ಎಲ್ಲಿರುವೆ ದೇವರೇ ಕಣ್ಣಿಗೆ ಕಾಣದೆ,
ನಿನ್ನ ಹುಡುಕಿ ನಾ ಸೋತು ಹೋದೆ........
ದುರಾಚಾರದಿ ಧರೆ ಹತ್ತಿ ಉರಿದಿದೆ,
ಉದ್ಧರಿಸದೆ ಜಗವ ಎಲ್ಲಿ ಕಾಣೆಯಾದೆ......
ಭಯವಿಲ್ಲ ಭಕ್ತಿಯಿಲ್ಲ ಸತ್ಯದ ಸುಳಿವಿಲ್ಲ
ನ್ಯಾಯ ನೀತಿಗಳಿಲ್ಲ ಧರ್ಮ ಇಲ್ಲವೇ ಇಲ್ಲ........
ಸುಳ್ಳು ಮೋಸ ತುಂಬಿಹುದಲ್ಲ
ದಗ ವಂಚನೆ ಜಗವ ಸುಡುತಿವೆಯಲ್ಲ...........
ಬಾರಲ್ಲಿ ರಮ್ಮು ಬೀರಿನ ಮತ್ತಲ್ಲಿ
ಗುಂಡು ಬಾಡಿನೂಟದಲಿ..........
ಮನುಜಕುಲದ ಮಹನೀಯರು
ಮಾನವೀಯತೆಯ ಮರೆತಿಹರಿಲ್ಲಿ..........
ಹೆಣ್ಣು ಗಂಡಿನ ಮಧ್ಯೆ ಭೆಧವೆಂಬುದಿಲ್ಲ
ಹೆಣ್ಣು ಆಧುನಿಕತೆಯಲ್ಲಿ ತಾ ಹೆಣ್ಣಾಗಿ ಉಳಿದಿಲ್ಲ........
ಧೂಮ-ಮದ್ಯಪಾನದಲಿ ಮೈ ಮರೆತಿಹಳಲ್ಲ
ನಾರಿ ದೇವತಾ ರೂಪ ಸುಳ್ಳಾಗಿ ಹೋಯ್ತಲ್ಲ.........
ಕಾಡನ್ನೇ ಕಡಿದು ನಾಡನ್ನು ಮಾಡಿ
ಭೂತಾಯಿ ಮಾನಭಂಗ ಮಾಡಿದರಲ್ಲ.........
ಅದಿರು ನಿಕ್ಷೆಪವೆಂದು ಎಲ್ಲೆಲ್ಲೂ ಅಗೆದು
ತಾಯಿಯ ಒಡಲನ್ನೇ ಬಗೆದರಲ್ಲ........
ಹೆಣ್ಣು ಆಧುನಿಕತೆಯಲ್ಲಿ ತಾ ಹೆಣ್ಣಾಗಿ ಉಳಿದಿಲ್ಲ........
ಧೂಮ-ಮದ್ಯಪಾನದಲಿ ಮೈ ಮರೆತಿಹಳಲ್ಲ
ನಾರಿ ದೇವತಾ ರೂಪ ಸುಳ್ಳಾಗಿ ಹೋಯ್ತಲ್ಲ.........
ಕಾಡನ್ನೇ ಕಡಿದು ನಾಡನ್ನು ಮಾಡಿ
ಭೂತಾಯಿ ಮಾನಭಂಗ ಮಾಡಿದರಲ್ಲ.........
ಅದಿರು ನಿಕ್ಷೆಪವೆಂದು ಎಲ್ಲೆಲ್ಲೂ ಅಗೆದು
ತಾಯಿಯ ಒಡಲನ್ನೇ ಬಗೆದರಲ್ಲ........
ಅಲ್ಲಿ ಇಲ್ಲಿ ಎಲ್ಲಿ ಅಡಗಿಹೆ ಅದಾವ ಮೂಲೆಯಲ್ಲಿ
ನಿನ್ನ ಹುಡುಕದ ತಾಣವೇ ಉಳಿದಿಲ್ಲ
ಒಮ್ಮೆ ಬರಬಾರದೇ ಇಲ್ಲಿ........
ಇಳಿದು ಬಾ ನೋಡು ಧರೆಯಲ್ಲಿ
ಉದ್ಧರಿಸು ಧರಣಿಯ ಇನ್ನೊಂದು ಅವತಾರದಲ್ಲಿ ...