ಗೆಳತಿ,
ಹೂವಾಗಿ, ಹಣ್ಣಾಗಿ
ಕನಸಾಗಿ, ಕಣ್ಣಾಗಿ
ಹಿತದ ಗೆಳತಿಯಾಗಿ
ನನಗೆಲ್ಲಾ ನೀನಾಗಿ
ದೇವತೆಯಾಗಿ
ನನ್ನ ಮನದಲ್ಲಿ ನೀನಿದ್ದೆ............
ಆ ಒಂದು ಕ್ಷಣ
ಬಿಟ್ಟೆ ಎಲ್ಲಾ ಚಿಂತೆ
ಬಾಳ ಗುರಿಯ ಕತೆ
ಭವಿಸಿದ ಎಲ್ಲಾ ವ್ಯಥೆ
ಕೊನೆಗೆ ನನ್ನನ್ನೇ ಮರೆತೆ
ಆದರೂ
ಕೆಡಿಸಿ ಬಿಟ್ಟೆಯಲ್ಲೆ ನೀ ನಿದ್ದೆ.............!
ಸ್ನೇಹಿತರೇ,
ಬ್ಲಾಗ್ ಲೋಕದಿಂದ ದೂರ ಉಳಿದು ತುಂಬಾ ದಿನಗಳಾದವು. ಎಂದೋ ಗೀಚಿದ್ದ ಈ ಸಾಲುಗಳು ಇಂದು ನೆನಪಾಗಿ ನಿಮ್ಮ ಮುಂದಿಟ್ಟಿದ್ದೇನೆ.
ಈ ಮಧ್ಯೆ ದೀಪಾವಳಿ ಬಂದು ಹೋಯಿತು, ಕನ್ನಡ ರಾಜ್ಯೋತ್ಸವ ಆಚರಣೆಯಾಯ್ತು, ಆದರೂ ನನ್ನ ಬ್ಲಾಗ್ ಮನೆಯ ಶೃಂಗಾರವಿಲ್ಲ, ತಳಿರು ತೋರಣಗಳಿಲ್ಲ. ಹಬ್ಬವಿಲ್ಲ, ನಿಮಗೆಲ್ಲ ಶುಭಾಷಯಗಳನ್ನೂ ಹೇಳಲಿಲ್ಲ. ಯಾರ ಮನೆಗೂ ಭೇಟಿಯಿಲ್ಲ, ನಿಮ್ಮ ಬರಹಗಳನ್ನೆಲ್ಲ ಓದಲೂ ಇಲ್ಲ.
ಹೌದು ನಾನು ತಪ್ಪು ಮಾಡಿದ್ದೇನೆ.
ಆದರೆ ಏನು ಮಾಡುವುದು ಹೇಳಿ, ಕೆಲಸದ ಒತ್ತಡ ಅದೆಷ್ಟಿದೆಯೆಂದರೆ ಊಟ ನಿದ್ದೆಗೂ ಸಮಯವಿಲ್ಲ. ಹೊತ್ತು ಗೊತ್ತೆಂಬುದಿಲ್ಲ. ಹೊಸದಾಗಿ ಆರಂಭಗೊಂಡ 3 ತಾರಾ ಹೋಟೆಲ್ಲಿನ ಸಂಪೂರ್ಣ ಜವಬ್ದಾರಿ ನನಗೆ ಸಿಕ್ಕಿದ್ದರ ಕೊಡುಗೆ ಇದು! ಕೋಟ್ಯಾಂತರ ಖರ್ಚು ಮಾಡಿ ಪ್ರಾರಂಭಿಸಿದ ಈ ಹೋಟೆಲ್ಲನ್ನು ಮಗುವಿನಂತೆ ಜೋಪಾನ ಮಾಡುವುದು ನಮ್ಮ ಕರ್ತವ್ಯ ಅಲ್ಲವಾ? ಮಗು ಬೆಳೆದು ದೊಡ್ಡದಾದ ಮೇಲೆ ಹೊಣೆಗಾರಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಹಾಗೆ ಇದೂ ಕೂಡ!
ಆಗೊಮ್ಮೆ ಈಗೊಮ್ಮೆ ಅಲ್ಲಲ್ಲಿ ಇಣುಕಿ ಹೋಗುತ್ತಿದ್ದೇನೆ. ಆದಷ್ಟು ಬೇಗ ಸಮಯ ಮಾಡಿಕೊಂಡು ಎಲ್ಲರ ಮನೆಗೂ ಬಂದು ತರ್ಲೆ ಮಾಡುತ್ತಾ ಇರುತ್ತೇನೆ! ಉದಾಹರಣೆಗೆ
ತಡವಾಗಿ ಮತ್ತು ಮುಂದಿನ ವರ್ಷಕ್ಕೆ ಮುಂಗಡವಾಗಿ ದೀಪಾವಳಿಯ ಮತ್ತು ಕನ್ನಡ ರಾಜೋತ್ಸವದ ಶುಭಾಷಯಗಳು!
ಅಲ್ಲಿಯವರೆಗೂ ಪ್ರೀತಿ ಮಮತೆ ಇಂದಿನಂತೆಯೇ ಇರಲಿ!
ನಿಮ್ಮವ........
ಮನದಾಳದಿಂದ..... ಪ್ರವೀಣ್....
Showing posts with label ಹನಿಗವನ. Show all posts
Showing posts with label ಹನಿಗವನ. Show all posts
Thursday, November 18, 2010
Tuesday, August 10, 2010
"ಗುಟ್ಟು"
ನಲ್ಲೆ,ನಿನಗೆ ಯಾಕೇಬೇಕುಚಂದದ
ಆಭರಣಒಡವೆಗಳು...........?
ನಿನ್ನಲ್ಲೇಇವೆಯಲ್ಲಾಮುಖದತುಂಬಾ
ಅಂದದ
ಮೊಡವೆಗಳು........!
ಗೆಳೆಯರೇ,
ಬಹಳ ದಿನಗಳ ಆಸೆಯಂತೆ ನಾನು ಮನೆಗೆ ಹೊರಟಿದ್ದೇನೆ. ಪೂರ್ಣ ಒಂದು ತಿಂಗಳ ರಜೆ ಹಾಕಿ ಮನೆಯತ್ತ ಹೆಜ್ಜೆ ಹಾಕಿದ್ದೇನೆ. ಬೆಂಗಳೂರಲ್ಲಿ ಒಂದು ವಾರ ಇದ್ದು ಆಮೇಲೆ ಮನೆಗೆ ಹೋಗುವ ಆಲೋಚನೆ ನನ್ನದು. ಇಂದಿನಿಂದ ಶ್ರಾವಣ ಮಾಸ ಆರಂಭಗೊಂಡು ಸಂತಸದ ಹಬ್ಬದ ವಾತಾವರಣವನ್ನು ತಂದಿದೆ, ಒಂದೊಂದೇ ಹಬ್ಬಗಳು ಸರತಿ ಸಾಲಿನಲ್ಲಿ ನಿಂತಿವೆ. ಹಬ್ಬದಲ್ಲಿ ಮನೆಯಲ್ಲಿದ್ದರೆ ಮನೆಮಂದಿಯೆಲ್ಲಾ ಅದೆಷ್ಟು ಖುಷಿ ಪಡುತ್ತಾರೆ ಅಲ್ವಾ? ಹಬ್ಬದ ದಿನ ನೀವು ನಿಮ್ಮ ಮನೆಗೆ ಹೋಗಿ ಬನ್ನಿ. ಮನೆಯಲ್ಲಿ ಹಬ್ಬದ ಸಂತೋಷವನ್ನು ಹೆಚ್ಚಿಸಿ.
ನಮಗೆಲ್ಲಾ ತಿಳಿದಿರುವಂತೆ ಅಗಸ್ಟ್ 22ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅಜಾದ್ ಸರ್ ಅವರ "ಜಲನಯನ" ಮತ್ತು ಶಿವು ಸರ್ ಅವರ "ಗುಬ್ಬಿ ಎಂಜಲು" ಪುಸ್ತಕಗಳ ಬಿಡುಗಡೆ ಸಮಾರಂಭ ಇದೆ. ಎಲ್ಲರೂ ಬನ್ನಿ, ಒಟ್ಟಿಗೆ ಸೇರಿ ನಮ್ಮ ಗೆಳೆಯರನ್ನು ಹಾರೈಸೋಣ, ಎಲ್ಲರೂ ಒಂದಾಗಿ ಈ ಸಮಾರಂಭದ ಅಂದ ಹೆಚ್ಚಲು ಕಾರಣರಾಗೋಣ.ಪ್ರೀತಿ ಇರಲಿ,ಪ್ರವೀಣ್ ಆರ್ ಗೌಡಫೋನ್: 09873837353
0958219993708880348815(ಬೆಂಗಳೂರಿನಲ್ಲಿ ಇರುವಾಗ)
Subscribe to:
Posts (Atom)