ಹೊಸ ವರುಷ ಯುಗಾದಿಯ ಹಾರ್ದಿಕ ಶುಭಾಶಯಗಳು.
ಯುಗವೆಷ್ಟೇ ಕಳೆಯಲಿ...........
ಜಗವೇನೇ ಹೇಳಲಿ..............
ಯುಗಾದಿಗೆ ನಿಲುವಿಲ್ಲ ..........
ಆಗಮನವ ಮರೆತಿಲ್ಲ............
ಹೊಸ ಜೀವನದ ಲೆಕ್ಕಾಚಾರದಿ........
ಬೆಸಸರಿಗಳ ಗುಣಾಕಾರದಿ ..............
ಪಸರಿಸಿತು ಮಗದೊಮ್ಮೆ ................
ಹೊಸವರುಷ ಸಂತೋಷದಿ ............
ಇಳೆಯು ಅದುರಿದರೇನು..............
ಪ್ರಳಯ ಬರುವುದೆಂದರೇನು...........
ನಾಳೆಯ ರವಿ ಮೂದಡಿದ್ದರೇನು..............
ಬಳಿಗೆ ಬರುವುದು ಯುಗಾದಿ ಎಂದಿನಂತೆ...........
ಕಷ್ಟವೆಲ್ಲವ ಮರೆತು ಬೇವು ಬೆಲ್ಲವ.......................
ಇಷ್ಟಿಷ್ಟೇ ಬೆಲ್ಲವ ಸೇರಿಸಿ................
ನಿಷ್ಟೇಯಲಿ ಬೇವಿನ ಕಹಿಯೊಂದಿಗೆ.........
ಸೃಷ್ಥೀಶನ ನೆನೆಯುತ ಸವಿಯೋಣ ನಾವಿಂದು...............
ಸವಿಯಾದ ಬೇವು ಬೆಲ್ಲದಂತೆ ...............
ನವಿರಾದ ಆದರ್ಶ ನಮದಾಗಲಿ..................
ನವ ಸಂವತ್ಸರದ ಶುಭಗಳಿಗೆಯಲಿ..............
ನವೀನ ಸಂತೋಷ ಎಲ್ಲರಿಗೂ ಸಿಗಲಿ..........