತ್ತು ತಿನ್ನುವ ಅಂದಾಜು ಲೆಕ್ಕಹಾಕಿ ಸ್ವೀಟು ತಯಾರಿಸಬೇಕಾಗಿ ವಿನಂತಿ! ತಿಂದಮೇಲೆ ಶುಭ ಹಾರೈಸದೇ ಇರಲಿಕ್ಕಾಗುತ್ಯೇ ? ಅಂದಹಾಗೇ ಬ್ರಹ್ಮಚಾರೀ ಸಂಘದವರಿಗೆ ಮದುವೆ ನಂತರ ಮೂರು ತಿಂಗಳಿಗಾಗುವಷ್ಟು ಸ್ವೀಟು-ಖಾರ ಬೇಕು ಅಂತ ಅವರು ಮೊದಲೇ ತಿಳಿಸಿದ್ದಾರೆ, ನಡೆಯಲಿ ತಯಾರಿ, ಶುಭಸ್ಯ ಶೀಘ್ರಂ!

    ReplyDelete
  5. Congrats tammaa!!
    wishing u and Supriya all the happiness
    :-)
    malathi S

    ReplyDelete
  6. ಡಿ ಟಿ ಕೆ ಸರ್, ಅಜಾದ್ ಭಯ್ಯಾ, ಸುನಾಥ್ ಜೀ, ವಿಜಯಶ್ರೀ ಮೇಡಂ, ಸುಗುಣಕ್ಕ, ಮನಮುಕ್ತಾ, , ಮಾಲತಿ ಅಕ್ಕಾ, ನಿಮ್ಮೆಲ್ಲರ ಪ್ರತಿಕ್ರಿಯೆ, ಶುಭ ಹಾರೈಕೆಗಳಿಗೆ ಧನ್ಯವಾದಗಳು.........
    ನಿಮ್ಮೆಲ್ಲರ ಹಾರೈಕೆಯೇ ನಮಗದು ಶ್ರೀರಕ್ಷೆ.
    ವಿ ಆರ್ ಭಟ್ ಸರ್,
    ಸ್ವೀಟ್ಸ್ ಕೊರಿಯರ್ ಮಾಡಿದ್ದೇನೆ, ತೂಕ ಜಾಸ್ತಿ ಇರೋದ್ರಿಂದ ಬರಲು ತಡ ಆಗಬಹುದು (ಹೆಚ್ಚು ಕಡಿಮೆ ಒಂದು-ಎರಡು ವರ್ಷ!!!!!)

    ReplyDelete
  7. ಬಹಳ ತಡವಾಗಿ ಶುಭಹಾರೈಸುತ್ತಿದ್ದೇನೆ ಪ್ರವೀಣ್. ಈ ನಡುವೆ ಸಮಯದ ಅಭಾವದಿಂದಾಗಿ ಬ್ಲಾಗ್ ಓದಲು ಸಾಧ್ಯವಾಗದೆ ಈಗ ಓದಿದೆ. ನಿಮ್ಮ ಮುಂದಿನ ಹೊಸ ಜೀವನಕ್ಕೆ ಹಾರ್ದಿಕ ಶುಭಾಷಯಗಳು.

    ReplyDelete
  8. ಬಹಳ ತಡವಾಗಿ ಶುಭಹಾರೈಸುತ್ತಿದ್ದೇನೆ ಪ್ರವೀಣ್. ಈ ನಡುವೆ ಸಮಯದ ಅಭಾವದಿಂದಾಗಿ ಬ್ಲಾಗ್ ಓದಲು ಸಾಧ್ಯವಾಗದೆ ಈಗ ಓದಿದೆ. ನಿಮ್ಮ ಮುಂದಿನ ಹೊಸ ಜೀವನಕ್ಕೆ ಹಾರ್ದಿಕ ಶುಭಾಷಯಗಳು.

    ReplyDelete