Sunday, June 6, 2010

ಪರಿಣಾಮ.........?





 ನನ್ನೆದೆಯ ಮೇಲೆ 
ಒರಗಿದ್ದ ನನ್ನಾಕೆ
ಮುಂಗುರುಳ ತೀಡಿ 
ಸಿಹಿಮುತ್ತನಿತ್ತಳು...........!

ಪರಿಣಾಮ...........?
 ಅತಿ ಮಧುರ 
ಸುಖದಲ್ಲಿ
ಮೈಮರೆತಿದ್ದಾಗ
ತಣ್ಣೀರ ತಂದು 
ತಲೆಮೇಲೆ ಸುರಿದಿದ್ದಳು........!

ಸುಂದರ ಸವಿಗನಸು
ಕಂಡು ಕಣ್ ಬಿಟ್ಟರಲ್ಲಿ
ಕೆಂಗಣ್ಣ ಮೀನಾಕ್ಷಿಯ
 ದುರುಗುಟ್ಟುತ್ತಿದ್ದಳು..........!
 ಖಾಲಿ ಬಿಂದಿಗೆ 
ಹಿಡಿದ ನನ್ನಾಕೆ
ಕನಸಿಗೂ ವಾಸ್ತವಕೂ
ಹೋಲಿಕೆಯೇ ಇಲ್ಲದಂತೆ...........!




35 comments:

  1. ವಾವ್!
    ಅಂತೂ ನಿನ್ನ ಪರಿಸ್ತಿತಿ ಹೀಗೂ ಉಂಟು ಅಂತು?
    ಚಂದದ ಕವನ....

    ReplyDelete
  2. meenakshige kopa barohage neevenu madidri??. Chennagide.

    ReplyDelete
  3. ಮನಸ್ಸಿನ ಪ್ರೀತಿ ದೊಡ್ಡದು..ಒಳ್ಳೆಯ ಸಾಲುಗಳು.
    ನಿಮ್ಮವ,
    ರಾಘು.

    ReplyDelete
  4. ಪ್ರವೀಣ್
    ಕವನ ಚೆನ್ನಾಗಿದೆ.ಇನ್ನೂ ಮೇಲೆ ಮೀನಾಕ್ಷಿ ಇಲ್ಲದಾಗ ಸವಿಗನಸನ್ನು ಕಾಣಿರಿ..

    ReplyDelete
  5. This comment has been removed by the author.

    ReplyDelete
  6. ವಾಹ್... ಪ್ರವೀಣ್..
    ಸರಳ ಶಬ್ಧಗಲಲ್ಲಿ
    ಸೊಗಸಾಗಿ ಮಿಂಚಿದ್ದೀರಿ..

    ತುಂಟತನ ಬಹಳ ಇಷ್ಟವಾಗಿ ಬಿಡುತ್ತದೆ..

    ಅಭಿನಂದನೆಗಳು... ಚಂದದ ಕವಿತೆಗೆ...

    ReplyDelete
  7. ಶ್ರೀಕಾಂತ್ ಸರ್,
    ಧನ್ಯವಾದಗಳು.........

    ReplyDelete
  8. ಏನು ಮಾಡ್ಲಿ ಹೇಳು ಪುಟ್ಟಿ,
    ಪಡೆದುಕೊಂಡು ಬಂದದ್ದಲ್ವಾ?????

    ReplyDelete
  9. ನಿಶಾ ಮೇಡಂ,
    ಮೀನಾಕ್ಷಿಗೆ ಕೋಪ ಬರಲು ಕಾರಣ ಬೇಕಾ?
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  10. ಕನಸು ಮತ್ತು ವಾಸ್ತವ ಚೆನ್ನಾಗಿದೆ.ಅಭಿನ೦ದನೆಗಳು.

    ReplyDelete
  11. ರಾಘು sir........
    ಮನಸಿನ ಪ್ರೀತಿ ಮನಸಿನೊಳಗೆ ಇದ್ದರೇ?
    ಧನ್ಯವಾದಗಳು. ಹೀಗೆ ಬರ್ತಾ ಇರಿ......

    ReplyDelete
  12. Shashi madam,

    ನಿಮ್ಮ ಆಜ್ಞೆ ಶಿರಸಾ ಪಾಲಿಸುತ್ತೇನೆ!
    ಆದರೆ ಆ ಸವಿಗನಸುಗಳು ಅವಳಿಲ್ಲದಿದ್ದಾಗ ಬರದೆ ಇದ್ರೆ?
    ಸಲಹೆಗೆ ಧನ್ಯವಾದಗಳು.

    ReplyDelete
  13. ಪ್ರಕಾಶಣ್ಣ
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.......
    ಆ ತುಂಟತನ ಅವಳಿಗೆ ಅರ್ಥ ಅಗ್ತಿಲ್ವಲ್ಲಾ? ಏನು ಮಾಡೋದು???????????

    ReplyDelete
  14. ಪ್ರೀತಿಯ ಕು. ಸು. ಅವರೇ
    ಧನ್ಯವಾದ.
    ಆಗಾಗ ಬರ್ತಾ ಇರಿ.

    ReplyDelete
  15. tuntara tunta na manadaalada maatu chennaagide! aadare tuntige arthavaagilla tuntana tuntatana! athavaa tuntanige artha maadisalaagilla!

    ReplyDelete
  16. ಯಾಕ್ ಸಾರ್ ಅಷ್ಟೊತ್ ಮಲಗಿದ್ರಿ, ಬೇಗ ಏಳ್ಬಾರ್ದಾ ?? !. :)

    ReplyDelete
  17. praveen sir,
    vaastavakkoo, kanasigoo iro antarave idu........ bega arthamaadikoLLI........

    ReplyDelete
  18. ಪ್ರವೀಣ್ ಸರ್ .. ಅದಿಕ್ಕೆ ವಾಸ್ತವ ಭಯಂಕರ ಕನಸೇ ಚಂದ ಅನ್ನೋದು ಅಲ್ವ ! ಹ್ಹ ಹ್ಹ ಹ್ಹ
    ತುಂಬಾ ಚೆನ್ನಾಗಿದೆ ಕವನ ..:)

    ReplyDelete
  19. ಸುಭ್ರಮಣ್ಯ ಅವರೇ,
    ಏನು ಮಾಡೋಣ ಹೇಳಿ, ಕನಸಲ್ಲಾದರೂ ಸುಖವಾಗಿದೆಯಲ್ಲಾ ಅಂತ ಮಲಗಿದೆ.....
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  20. ಸೀತಾರಾಂ ಸರ್,
    ತುಂಟಿಗೆ ಅರ್ಥವಾಗಿಲ್ವೋ ಅಥವಾ ತುಂಟನಿಗೆ ಅರ್ಥಮಾಡಿಸಲು ಆಗಿಲ್ಲವೋ ನನಗೆ ಇನ್ನೂ ಅರ್ಥ ಆಗಿಲ್ಲ!
    ಧನ್ಯವಾದಗಳು.

    ReplyDelete
  21. ದಿನಕರ್ ಸರ್,
    ಆಯ್ತು, ಆದಷ್ಟು ಬೇಗ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ.
    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  22. ರಂಜಿತಾ ಮೇಡಂ,
    ನಿಮ್ಮ ಮಾತು ನಿಜ........
    ಕನಸು ಕಾಣೋದು ಕಷ್ಟ ರಹಿತ, ಖರ್ಚು ರಹಿತ!
    ಧನ್ಯವಾದಗಳು.

    ReplyDelete
  23. hehehe chennaagide kavana
    :-)
    malathi S

    ReplyDelete
  24. ಹಾಯ್ ಪ್ರವೀಣ್ ಸರ್

    ಸರಳ ಪದಗಳ ಸುಂದರ ಕವನ...ತುಂಬಾ ಚೆನ್ನಾಗಿದೆ....

    ReplyDelete
  25. Malathi medam,
    thank you for your kind visit and comment.

    ReplyDelete
  26. ವಿಜಯಶ್ರೀ ಮೇಡಂ,
    ಧನ್ಯವಾದಗಳು.....
    ಭರ್ತಾ ಇರಿ.

    ReplyDelete
  27. ಕನಸಿಗೂ ವಾಸ್ತವಕ್ಕೂ ಏನಪ್ಪಾ ಅಂತರ?
    ನನಗೂ ನನ್ನವಳಿಗೂ ನಡುವಿದ್ದಷ್ಟು ಅಂತೀರಾ? ಹಹಹ ಅಂತೂ ಕನಸಲ್ಲಾದರೂ ನಿಮ್ಮವಳು ಮುಂಗುರಳನ್ನ ತೀಡ್ತಾಳಲ್ಲ....ಹಹಹ್ಹ

    ReplyDelete
  28. ಅಜಾದ ಸರ್,
    ಇನ್ನೇನಿದೆ? ಅಷ್ಟೇ ಸ್ವಾಮಿ........
    ಧನ್ಯವಾದಗಳು........

    ReplyDelete
  29. ಪ್ರವೀಣ್ ರವರೆ ನಿಮ್ಮಾಕೆಯ ಬಗ್ಗೆ ಬರೆದಿರುವ ಕವನ ಚನ್ನಾಗಿದೆ ಅದರಲ್ಲಿ
    ಖಾಲಿ ಬಿಂದಿಗೆ
    ಹಿಡಿದ ನನ್ನಾಕೆ
    ಕನಸಿಗೂ ವಾಸ್ತವಕೂ
    ಹೋಲಿಕೆಯೇ ಇಲ್ಲದಂತೆ...........!

    ಈ ಸಾಲುಗಳು ಚನ್ನಾಗಿವೆ.

    ಹೊನ್ನಹನಿ
    http://www.honnahani.blogspot.com

    ReplyDelete
  30. ಹರೀಶ್.........
    ನನ್ನ ಬ್ಲಾಗಿಗೆ ಸ್ವಾಗತ......
    ಕನಸಿಗೂ ವಾಸ್ತವಕ್ಕೂ ಹೋಲಿಕೆಯೇ ಇರುವುದಿಲ್ಲ ಅಲ್ಲವಾ?
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.....

    ReplyDelete