Tuesday, August 10, 2010

"ಗುಟ್ಟು"

ನಲ್ಲೆ,
ನಿನಗೆ ಯಾಕೇ
ಬೇಕು
ಚಂದದ
ಆಭರಣ
                  ಒಡವೆಗಳು...........?

ನಿನ್ನಲ್ಲೇ 
ಇವೆಯಲ್ಲಾ 
ಮುಖದ 
ತುಂಬಾ
ಅಂದದ 

                  ಮೊಡವೆಗಳು........!



ಗೆಳೆಯರೇ,
ಬಹಳ ದಿನಗಳ ಆಸೆಯಂತೆ ನಾನು ಮನೆಗೆ ಹೊರಟಿದ್ದೇನೆ. ಪೂರ್ಣ ಒಂದು ತಿಂಗಳ ರಜೆ ಹಾಕಿ ಮನೆಯತ್ತ ಹೆಜ್ಜೆ ಹಾಕಿದ್ದೇನೆ. ಬೆಂಗಳೂರಲ್ಲಿ ಒಂದು ವಾರ ಇದ್ದು ಆಮೇಲೆ ಮನೆಗೆ ಹೋಗುವ ಆಲೋಚನೆ ನನ್ನದು. ಇಂದಿನಿಂದ ಶ್ರಾವಣ ಮಾಸ ಆರಂಭಗೊಂಡು ಸಂತಸದ ಹಬ್ಬದ ವಾತಾವರಣವನ್ನು ತಂದಿದೆ, ಒಂದೊಂದೇ ಹಬ್ಬಗಳು ಸರತಿ ಸಾಲಿನಲ್ಲಿ ನಿಂತಿವೆ. ಹಬ್ಬದಲ್ಲಿ ಮನೆಯಲ್ಲಿದ್ದರೆ ಮನೆಮಂದಿಯೆಲ್ಲಾ ಅದೆಷ್ಟು ಖುಷಿ ಪಡುತ್ತಾರೆ ಅಲ್ವಾ? ಹಬ್ಬದ ದಿನ ನೀವು ನಿಮ್ಮ ಮನೆಗೆ ಹೋಗಿ ಬನ್ನಿ. ಮನೆಯಲ್ಲಿ ಹಬ್ಬದ ಸಂತೋಷವನ್ನು ಹೆಚ್ಚಿಸಿ.

ನಮಗೆಲ್ಲಾ ತಿಳಿದಿರುವಂತೆ ಅಗಸ್ಟ್ 22ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅಜಾದ್ ಸರ್ ಅವರ "ಜಲನಯನ" ಮತ್ತು ಶಿವು ಸರ್ ಅವರ "ಗುಬ್ಬಿ ಎಂಜಲು" ಪುಸ್ತಕಗಳ ಬಿಡುಗಡೆ ಸಮಾರಂಭ ಇದೆ. ಎಲ್ಲರೂ ಬನ್ನಿ, ಒಟ್ಟಿಗೆ ಸೇರಿ ನಮ್ಮ ಗೆಳೆಯರನ್ನು ಹಾರೈಸೋಣ, ಎಲ್ಲರೂ ಒಂದಾಗಿ ಈ ಸಮಾರಂಭದ ಅಂದ ಹೆಚ್ಚಲು ಕಾರಣರಾಗೋಣ.
ಪ್ರೀತಿ ಇರಲಿ,
ಪ್ರವೀಣ್ ಆರ್ ಗೌಡ 
ಫೋನ್: 09873837353
            09582199937
                      08880348815(ಬೆಂಗಳೂರಿನಲ್ಲಿ ಇರುವಾಗ)

25 comments:

  1. ಬೆ೦ಗಳೂರಿಗೆ ಸ್ವಾಗತ. ಬ೦ದ ಕೂಡಲೇ ಫೋನಾಯಿಸಿ, ಸಿಗೋಣ.

    ReplyDelete
  2. ಮೊಡವೆಗಳು ಅಂದ ಎಂದು ಗೊತ್ತಿರಲ್ಲ. ತುಂಟ ಚುಟುಕು.

    ReplyDelete
  3. ಒಡವೆಗಳನ್ನ ಕೊಡಿಸೋಕ್ಕೆ ಆಗಲ್ಲಾ ಅಂತ ಹೇಳ್ತಾ ಇದಿರಾ ?
    ಹೇಳೋ ರೀತಿ ಚೆನ್ನಾಗಿದೆ !
    ಬೆಂಗಳೂರಿಗೆ ಸ್ವಾಗತ :-)

    ReplyDelete
  4. ಹಹ...ಚೆನ್ನಾಗಿದೆ. ಒಳ್ಳೆಯ ಒಡವೆಗಳು !.

    ReplyDelete
  5. neevu hogiri naavu barutteve nimmindene.... shubhavaagali... saalugaLu chennagide

    ReplyDelete
  6. ಮೊಡವೆಗಳು, ಒಡವೆಗಳೇ? ಪಾಪ..!

    ಪುಸ್ತಕ ಬಿಡುಗಡೆ ಸಮಾರ೦ಭ ಯಶಸ್ವಿಯಾಗಲಿ. ನನ್ನ ಶುಭ ಹಾರೈಕೆ.

    ಅನ೦ತ್

    ReplyDelete
  7. modavegalu sundariya aabharana!! kavite saalugalu chennaagive. bengaloorinalli bhetiyaagona!!!

    ReplyDelete
  8. ಬೆಂಗಳೂರಿನಲ್ಲಿ ಸಿಗೋಣ ಪ್ರವೀಣ್!

    wishing u a happy holiday!

    ReplyDelete
  9. ಪ್ರವೀಣ್,
    ಒಳ್ಳೆಯ ಕವನ....

    ತುಂಬಾ ಖುಷಿ ಆಗ್ತಾ ಇದೆ, ನಿಮ್ಮನ್ನೆಲ್ಲಾ ಭೇಟಿ ಆಗ್ತಾ ಇರೋದಕ್ಕೆ.... ಬ್ಲಾಗ್ ಎಂಬ ಮಾಯಾ ಲೋಕ ನಮ್ಮನ್ನೆಲ್ಲ ಬೆಸೆದಿದೆ.... ಈ ಸಮಾರಂಭ ನಮ್ಮನ್ನು ಇನ್ನಷ್ಟು ಹತ್ತಿರ ತರಲಿ..... ಸಿಗೋಣ ಆಗಷ್ಟ್ ೨೨ ಕ್ಕೆ...

    ReplyDelete
  10. ಅಂದವಾದ ಚುಟುಕು.
    ಚೆನ್ನಾಗಿದೆ ಸಾರ್.

    ReplyDelete
  11. ಪ್ರವೀಣ್;ಒಡವೆ ಕೊಡಿಸೋಕೆ ಆಗದಿದ್ದಾಗ ಹೀಗೂ ಹೇಳಬಹುದು.ಮೊಡವೆಗೆ ಕ್ರೀಂ ತಂದುಕೊಟ್ಟು ಆಮೇಲೆ ಒಡವೆ ತನ್ನಿ ಎನ್ನುತ್ತಾರೆ ಬುದ್ದಿವಂತೆಯರು.ನಾನು ಬೆಂಗಳೂರಿನಲ್ಲಿ Aug 14-16 ತನಕ ಇರುತ್ತೇನೆ.ನೀವು ಆ ಸಮಯದಲ್ಲಿ ಬೆಂಗಳೂರಿನಲ್ಲಿದ್ದರೆ 9449598818 ಗೆ ಫೋನಾಯಿಸಿ.ಭೇಟಿಯಾಗೋಣ.ತೀರ್ಥ ಹಳ್ಳಿ ಯಲ್ಲಿದ್ದಾಗ ಸಮಯ ಮಾಡಿಕೊಂಡು ಜೋಗಕ್ಕೆಬನ್ನಿ.ಧನ್ಯವಾದಗಳು.

    ReplyDelete
  12. ಚೆನ್ನದ ಒಡವೆಗಳು ಚೆನ್ನಾಗಿವೆ....
    ರಜೆ ಮಜವಾಗಿರಲಿ.....

    ReplyDelete
  13. ನಲ್ಲೆಯ ಮೊಡವೆಗಳನ್ನೂ ಒಡವೆಗಳನ್ನಾಗಿ ಪರಿವರ್ತಿಸುವ ಈ ರಸಿಕತನ ಹಾಗು ಈ ಚಾಲಾಕು appreciable!

    ReplyDelete
  14. haa, chennagi ide,, khanditha vaagi sigona,, banni....

    ReplyDelete
  15. hmm... channagide... :)
    i will give you a call on aug 22nd :)

    ReplyDelete
  16. ಪ್ರವೀಣ್..

    ಚೆನ್ನಾಗಿದೆ..
    ನಲ್ಲೆಗೆ ಹೀಗೆಲ್ಲ ರೇಗಿಸಿದರೆ ಮುನಿಸಿಕೊಂಡಾಳು.. ಮಾರಾಯರೆ...
    ಸ್ವಲ್ಪ ಹುಷಾರು.. !

    ನಿಮ್ಮ ಫೋನಿಗಾಗಿ ಕಾಯುವೆ...
    ಪ್ರಕಾಶಣ್ಣ..

    ReplyDelete
  17. ಸುಂದರಿ ಚೆಲುವೆಯವಳು
    ಇಲ್ಲ ಅವಳಲ್ಲಿ ಒಡವೆಗಳು
    ಆದರಿವೆ ಮುಖತುಂಬಾ ಮೊಡವೆಗಳು

    ReplyDelete
  18. Chennagide praveen.. ide reethi innondu kavana ..

    ಮುತ್ತನಿಡಲು ಮುಖದಲ್ಲಿ

    ಜಾಗವೆಲ್ಲಿದೆ ಚೆಲುವೆ..

    ಅಲ್ಲೆಲ್ಲಾ ತುಂಬಿಬಿಟ್ಟಿದಿಯಲ್ಲಾ

    ಮೊಡವೆ !!!!!

    ReplyDelete
  19. ಮುತ್ತು ಕೊಡಲು ಜಾಗ ಇಲ್ಲಾ ಎಂದಿರಲ್ಲ ! ಅಲ್ಲೇ ಎಲ್ಲಾದರೂ ಅಡ್ಜಸ್ಟ್ ಮಾಡಿ ! ಕವನ sooper ! ಮೊದವೆಯ ಹುಡುಗಿ ಯಾರೋ ಗೊತ್ತಾಗಲಿಲ್ಲ !

    ReplyDelete
  20. ಚ೦ದದ 'ಹನಿ' ಬರೆದಿದ್ದೀರಿ. ಧನ್ಯವಾದಗಳು. ನನ್ನ 'ಹನಿ'ಯೊ೦ದು ನೆನಪಾಗುತ್ತಿದೆ. ಮೊದವೆಯದಲ್ಲ. ಒಡವೆಯದು!
    ಓಲೆ ಬೇಡ ಮೂಗುತಿ ಬೇಡ
    ಒಡವೆಗಳ ಗೊಡವೆಯೇ ಬೇಡ
    ಗ೦ಡಿಗೆ,
    ಮನ ಭಾರ ಬ೦ಗಾರ ಹೊತ್ತ
    ವಧುವಿನ ಆಯ್ಕೆಯಲ್ಲೇ
    ಪ್ರೀತಿ ಗಾಢ!

    ಹೀಗಾಗದಿದ್ದರೆ ಒಳ್ಳೆಯದು!

    ReplyDelete
  21. ಒಡವೆ ಹಾಗೂ ಮೊಡವೆಗಳನ್ನು ಚನ್ನಾಗಿ ಮುದ್ದಿಸಿದ್ದೀರಿ

    ReplyDelete
  22. ಕವನ ಓದಿದ, ಪ್ರತಿಕ್ರಿಯಿಸಿದ ಎಲ್ಲಾ ಬ್ಲಾಗ್ ಮಿತ್ರರಿಗೂ ಧನ್ಯವಾದಗಳು,

    ReplyDelete
  23. ನೀವು ಬಿಚ್ಚಿಟ್ಟ ಗುಟ್ಟು ತುಂಬಾ ಚೆನ್ನಾಗಿದೆ.

    ReplyDelete