ನಮ್ಮ ಮಲ್ಲಣ್ಣ ಒಂತರಾ ವಿಚಿತ್ರ ಮನುಷ್ಯ. ಅವನಿಗೆ ಯಾವಾಗ ಏನೇನು ವಿಚಾರಗಳು ಹೊಳೆಯುತ್ತವೆಯೋ
ಅವನಿಗೂ ಗೊತ್ತಿಲ್ಲ. ಸದಾ ಒಂದಲ್ಲ ಒಂದು ಪಜೀತಿಯಲ್ಲಿ ಸಿಕ್ಕಿಹಾಕಿಕೊಳ್ತಾ ಇರ್ತಾನೆ....
ಇಂತಿರಲೊಂದು ದಿನ ಮೂರ್ಖ ಪೆಟ್ಟಿಗೆಯಲ್ಲಿ ಯಾವುದೋ ಕಣ್ಣೀರು ತುಂಬಿದ ದಾರವಾಹಿ ನೋಡಿ ನಗುತ್ತಾ
ಕುಳಿತಿದ್ದ(?) ನಮ್ಮ ಮಲ್ಲರ ಮಲ್ಲ!
ಇದ್ದಕ್ಕಿದ್ದಂತೆ ಜಾಹಿರಾತು ಶುರು! ಎಷ್ಟಾದರೂ ದಾರಾವಾಹಿಗಳು ಜಾಹಿರಾತಿನ ಒಂದು ಭಾಗ ತಾನೇ? ಅದ್ಯಾವುದೋ
ಧ್ವಿಚಕ್ರ ವಾಹನದ ಪ್ರಚಾರ! ಟ್ರಾಫಿಕ್ ಸಿಗ್ನಲ್ ನಲ್ಲಿ ಒಂದು ಹುಡುಗ ಹುಡುಗಿ ನಳನಳಿಸುವ ಚಂದದ ದ್ವಿಚಕ್ರ ವಾಹನದಲ್ಲಿ
ಕುಳಿತಿದ್ದಾರೆ. ಅವರ ಪಕ್ಕದಲ್ಲಿದ್ದ ಕಾರಿನಿಂದ ನೀರು ಕುಡಿದು ಖಾಲಿ ಬಾಟಲಿ ಹೊರಗೆಸೆದು ಕಾರು ಮುಂದೆ ಹೋಗುತ್ತದೆ.
ಖಾಲಿ ಬಾಟಲಿ ಎತ್ತಿಕೊಂಡು ಅವರಿಬ್ಬರೂ ಕಾರನ್ನು ಹಿಂಬಾಲಿಸುತ್ತಾರೆ. ಹೊಂಡ ಗುಂಡಿ ಮೆಟ್ಟಿಲು ಚರಂಡಿ ಎಲ್ಲೆಲ್ಲೂ
ಸಲೀಸಾಗಿ ಓಡುವ ಬಂಡಿ! ಅಂತೂ ಕೊನೆಗೆ ಇನ್ನೊಂದು ಟ್ರಾಫಿಕ್ ಸಿಗ್ನಲ್ಲಿನಲ್ಲಿ ಕಾರು ನಿಂತಿರುತ್ತದೆ. ಆ ಹುಡುಗಿ ಖಾಲಿ
ಬಾಟಲಿಯನ್ನು ಅದೆ ಕಾರಿನೊಳಗೆ ಹಾಕಿ ಟಾಟ ಮಾಡಿ ಹೋಗುತ್ತಾರೆ!
ಇದಿಷ್ಟು ಆ ಜಾಹಿರಾತು! ಈ ಜಾಹಿರಾತಿನಿಂದ ಮಲ್ಲಣ್ಣ ಬಹಳ ಪ್ರೇರಿತನಾಗುತ್ತಾನೆ. ಏನಾದರೂ ಸಮಾಜ ಕಲ್ಯಾಣ
ಕಾರ್ಯ ಮಾಡಬೇಕೆಂಬ ಮಹದಾಸೆ ಮಲ್ಲಣ್ಣನ ಮನದಲ್ಲಿ ಮೂಡುತ್ತದೆ.
ಎಂದಿನಂತೆ ಮಲ್ಲಣ್ಣ ಆಫೀಸಿಗೆ ಬೈಕಿನಲ್ಲಿ ಹೋಗ್ತಾ ಇದ್ದ. ಸಿಗ್ನಲ್ಲಿನಲ್ಲಿ ನಿಂತಿದ್ದ ಅವನ ಪಕ್ಕ ಒಂದು ಕಾರು ಬಂದು ನಿಂತಿತು.
ಅದರಲ್ಲಿ ಮೂರ್ನಾಲ್ಕು ಹುಡುಗರು ಜೋರಾಗಿ ಮ್ಯುಸಿಕ್ ಹಾಕಿಕೊಂಡು ತಾವೂ ಹಾಡುತ್ತಾ ಕೇಕೆ ಹಾಕುತ್ತಿದ್ದರು. ಕುಡಿದ ನೀರಿನ
ಖಾಲಿ ಬಾಟಲಿಯೊಂದನ್ನು ಹೊರಗೆಸೆದ ಹುಡುಗರು ಕಾರನ್ನು ರೊಯ್ಯನೆ ಮುಂದಕ್ಕೆ ಓಡಿಸಿದರು.
ಈ ದೃಶ್ಯವನ್ನು ಕಂಡ ನಮ್ಮ ಮಲ್ಲಣ್ಣನ ಮಾನವೀಯತೆ ಜಾಗೃತಗೊಳ್ಳುತ್ತದೆ. ಜಾಹಿರಾತು ಸ್ಮೃತಿ ಪಟಲದ ಮೇಲೆ ಮೂಡಿ
ಮರೆಯಾಗುತ್ತದೆ. ಬಾಟಲಿ ಎತ್ತಿಕೊಂಡು ಕಾರಿನ ಹಿಂದೆ ಓಡುವ ಮನಸ್ಸು ಮಾಡುತ್ತಾನೆ. ಆದರೆ ಆ ಬಾಟಲಿಯೇ ಬಿದ್ದ ಸ್ಥಳದಲ್ಲಿ
ಇರಲಿಲ್ಲ! ಎಲ್ಲಾ ವಾಹನಗಳ ಚಕ್ರದಡಿ ಸಿಕ್ಕಿ ರಸ್ತೆಯ ಯಾವ ಮೂಲೆ ಸೇರಿತ್ತೋ ಬಲ್ಲವರಾರು?
ಆ ಬಾಟಲಿ ಇಲ್ಲದಿದ್ದರೇನಂತೆ? ಖಾಲಿ ಬಾಟಲಿಗಳಿಗೆ ಬರವೇ......! ರಸ್ತೆಬದಿಯಲ್ಲಿ ಬಿದ್ದಿದ್ದ ಹಳೆ ಬಾಟಲಿಯನ್ನೇ ಎತ್ತಿಕೊಂಡು
ಹೊರಟ ಮಲ್ಲಣ್ಣ.
ಬೈಕ್ ವೇಗವಾಗಿ ಓಡಿಸುತ್ತಾ ಕಾರನ್ನು ಹಿಂಬಾಲಿಸಿದ. ಹೊಂಡ ಗುಂಡಿ ಮೆಟ್ಟಿಲುಗಳ ಮೇಲೆ ಬೈಕ್ ಓಡಿಸುವ ಸಾಹಸ ಮಾತ್ರ
ಮಾಡಲಿಲ್ಲ!
ಅಂತೂ ಕೊನೆಗೆ ಆ ಕಾರನ್ನು ಹಿಡಿದೇ ಬಿಟ್ಟ. ನಿಂತ ಕಾರಿನ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕಾರಿನ ಗಾಜು ತಟ್ಟಿದ ಥೇಟ್ ಜಾಹಿರಾತಿನ
ಶೈಲಿಯಲ್ಲಿ! ಕಿಟಕಿ ಗಾಜು ಕೆಳಗಿಳಿಯುತ್ತಿದ್ದಂತೆ ಬಾಟಲಿಯನ್ನು ಕಾರೊಳಗೆ ಎಸೆದು ಟಾಟಾ ಮಾಡಿ ಬೈಕ್ ಮುಂದಕ್ಕೆ ಓಡಿಸಿದ
ಮಲ್ಲಣ್ಣ!
ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲ. ಪಜೀತಿ ಶುರು ಆಗಿದ್ದೇ ಆಗ!
ಕಾರಿನೊಳಗೆ ಇದ್ದ ಹುಡುಗರ ಪಿತ್ತ ನೆತ್ತಿಗೇರಿತು. ಜೊತೆಗೇ ಬೀರಿನ ಕುಮ್ಮಕ್ಕು ಇತ್ತೆನ್ನಿ! ಮಲ್ಲಣ್ಣನ ಬೈಕನ್ನು ಅಡ್ಡಗಟ್ಟಿ ನಿಲ್ಲಿಸಿದ
ಹುಡುಗರು ಕಾರಿನಿಂದ ಕೆಳಗಿಳಿದರು. ಬಲವಾದ ಹಸ್ತವೊಂದು ಮುಖಕ್ಕೆ ಅಪ್ಪಳಿಸಿದ್ದಷ್ಟೇ ಗೊತ್ತು. ಮುಂದೇ ಮಲ್ಲಣ್ಣ ಆಸ್ಪತ್ರೆಯ
ಹಾಸಿಗೆಯಲ್ಲೇ ಕಣ್ ತೆರೆದಿದ್ದು! ಆಸ್ಪತ್ರೆಯಿಂದ ಮೂರು ದಿನದ ನಂತರ ಮನೆಗೆ ಬಂದ ಮಲ್ಲಣ್ಣ ಮತ್ತೆ ಆ ಜಾಹಿರಾತನ್ನು ನೋಡಲೇ ಇಲ್ಲ!
ಒಂದು ವಿಷಯ ಅವನಿಗೆ ಅರ್ಥವಾಗದೆ ಉಳಿದಿತ್ತು. ಅದೇನೆಂದರೆ ಜಾಹಿರಾತಿನಲ್ಲಿ ಈ ಭಾಗವನ್ನು ಯಾಕೆ ತೋರಿಸಲಿಲ್ಲ?
ನಿಮಗೇನಾದರೂ ಕಾರಣ ಗೊತ್ತಿದ್ದರೆ ಪಾಪ ನಮ್ಮ ಮಲ್ಲಣ್ಣನಿಗೆ ಸ್ವಲ್ಪ ತಿಳಿಸ್ತೀರಾ? ಬಾರೀ ತಲೆ ಕೆಡಿಸಿಕೊಂಡು ಯೋಚಿಸ್ತಿದ್ದಾನೆ!
ಚನ್ನಾಗಿದೆ ನಿಮ್ಮ ಮಲ್ಲಣ್ಣನ ಪಜೀತಿಯ ಕತೆ
ReplyDeleteಜಾಹಿರತುಗಳು ಮುಗ್ದ ಮನಸ್ಸುಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಜಾಹಿರಾತುದಾರರಿಗೆ ಹೇಗೆ ಅರ್ಥವಾಗುತ್ತದೆ ಸಾರ್
ಹೊನ್ನ ಹನಿ
www.honnahani.blogspot.com
hmmm ಸ್ವಲ್ಪ ಜಾಸ್ತಿ ತೋರ್ಸಿದ್ರೆ ಅವ್ರು ಜಾಸ್ತಿ ಹಣ ಕಟ್ಟಬೇಕು...ಈ ವಿಷ್ಯ ಮಲ್ಲನ್ನನಿಗೆ ತಿಳಿಸಿ..ಚನ್ನಾಗಿದೆ ಪಾಪ ಮಲ್ಲಣ್ಣ
ReplyDeleteಮಲ್ಲಣ್ಣನಿಗೆ ಈಗ ದುಡ್ಡು ಕೊಟ್ಟರೂ ಈ ಜಾಹೀರಾತು ಮಾಡಲಾರ!ಮುಂದೆ ಟಿ.ವಿ.ಯಲ್ಲಿ ತೋರಿಸದೇ ಇದ್ದ ಭಾಗ ನೆನಸಿಕೊಂಡು!ಹಾಸ್ಯ ಲೇಖನ ಚೆನ್ನಾಗಿದೆ.
ReplyDeleteಜಾಹಿರಾತಿನಲ್ಲಿ ’ಆ’ ಭಾಗವನ್ನು ತೋರಿಸಿದ್ದರೆ ನೀವು ನಮ್ಮನ್ನು ಇಂತಹ ನವಿರು ಹಾಸ್ಯದೊಂದಿಗೆ ನಗಿಸಲಾಗುತ್ತಿರಲಿಲ್ಲ !.:) ಜಾಹಿರಾತೊಂದನ್ನು ಬಳಸಿ ಚೆನ್ನಾಗಿ ನಗಿಸಿದಿರಿ.
ReplyDeleteನಿಮ್ಮ blog Text color change ಮಾಡಾಬಹುದ ??
praveen,
ReplyDeletehha hhhaaa... sakkattaagide mallannana kathe..... jaahiraatu yaavaagaloo ardhamardha taane torisodu............ mallaNNana pajeeti nenasikondre
haasya chennaagide.. paapa mallanna...!!!!!
ReplyDeleteha..ha..ha ...
ReplyDeleteನನ್ನ ಮನದ ಭಾವಕೆ...................
ReplyDeleteಮಲ್ಲಣ್ಣನಿಗೆ ಖಂಡಿತಾ ಹೇಳ್ತೀನಿ.
ಧನ್ಯವಾದಗಳು.
ಹರೀಶ್,
ReplyDeleteಜಾಹಿರಾತುದಾರರಿಗೆ ಹಣವೊಂದೇ ಮುಖ್ಯವಲ್ಲವೆ? ಯಾರ ಮನಸ್ಸಿನ ಮೇಲೋ ಆಗುವ ಪರಿಣಾಮ ಇವರಿಗೆಲ್ಲಿ ತಟ್ಟುತ್ತದೆ?
ಪ್ರತಿಕ್ರಿಯೆಗೆ ಧನ್ಯವಾದಗಳು........
ಡಾ. ಕೃಷ್ಣಮೂರ್ತಿ ಸರ್,
ReplyDeleteಜಾಹಿರಾತು ಮಾಡುವುದಿರಲಿ, ನೋಡುವ ಸಾಹಸವನ್ನೂ ಮಾಡಲಾರ!
ಧನ್ಯವಾದಗಳು ಸರ್........
ಸುಬ್ರಮಣ್ಯ ಸರ್,
ReplyDeleteದನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ........
blog text color change ಮಾಡಿದ್ದೇನೆ. ಈಗ ಸರಿಯಾಗಿದೆಯಾ?
Thanks for your suggestion...
ದಿನಕರ್ ಸರ್,
ReplyDeleteಜಾಹಿರಾತು ಅರ್ಧಂಬರ್ದ ಅಂತ ಮಲ್ಲಣ್ಣನಿಗೆ ಗೊತ್ತಾಗಿದ್ದೆ ಈಗ!
ಬಂದು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು
ವಿಜಯಶ್ರೀ ಮೇಡಂ,
ReplyDeleteಮಲ್ಲಣ್ಣನ ಪಜೀತಿಗೆ ಪಾಪ ಅನ್ನದೆ ಬೇರೆ ವಿದಿಯಿಲ್ಲ!
ಧನ್ಯವಾದಗಳು.........
ಸುಮಾ ಮೇಡಂ,
ReplyDeleteಧನ್ಯವಾದಗಳು.
ಮಲ್ಲಣ್ಣ ಮಂಗ್ಯ ಆದ ಅನ್ನಿ,, ಚೆನ್ನಾಗಿದೆ ಹಾಸ್ಯ ಲೇಖನ
ReplyDeleteಹೋ ಹೋ ಹೋ! ಮಲ್ಲಣ್ಣ ಟೀವಿ ನೋಡೋದೇ ಬಿಟ್ಟಿರಬೇಕು?
ReplyDeletehi...
ReplyDeletetumba chennagittu
Tumba channagide article...Ella ok ee mallanna yaake ... idu real storyna or fictitious???
ReplyDeletehaa haa haaa, superb means superb....
ReplyDeleteha, haa, haa, superb means superb.
ReplyDeleteheh he... :-D
ReplyDeleteBhat Chandru,
ReplyDeleteThank you.......
ಸುನಾಥ್ ಸರ್,
ReplyDeleteಟೀವಿ ನೋಡಿದರೂ ಜಾಹಿರಾತು ನೋಡುವುದೇ ಇಲ್ಲ!
ಧನ್ಯವಾದಗಳು ಪ್ರತಿಕ್ರಿಯೆಗೆ........
ಶೆಟ್ಟರೆ,
ReplyDeleteತುಂಬಾ ಧನ್ಯವಾದಗಳು.......
available ಪ್ರವೀಣ್ ಆರ್ ಗೌಡ:
ReplyDeleteವಿನಾಯಕ್ ಹೆಗ್ಡೆ,
ಇದು ಜಾಹಿರಾತು ಪ್ರಚೋದಿತ ಕಾಲ್ಪನಿಕ ಬರಹ............
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.......
ಸಾಗರಿ..............
ReplyDeleteನನ್ನ ಬ್ಲಾಗಿಗೆ ಸ್ವಾಗತ.........
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.......
ಸಾಗರಿ..............
ReplyDeleteನನ್ನ ಬ್ಲಾಗಿಗೆ ಸ್ವಾಗತ.........
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.......
Arun sir,
ReplyDeleteThank you.........
ಪ್ರವೀಣ್..
ReplyDeleteಜಾಹಿರಾತುಗಳ ಹಾವಳಿ ಬಗೆಗೆ ಬೇಸರವಾಯಿತು..
ಪೆಟ್ಟು ತಿಂದರೂ.. ಮುಗ್ಧ ಮಲ್ಲಣ್ಣ ಇಷ್ಟವಾಗುತ್ತಾನೆ..
ಚಂದದ ಬರಹಕ್ಕೆ ಅಭಿನಂದನೆಗಳು...
ಪ್ರವೀಣ್, ಜಾಹೀರಾತಿನ ಹಿಂದು ಮುಂದು ತಿಳಿಯದೇ ಏನೂ ಮಾಡಬಾರದು ಎನ್ನುವ ಗೋಲ್ಡನ್ ರೂಲ್ ಮಲ್ಲಣ್ಣನಿಗೆ ತಿಳಿದಿರಲಿಲ್ಲ ಅನ್ಸುತ್ತೆ...ಈಗ ತಿಳಿತಲ್ಲಾ..ಹಹಹ ಒಳ್ಳೇ ಮಲ್ಲಣ್ಣ...!!!
ReplyDeletechennagide haasya:))
ReplyDeletechennaagide Praveen, idannella jaheeraatu tayaarakaru gamanisabeku allave? mugdha vyaktige aada shikshe nodi paapaa annisitu.
ReplyDeleteಹ್ಹ ಹ್ಹ ಹ್ಹಾ........
ReplyDeleteಯಾರಪ್ಪ ಈ ಮಲ್ಲಣ್ಣ.........
ಪಾಪ ಮಲ್ಲಣ್ಣನ ಪಜೀತಿಗೆ ಅಳಬೇಕೋ ನಗಬೇಕೋ ಗೊತ್ತಾಗ್ತಾ ಇಲ್ಲ!
ಹಾಸ್ಯ ಲೇಖನ ಚೆನ್ನಾಗಿದೆ. ಮಲ್ಲಣ್ಣನ ಮುಗ್ಧತೆ ಇಷ್ಟವಾಯಿತು ಜೊತೆಗೆ ಅವನ ಪಜೀತಿ ನಗಿಸಿದರೂ ಯಾಕೋ ಬೇಜಾರೂ ಆಯಿತು.
ReplyDeleteಪ್ರಕಾಶಣ್ಣ.........
ReplyDeleteಇಂದಿನ ಜಾಹಿರಾತುಗಳ ಗುನಮತ್ತವೆ ಹಾಗೆ..., ಅದರಿಂದಾಗುವ ಪರಿಣಾಮಗಳ ಮರಿವೆಯೇ ಇರುವುದಿಲ್ಲ.....
ಪ್ರತಿಕ್ರಿಯೆಗೆ ಧನ್ಯವಾದಗಳು.....
ಅಜಾದ್ ಸರ್,
ReplyDeleteಆ ಗೋಲ್ಡನ್ ರೂಲ್ ಮಲ್ಲಣ್ಣನಿಗೆ ಗೊತ್ತಿದ್ದರೆ ಈ ಪಜೀತಿ ಎಲ್ಲಾಗುತ್ತಿತ್ತು?
ಧನ್ಯವಾದಗಳು.......
Vanita Madam...
ReplyDeleteWel come to my blog.....
Thank you for your comment..........
ವಿ ಆರ್ ಭಟ್ ಸರ್,
ReplyDeleteಜಾಹಿರಾತು ಮಾಡುವವರಿಗೆ ಕೇವಲ ಹಣ ಮಾತ್ರ ಮುಖ್ಯ. ಹೊಣೆಯಲ್ಲ. ಅದರಿಂದ ಯಾರಿಗೋ ತೊಂದರೆಯಾದರೆ ಅವರಿಗೇನು?
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
ಅಂದಿನಿ.........
ReplyDeleteಅಳುವುದೂ ಬೇಡ, ನಗುವುದೂ ಬೇಡ. ಅದರ ಬಗ್ಗೆ ಯೋಚಿಸು ಅಷ್ಟೇ....
ಧನ್ಯವಾದಗಳು......
ಸೀತಾರಾಮ್ ಸರ್,
ReplyDeleteಜಾಹಿರಾತಿನ ಹಾವಳಿ ದಿನ ದಿನ ಹೆಚ್ಚುತ್ತಿದೆ. ಜಾಹಿರಾತಿನ ಪರಿಣಾಮವೂ ಕೂಡಾ....
ಎಷ್ಟೋ ಮುಗ್ದ ಮನಸ್ಸುಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿವೆ.......
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ......
nija, nija jahiratugalu vichitravaagirtave, chennagide nimma baraha.
ReplyDeleteNRK,
ReplyDeletewelcome to my blog.......
thanks for your comment.........
ಪಾಪ ಮಲ್ಲಣ್ಣ ...ಹ್ಹಾ ಹ್ಹಾ ಹ್ಹಾ
ReplyDeleteಶಶಿ ಅಕ್ಕ.....
ReplyDeleteಹೌದು ಕಣ್ರೀ, ಪಾಪ ಮಲ್ಲಣ್ಣ..........
ಧನ್ಯವಾದಗಳು.........
ಚನ್ನಾಗಿದೆ
ReplyDeleteಹ್ಹಾ ಹ್ಹಾ ಹ್ಹಾ...
ReplyDeleteನವಿರು ಹಾಸ್ಯ ಸೂಪರ್....
ಪಾಪ ಮುಗ್ಧ ಮಲ್ಲಣ್ಣ ......
ha ha ha... mast ide ri :)
ReplyDeleteಸುಬ್ರಮಣ್ಯ ಮಾಚಿಕೊಪ್ಪ,
ReplyDeleteಧನ್ಯವಾದಗಳು.........
ಸವಿಗನಸು,
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ......
ಆಗಾಗ ಬರ್ತಾ ಇರಿ.........
Vasant,
ReplyDeleteWelcome to my blog
and thanks for your comment...
keep visiting.......
ಶಿವಪ್ರಕಾಶ್,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು......
ನಿಮ್ಮ ಮಲ್ಲಣ್ಣನ ಕತೆ ಕೇಳಿ ಅಯ್ಯೋ ಎನಿಸಿತು.
ReplyDeleteravi
ರವಿ ಹೆಗಡೆಯವರೇ.......
ReplyDeleteನನ್ನ ಬ್ಲಾಗಿಗೆ ಸ್ವಾಗತ.........
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ಹೀಗೆ ಆಗಾಗ ಬರ್ತಾ ಇರಿ.......
ಹ್ಹ ಹ್ಹ.. ಆದ್ರೂ ಪಾಪ ಮಲ್ಲಣ್ಣ :)
ReplyDeleteಕಥೆ ಚೆನ್ನಾಗಿದೆ ಮಾರಾಯ್ರೇ... ಅದು ಮಲ್ಲಣ್ಣ ಖಾಲಿ ಹಳೆ ಬಾಟಲಿ ಬಿಸಾದಿದ್ದಕ್ಕೆ ಹುಡುಗರಿಗೆ ಕೋಪ ಬಂದಿರಬಹುದು..ಮುಂದೆ ತುಂಬಿದ ಬೀರ್ ಬಾಟಲಿ ಎಸೆಯಲು ಹೇಳಿ :)
ReplyDelete:D :D ಪಾಪಾ.... ಮಲ್ಲಮ್ಮನ ಪವಾಡದ ಕಥೆಯಂತೇ ಮಲ್ಲಣ್ಣನ ಸಾಹಸ ಎಂದರೆ ಸರಿಯಾದೀತೇನೋ... :) ಅಂದಹಾಗೆ ಇದು ನಿಜವಾಗಿ ನಡೆದದ್ದೇ?
ReplyDeletePaLa ಅವರೇ,
ReplyDeleteನನ್ನ ಬ್ಲಾಗಿಗೆ ಸ್ವಾಗತ.............
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ರವಿಕಾಂತ್ ಗೋರೆಯವರೇ,
ReplyDeleteಸ್ವಾಗತ ನಿಮಗೆ.........
ಇನ್ನೊಮ್ಮೆ ಬಾಟಲಿ ಎಸೆಯುವಾಗ ತುಂಬಿದ ಬೀರ್ ಬಾಟಲಿಯನ್ನೇ ಎಸೆಯುವಂತೆ ಮಲ್ಲನ್ನನಿಗೆ ಹೇಳುತ್ತೇನೆ........!
ಪ್ರತಿಕ್ರಿಯೆಗೆ ಧನ್ಯವಾದಗಳು.
ಆಗಾಗ ಬರ್ತಾ ಇರಿ.
ತೇಜಕ್ಕಾ........
ReplyDeleteಬಹಳ ದಿನಗಳ ನಂತರ ಇತ್ತ ಬಂದಿದ್ದಕ್ಕೆ ಧನ್ಯವಾದಗಳು.
ಜಾಹಿರಾತನ್ನು ನೋಡಿ ನನ್ನ ಕಲ್ಪನೆಗೆ ಬಂದಿದ್ದನ್ನು ನಿಮ್ಮೆಲ್ಲರ ಮುಂದೇ ಬರವಣಿಗೆಯ ಮೂಲಕ ಒಪ್ಪಿಸಿದ್ದೇನೆ ಅಷ್ಟೇ!
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
ಆಗಾಗ ಬರುವುದನ್ನು ಮರೆಯಬೇಡಿ.
Hi Praveen..
ReplyDeleteMallannanna Pajeetige sikkisibittiralla :) hasya mishrita baraha chennagide.. next time mallannange husharagi iroke heli :)
pravi
tumba chennagide sir mallannana story.
ReplyDeleteha ha ha
Raaghu.
ಮನದಾಳದಿಂದ............ ,
ReplyDeleteತೇಜಸ್ವಿ ಅವರ ಕರ್ವಾಲೋ ಕಾದಂಬರಿಯಲ್ಲಿ ಈ ರೀತಿ ಮಂದಣ್ಣ ಇದಾನೆ..
ಚೆನ್ನಾಗಿದೆ.
ಪ್ರವೀಣ್,
ReplyDeleteಧನ್ಯವಾದಗಳು ಪ್ರತಿಕ್ರಿಯೆಗೆ,
ರಘು,
ReplyDeleteಪ್ರತಿಕ್ರಿಯೆಗೆ ಧನ್ಯವಾದಗಳು.
ಜ್ಞಾನಾರ್ಪಣಮಸ್ತು,
ReplyDeleteಬ್ಲಾಗಿಗೆ ಸ್ವಾಗತ,
ಪ್ರತಿಕ್ರಿಯೆಗೆ ಧನಯವಾದಗಳು. ಹೀಗೆ ಬರ್ತಾ ಇರಿ.
ಪ್ರವೀಣ್ ಸರ್....
ReplyDeleteತಡವಾಗಿ ಪ್ರತಿಕ್ರಿಯಿಸುತಿದ್ದೇನೆ. ಕ್ಷಮೆ ಇರಲಿ....
ಓದಿ ಅಳಬೇಕೋ ನಗಬೇಕೋ ತಿಳಿಯಲಿಲ್ಲ...ಮಲ್ಲಣ್ಣನ ಫಜೀತಿ ಚೆನ್ನಾಗಿತ್ತು...
ಅಶೋಕ್,
ReplyDeleteಒಮ್ಮೆ ನಕ್ಕು ಬಿಡಿ, ಅಳುವುದ್ಯಾಕೆ?
ಧನ್ಯವಾದಗಳು.