ಆರೋಗ್ಯ ಕೈಕೊಟ್ಟು ಹತ್ತು ದಿನ ಆಸ್ಪತ್ರೆಯ ಹಾಸಿಗೆಯಲ್ಲಿ ಮಲಗಿ ಬ್ಲಾಗ್ ಲೋಕದತ್ತ ಬರಲಾಗಿರಲಿಲ್ಲ. ಯಾರ ಬ್ಲಾಗಿಗೂ ಬೇಟಿ ಕೊಡಲಿಲ್ಲ. ದಯವಿಟ್ಟು ಕ್ಷಮಿಸ್ತೀರಲ್ಲ!ಈಗ ಮನೆಯಲ್ಲಿ ಬೆಡ್ ರೆಸ್ಟ್ ತೆಗೆದುಕೊಳ್ತಾ ಇದ್ದೇನೆ. ಜೊತೆಗೇ ನನ್ನ ಲ್ಯಾಪ್ ಕೂಡ ನನ್ನ ಕೈ ಸೇರಿದೆ! ಇನ್ನು ಎಲ್ಲಾ ಗೆಳೆಯರ ಬ್ಲಾಗಿಗೂ ಬರುತ್ತೇನೆ.
ಈ ಕವನ ಸುಮಾರು ಎಂಟು ವರ್ಷಗಳ ಹಿಂದೆ ಅವಳನ್ನು ನೋಡಿದಾಗ ಬರೆದದ್ದು. ಡೈರಿಯ ಯಾವುದೋ ಮೂಲೆಯಲ್ಲಿದ್ದ ಈ ಕವನವನ್ನು ಈಗ ನಿಮ್ಮ ಮುಂದಿಟ್ಟಿದ್ದೇನೆ. ಹೇಗಿದೆ ಅಂತ ಹೇಳಿ.
ಆಕೆಯಿಂದ ಬಂದ ಅಭಿಪ್ರಾಯ ಏನು ಗೊತ್ತಾ?
"ತುಂಬಾ ಕೆಟ್ಟದಾಗಿದೆ"
ನಿಜವಾಗಿಯೂ ಅಷ್ಟು ಕೆಟ್ಟದಾಗಿದೆಯಾ? ನೀವೇ ಹೇಳ್ಬೇಕು.................
ಬಳುಕುವ ವಯ್ಯಾರಕೆ..........
ನಾ ಮರೆತು ಹೋದೆ ಜಗವಾ
ನಾ ಮರೆತು ಹೋದೆ ಜಗವಾ
ಮನ್ಮಥನ ರಾಣಿಯ ಹೋಲುವ ನೀನು
ರತಿದೇವಿಯ ತಂಗಿಯೇ
ಆಗಸದಿಂದ ಧರೆಗಿಳಿದ ರಂಭೆ
ಊರ್ವಶಿಯ ಪ್ರತಿರೂಪವೇ...........
ನವಿಲ ನಾಟ್ಯದಂತೆ ನಿನ್ನ ನಡಿಗೆ
ಲತೆಯು ಬಳುಕುವಂತೆ ನಿನ್ನ ನಡುಗೆ
ನವಿಲೇ ಸೋತು ನಾಟ್ಯವ ಮರೆತು
ನಿನಗಾರು ಸಾಟಿ ಚಲುವೆ ಎಂದಿತು............
ಮೋಹದ ಆಸೆಯ ಕಂಗಳ ಕಾಂತಿಗೆ
ನಾ ಸೋತೆ ನಿನ್ನದರಕೆ
ಸೇಬಿನ ಬಣ್ಣದ ಕೆಂಪು ಕೆನ್ನೆಗೆ
ಬೆರಗಾದೆ ಸೌಂದರ್ಯಕೆ..............
ಹೃದಯವು ಹಾಡಿತು ಮೋಹದಿಂದಲಿ
ಪ್ರೀತಿ ತುಂಬಿದ ಬಯಕೆಯಿಂದಲಿ
ಸಹಿಸಲಾರೆ ನಾ ಈ ತವಕ
ನೀ ಒಲಿದರೆ ಜನುಮ ಸಾರ್ಥಕ................
ಚಲುವೆ ಮೋಹದೀ ನುಡಿಸು ನೀ
ನನ್ನ ಹೃದಯದ ವೀಣೆಯಾ
ಹೊಸಹೊಸ ರಾಗವ ಹಾಡುತ ಗೆಳತಿ
ಈ ಜೀವ ಉಳಿಸುವೆಯಾ............
ಒಲಿದು ಬಾರೆ ರತಿಯ ತಂಗಿಯೇ
ಪ್ರೀತಿ ತಾರೆ ಈ ಬರಡು ಜೀವಕೆ
ದೀಪವಾಗಿ ಬಾಳ ಬೆಳಗಿಸು
ಬೇಡವಾದರೆ ಈ ಉಸಿರ ನಿಲ್ಲಿಸು................
ಬೇಡವಾದರೆ ಈ ಉಸಿರ ನಿಲ್ಲಿಸು................
ಕವನವನ್ನು ಯಾವುದಾದರೂ ಸಿನೆಮಾ ಸಂಗೀತ ನಿರ್ದೇಶಕರಿಗೆ ಕೊಡಬಹುದು .... ಅವರದನ್ನು ಚಿತ್ರದಲ್ಲಿ ಬಳಸಿಕೊಳ್ಳಬಹುದು... ಹಾಗಿದೆ.
ReplyDeleteನಿಮ್ಮ ಆರೋಗ್ಯ ಬೇಗ ಸುಧಾರಿಸಲಿ ಎಂದು ಹಾರೈಸುವೆ.
ಅವರು ’ಪ್ರಿತಿಯಿಂದ’ ಹಾಗೆ ಹೇಳಿದ್ದಾರಷ್ಟೆ. ನಿಮಗದನ್ನು ’ಆಗ’ ಅರ್ಥೈಸಲಾಗಿಲ್ಲ !. :). ತುಂಬ ಚೆನ್ನಾಗಿದೆ.
ReplyDeletechannaagide...
ReplyDeleteall d best...
ರತಿಯನ್ನದೆ ರತಿಯ ತಂಗಿ ಅಂಥಾ ೨ನೆ ಸ್ಥಾನ ಕೊಟ್ಟಿದ್ದಕ್ಕೆ ಬಹುಶ ಅಸಮಾಧಾನದಿಂದ ಕೆಟ್ಟದ್ದಾಗಿದೆ ಅಂದಿರಬಹುದು! ನಮಗಂತೂ ಚೆನ್ನಾಗಿದೆ ಕವನ. ಬೇಗ ಗುಣಮುಖರಾಗಿ. ೨೭ಕ್ಕೆ ದೆಹಲಿಗೆ ಬರುತ್ತಾ ಇದ್ದೇನೆ.
ReplyDeleteತುಂಬಾ ತುಂಬಾ ಸೊಗಸಾಗಿದೆ
ReplyDeleteಆಕೆಗೆ ಚೆನ್ನಾಗಿದೆ ಅಂತ ಹೇಳೋ ಧೈರ್ಯ ಇರಲಿಲ್ಲವೇನೋ ಆದ್ರೆ ಒಳಗೆಲ್ಲೋ ಅನ್ಸಿರುತ್ತೆ ನನ್ನನ್ನ ಇಷ್ಟೊಂದು ಇಷ್ಟಪಡ್ತಾನ ಅಂತ .
( ನೆನಪಿಲ್ವಾ ? ::ಹೊಗಳದೆ ದೇವಿ ವರವ ಕೊಡಳು)
ಅಥವಾ, ನಿಮ್ಮನ್ನ ಬೈಯ್ಯೋಕೆ ಕಾಯ್ತಾ ಇದ್ದಾಗ ನೀವು ಕವನ ತೋರ್ಸಿದ್ದೀರ .
ಬಹುಶಃ ಬ್ಯಾಡ್ ಟೈಮಿಂಗ್ ಅಲ್ವಾ?
ಕವನ ಸುಂದರವಾಗಿದೆ . get wel soon
ತುಂಬಾ ತುಂಬಾ ಸೊಗಸಾಗಿದೆ
ReplyDeleteಆಕೆಗೆ ಚೆನ್ನಾಗಿದೆ ಅಂತ ಹೇಳೋ ಧೈರ್ಯ ಇರಲಿಲ್ಲವೇನೋ ಆದ್ರೆ ಒಳಗೆಲ್ಲೋ ಅನ್ಸಿರುತ್ತೆ ನನ್ನನ್ನ ಇಷ್ಟೊಂದು ಇಷ್ಟಪಡ್ತಾನ ಅಂತ .
( ನೆನಪಿಲ್ವಾ ? ::ಹೊಗಳದೆ ದೇವಿ ವರವ ಕೊಡಳು)
ಅಥವಾ, ನಿಮ್ಮನ್ನ ಬೈಯ್ಯೋಕೆ ಕಾಯ್ತಾ ಇದ್ದಾಗ ನೀವು ಕವನ ತೋರ್ಸಿದ್ದೀರ
ಬಹುಶಃ ಬ್ಯಾಡ್ ಟೈಮಿಂಗ್ ಅಲ್ವಾ?
ಕವನ ಸುಂದರವಾಗಿದೆ . get wel soon
ಕವನ ತು೦ಬಾನೆ ಚೆನ್ನಾಗಿದೆ.
ReplyDeleteಪ್ರವೀಣ್;ಮೊದಲಿಗೆ ನಿಮ್ಮ ಆರೋಗ್ಯ ಬೇಗ ಸುಧಾರಿಸಲಿ ಎಂದು ನಮ್ಮೆಲ್ಲರ ಹಾರೈಕೆ.ಇನ್ನು ನಿಮ್ಮ ಕವನದ ಬಗ್ಗೆಎರಡುಮಾತು.ಕವನಚೆನ್ನಾಗಿದೆ.ಸ್ವಾಮಿ,ಹೆಂಗಸರ ಭಾಷೆಯಲ್ಲಿ ಕೆಟ್ಟದಾಗಿದೆ ಎಂದರೆ ತುಂಬಾ ಇಷ್ಟವಾಗಿದೆ ಎಂಬುದು ನಿಮಗೆ ಈಗಲಾದರೂ ಅರ್ಥವಾಗಿರಬೇಕು.ಏನಂತೀರ?
ReplyDeleteKavana chennaagide..bega guna mukharaagiri:))
ReplyDeleteಪ್ರವೀಣ್;ಮೊದಲಿಗೆ ನಿಮ್ಮ ಆರೋಗ್ಯ ಬೇಗ ಸುಧಾರಿಸಲಿ .ಮಲಗಿದ್ದಾಗ ನೆನಪುಗಳು ಕಾಡಿರಬೇಕು..?.
ReplyDeleteಚೆನ್ನಾಗಿದೆ.
ಪ್ರವೀಣ್, ಈಬ್ಲಾಗು ಗೀಗು ಎಲ್ಲಾ ಇದ್ದಿದ್ದೇ, ನೀವು ಬಾರದೆ ಇದ್ದಾಗಲೇ ಅಂದುಕೊಂಡೆ ರಾಯರು ಊರಲ್ಲಿಲ್ಲವೇನೋ ಅಂತ ! ಆದರೆ ವಿಷಯ ಈಗ ತಿಳಿದು ಬೇಸರವಾಯಿತು, ಒಂದು ಗುಟ್ಟು ಹೇಳುತ್ತೇನೆ- ಶರೀರಕ್ಕೆ ದಣಿವಾದಾಗ ಅದು ತಂತಾನೆ ವಿಶ್ರಾಂತಿ ಬಯಸುತ್ತದೆ, ಈ ಲೆಕ್ಕದಲ್ಲಿ ತೀರಾ ರಜೆಗುಜರಾಯಿಸಲಾಗದ ನಮಗೆ ಎಲ್ಲೋ ಅಪರೂಪಕ್ಕೆ ಚಿಕ್ಕ ಪುಟ್ಟ ನೆಗಡಿ ಜ್ವರ ಇದ್ದರೇ ಒಳ್ಳೆದೇನೋ ಅಲ್ಲವೇ, ತೀರಾ ಆಸ್ಪತ್ರೆಗೆ ದಾಖಲಾಗುವಷ್ಟಾಗುವುದು ಖಂಡಿತ ಇಷ್ಟಪಡುವ ವಿಷಯವಲ್ಲ, ಬೇಗ ಗುಣಮುಖರಾಗಿ, ಸುಂದರ ಕವನ, ಹೆಂಗಸರಿಗೆ ನೀನು ರಂಭೆ-ಊರ್ವಶಿ ಎಂದರೂ ಮತ್ತೂ ಕಮ್ಮಿಯೇ, ಅವರು ಮತ್ತೂ ಇನ್ಯಾರೋ ಸುರಸುಂದರಿಯ ಹೆಸರಿಸಲು ಹೇಳುತ್ತಾಳೆ, ಹೆಂಗಸರಿಗೆ ಚೆನ್ನಾಗಿದ್ದೀಯಾ ಎಂದರೆ ಆಗುವಷ್ಟು ಖುಷಿ ಬೇರೆ ಏನನ್ನೇ ಕೊಟ್ಟರೂ ಆಗುವುದಿಲ್ಲ, ಹೀಗಾಗಿ ಆಗಾಗ ನೀನು ಚೆನ್ನಾಗಿದ್ದೀಯ ನೀನು ಚೆನ್ನಾಗಿದ್ದೆಯಾ ಎನ್ನುತಲೇ ಇರಿ! ಧನ್ಯವಾದಗಳು
ReplyDeleteಕವನ ಚೆನ್ನಾಗಿಲ್ಲವೆಂದು ಆಕೆ ಹೇಳಿದರೂ ಆಕೆಯ ಮನದಾಳದಲ್ಲಿ ಚೆನ್ನಾಗಿದೆ ಅನ್ನಿಸಿರುತ್ತೆ. ಇದು ಎಲ್ಲಾ ಹುಡುಗಿಯರ ಸ್ವಭಾವ. ಮತ್ತೆ ಕವನ ಪಕ್ಕಾ ಪ್ರಾಸಬದ್ಧವಾಗಿ ರೊಮ್ಯಾಂಟಿಕ್ ಆಗಿರುವುದರಿಂದ ಸಿನಿಮಾ ಹಾಡಿನ ಹಾಗೆ ಇದೆ.
ReplyDeleteಮತ್ಯಾಕೆ ಚಿಂತೆ. ನೀವು ಬೇಗ ಮತ್ತಷ್ಟು ಹುರುಪಿನಿಂದ ಆರೋಗ್ಯ ಸುಧಾರಿಸಿಕೊಳ್ಳಿ.
ಸುಮಾ ಮೇಡಂ,
ReplyDeleteಸಂಗೀತ ನಿರ್ದೇಶಕರಿಗೆ ಕೊಡಲು ಹೋದರೆ ಮನೆಯ ಗೇಟಿನ ಒಳಗೂ ಬಿಡುವುದಿಲ್ಲ! ಹ್ಹ ಹ್ಹ ಹ್ಹಾ.......
ಧನ್ಯವಾದಗಳು ಪ್ರತಿಕ್ರಿಯೆಗೆ.
ಸುಬ್ರಮಣ್ಯ ಸರ್,
ReplyDeleteಆಗ ನನಗೆ ಅರ್ಥ ಆಗಿರದೆ ಇದ್ದಿದ್ದು ಒಳ್ಳೆಯದೇ ಆಯಿತೇನೋ!
ಯಾಕೆಂದರೆ ಈಗ ಕೇಳಲು ಅವಳಿಲ್ಲ!
ಪ್ರತಿಕ್ರಿಯೆಗೆ ಧನ್ಯವಾದಗಳು.
Vijayashri madam,
ReplyDeleteThank you very much..........
:-)
ReplyDeleteಸೀತಾರಾಂ ಸರ್,
ReplyDeleteರತಿಯ ತಂಗಿಯೆಂದು ಹೊಗಳಿದ್ದಷ್ಟೇ ಬಂತು..........
ಕೊನೆಗೆ ಆಕೆ ಕೈಕೊಟ್ಟು ಹೋದಾಗ ಹೊಗಳಿದ್ದು ಸುಮ್ಮನೆ ಅನಿಸಿತು! ಆದರೂ ಜೀವನದಲ್ಲಿ ಒಳ್ಳೆ ಪಾಠ ಮಾತ್ರ ಕಲಿತೆ!
ದನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
ದೆಹಲಿಗೆ ಬಂದಾಗ ಸಿಗದೇ ಹಾಗೆ ಹೋಗಬೇಡಿ. ಫೋನ್ ಮಾಡಿ.......
ವಸಂತ್,
ReplyDeleteನಿಮ್ಮ ಕಳಕಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಹಾರೈಕೆಯಿಂದ ನಾನು ಬೇಗ ಗುಣಮುಖನಾಗುತ್ತೇನೆ.
ಧನ್ಯವಾದಗಳು.
ನಾಗರಾಜ್ ಅವರೇ,
ReplyDeleteಧೈರ್ಯವಿದ್ದರೂ ಮನಸಿರಲಿಲ್ಲವೇನೋ!
ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ. ಬೇಗನೆ ಗುಣಮುಖನಾಗುತ್ತೇನೆ.
ಪರಾಂಜಪೆ ಸರ್,
ReplyDeleteಧನ್ಯವಾದಗಳು.
ಡಾಕ್ಟ್ರೆ,
ReplyDeleteನಿಮ್ಮೆಲ್ಲರ ಹಾರೈಕೆಯಿಂದ ಬೇಗ ಗುಣವಾಗುತ್ತಿದೆ. ಈಗ ಕೇವಲ bed rest ಅಷ್ಟೇ!
ನಿಮ್ಮ ಅನಿಸಿಕೆ ಸರಿ. ಆದರೆ ಆಕೆಯ ವಿಷಯದಲ್ಲಲ್ಲ!
ಧನ್ಯವಾದಗಳು ಪ್ರತಿಕ್ರಿಯೆಗೆ.
ಆರೋಗ್ಯ ಚೆನ್ನಾಗಿ ನೋಡ್ಕೊಳ್ಳಿ. ಏನಾಗಿತ್ತು ಅಂತ ಕೇಳಬಹುದಾ?
ReplyDeleteಕವನ ಚೆನ್ನಾಗಿದೆ ಸರ್.
ನಿಮ್ಮವ,
ರಾಘು.
Vanitaa madam,
ReplyDeletethanks...
ಕು ಸು ಮು ಅವರೇ,
ReplyDeleteಹೌದು, ಒಬ್ಬನೇ ಮಲಗಿದ್ದಾಗ ಹಳೆಯ ಡೈರಿ, ಆಟೋಗ್ರಾಪ್ ಪುಸ್ತಕ(SSLC & PUC) ಶಾಲಾ ಕಾಲೇಜು ಫೋಟೋಗಳು, ಪ್ರಶಸ್ತಿಪತ್ರಗಳು...............
ಎಲ್ಲಾ ಹೊರಬಂದು ಹಳೆಯ ನೆನಪುಗಳು ಕಾಡತೊಡಗಿದ್ದವು. ಹಳೆಯ ಡೈರಿಯ ಮೂಲೆಯಲ್ಲಿ ಆಗ ಬರೆದ ಈ ಕವನ ದೊರಕಿದ್ದು.
ಧನ್ಯವಾದಗಳು. ಆಗಾಗ ಬರ್ತಾ ಇರಿ.........
ಭಟ್ರೇ,
ReplyDeleteನಿಮ್ಮ ಮಾತು ನೂರಕ್ಕೆ ನೂರು ಸತ್ಯ! ಮೂರು ತಿಂಗಳಿಂದ ಪೂರ್ತಿ ರಜೆ ಮಾಡದೆ ಬೇಸರವಾಗಿತ್ತು. ನಮ್ಮ ಬಾಸ್ ಬೆಂಗಳೂರಿಂದ ಬಂದ ಮರುದಿನವೇ ನನಗೆ ಜ್ವರ ಶುರುಆಗಬೇಕೆ?
ನನ್ನ ಪ್ರೀತಿಯ ವಿಷಯದಲ್ಲಿ ಹಾಗಾಗಲಿಲ್ಲ. ಕವನ ಚನ್ನಾಗಿಲ್ಲ ಅಂದ ಕೆಲ ದಿನಗಳಲ್ಲೇ "ನಿನ್ನಲ್ಲೆನಿದೆ ಅಂತ ನಿನ್ನ ಪ್ರೀತಿಸಬೇಕು?" ಎಂದು ನನ್ನನ್ನು ದೂರಮಾಡಿ, ನನ್ನ ಗೆಳೆಯನೊಂದಿಗೆ ಓಡಿ ಹೋದಾಗ ನನ್ನ ಸ್ಥಿತಿ ಹೇಗಾಗಿರಬೇಡ ಊಹಿಸಿ!
ಅದಾದ ಹಲವು ದಿನಗಳವರೆಗೂ ಯೋಚಿಸುತ್ತಿದ್ದೆ. "ನನ್ನಲ್ಲಿಲ್ಲದ್ದು ಆತನಲ್ಲೆನಿತ್ತು?" ಅದಕ್ಕೆ ಉತ್ತರವೂ ಸಿಕ್ಕಿದೆ.
ಮುಂದೊಮ್ಮೆ ಸಂಪೂರ್ಣ ಕತೆಯನ್ನು ನಿಮ್ಮೆಲ್ಲರೊಂದಿಗೆ ಬ್ಲಾಗಿನಲ್ಲಿ ಹಂಚಿಕೊಳ್ಳುತ್ತೇನೆ.
ನಿಮ್ಮ ಅಮೂಲ್ಯ ಸಮಯವನ್ನು ನನ್ನ ಬ್ಲಾಗಿಗಾಗಿ ವಿನಿಯೋಗಿಸಿ ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.
ಶಿವು ಸರ್,
ReplyDeleteಧನ್ಯವಾದಗಳು ಪ್ರತಿಕ್ರಿಯೆಗೆ.
ಈ ಕವನ ನಿಜವಾಗಿಯೂ ಅವಳಿಗೆ ಇಷ್ಟವಾಗದೆ ಇದ್ದ ಪರಿಣಾಮವೇ ಆಕೆ ಆ ಪ್ರತಿಕ್ರಿಯೆ!
very good nice
ReplyDeletechennagide.. mostly neevu aa ratiye dharegilidante annabekitto eno...
ReplyDeleteಪ್ರವೀಣ್ ಸರ್ ಕವನ ತುಂಬಾ ಚೆನ್ನಾಗಿದೆ :) ಬಹುಶ ಸೀತಾರಾಮ್ ಸರ್ ಹೇಳಿದ ಹಾಗೆ ೨ ನೆ ಸ್ಥಾನ ಕೊಟ್ಟಿದ್ದಕ್ಕೆ ಪ್ರತಿಕ್ರಿಯೆ ಕೆಟ್ಟದಾಗಿ ಕೊಟ್ರೆನೋ ಹ ಹ ಹ :)
ReplyDeleteಆರೋಗ್ಯವನ್ನ ನೋಡಿಕೊಳ್ಳಿ .. ಬೇಗ ಗುಣಮುಖರಾಗಿ .
ಪ್ರವೀಣ,
ReplyDeleteನೀವು ಕೋವಿ ಹಿಡಿದುಕೊಂದು ಕಾಡಿನಲ್ಲಿ ಮಾತ್ರ ಶಿಕಾರಿ ಮಾಡ್ತೀರಿ ಅಂತ ತಿಳ್ಕೊಂದಿದ್ದೆ.
ಈಗ ಲೇಖನಿಯಿಂದ ನಾಡಿನಲ್ಲಿಯೂ ಶಿಕಾರಿ ಮಾಡ್ತೀರಿ ಅಂತ ಗೊತ್ತಾಯ್ತು!
ತುಂಬ ಉತ್ತಮವಾದ ಕವನ. ಕಾವ್ಯದೇವಿ ಒಲಿದಂತೆ ನಿಮ್ಮ ಪ್ರೇಮದೇವಿಯೂ ನಿಮಗೆ ಒಲಿಯಲಿ ಎಂದು ಹಾರೈಸುತ್ತೇನೆ.
ನಿಮ್ಮ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥಿಸುತ್ತೇನೆ.
8 years back intaha olle kavana baredidiiri andre.. eega hudugi sikre innu hege baribahudu anta yochista ideeni ;)
ReplyDeletebega gunamukaraagiri.....
ReplyDeletekavana chennagide....
ಸುಂದರ ಕವನ...
ReplyDeleteಬೇಗ ಗುಣಮುಖರಾಗಿ
ಪ್ರವೀಣ್
ReplyDeleteನಿಮ್ಮ ಆರೋಗ್ಯ ಬೇಗ ಸುಧಾರಿಸಲಿ. ಕವನ ತುಂಬಾ ಚೆನ್ನಾಗಿದೆ.
ಕವನ ಅವರು ತಿಳಿದುಕೊಂಡಹಾಗೆ ಕೆಟ್ಟದಾಗಿಲ್ಲ. :) ತಪ್ಪಾಗಿ ಅರ್ಥೈಸಿಕೊಂಡಿರಬೇಕಷ್ಟೇ....
ReplyDeleteGet Well Soon.. :)
Subrahmanya sir,
ReplyDeleteThanks......
ಧನ್ಯವಾದಗಳು ಪ್ರತಿಕ್ರಿಯೆಗೆ,
ReplyDeleteಡೆಂಗ್ಯು ಜ್ವರ ಶುರು ಆಗಿತ್ತು. ಈಗ ಸುಧಾರಣಾ ಹಂತದಲ್ಲಿದೆ.
ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ,
ReplyDeleteThanks for your comment, keep visit..........
ವಾಣಿಶ್ರೀ ಮೇಡಂ,
ReplyDeleteಹಾಗೆ ಅನ್ನಬೇಕಿತ್ತೇನೋ? ಆದರೆ ಈಗ ಅನ್ನಲು ಕಾಲ ಮಿನ್ಚಿಹೋಗಿದೆ.
ಧನ್ಯವಾದಗಳು ಪ್ರತೊಕ್ರಿಯೆಗೆ.
ರಂಜಿತಾ ಮೇಡಂ,
ReplyDeleteಇದ್ದರೂ ಇರಬಹುದು, ಅವಳು ಹಾಗೆ ಹೇಳಿದ ಮೇಲೆ ಡೈರಿಯಿಂದ ಆಚೆ ಬಂದಿರಲಿಲ್ಲ ಈ ಕವನ, ಅದಕ್ಕೆ ನಿಮ್ಮ ಮುಂದೇ ಇಟ್ಟಿದ್ದು ಸತ್ಯಾಸತ್ಯತೆ ತಿಳಿದುಕೊಳ್ಳಲು!
ಆರೋಗ್ಯ ಸುಧಾರಿಸುತ್ತಿದೆ.
ನಿಮ್ಮ ಪ್ರತಿಕ್ರಿಯೆ ಮತ್ತು ಕಾಳಜಿಗೆ ನಾನು ಅಭಾರಿ............
ಸುನಾಥ್ ಸರ್,
ReplyDeleteಕಾಡಿನಲ್ಲಿ ಕೋವಿ ಹಿಡಿದು ತಿರುಗುವುದು ಸುಲಭ. ಆದರೆ ಲೇಖನಿ ಹಿಡಿದು ಕುಳಿತರೆ ಪದಗಳೇ ಹೊಳೆಯುವುದಿಲ್ಲ!
ಆಕೆ ನನಗೆ ಮತ್ತೆ ಒಲಿಯುವುದು ಬೇಡ, ಏಕೆಂದರೆ ಆಕೆ ಈಗ ಎರೆಡು ಮಕ್ಕಳ ತಾಯಿ ಸ್ವಾಮಿ..........!
ಧನ್ಯವಾದ್ಗಗಳು ಪ್ರತಿಕ್ರಿಯೆಗೆ..
ಶಿವಪ್ರಕಾಶ್,
ReplyDeleteಆಗ ಬರೆದಿದ್ದು ಹೌದು, ಆದರೆ ಈಗ ಆಕೆ ಸಿಗುವುದೂ ಬೇಡ, ನಾನು ಹೀಗೆಯೇ ಚನ್ನಾಗಿದ್ದೇನೆ.
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..........
ಸವಿಗನಸು,
ReplyDeletethank you very much...
ದಿಲೀಪ್ ಸರ್,
ReplyDeleteಧನ್ಯವಾದಗಳು.
ನಿಶಾ ಮೇಡಂ,
ReplyDeleteಧನ್ಯವಾದಗಳು.
ನಿಮ್ಮೆಲ್ಲರ ಹಾರೈಕೆಯಿಂದ ಆರೋಗ್ಯ ಬಹಳ ಸುಧಾರಿಸಿದೆ.
ಏನೋ ನಂಗೊತ್ತಿಲ್ಲ ತೆಜಕ್ಕಾ............
ReplyDeleteಆಗ ಅವಳ ಅಮನಸ್ಸಿನಲ್ಲಿ ಏನಿತ್ತೋ.......ಬಲ್ಲವರಾರು?
ಧನ್ಯವಾದಗಳು.
ಪ್ರವೀಣ್ ಮನದಾಳದಿಂದ ಬಂದ ಮಾತುಗಳು ...ಹಹಹ...ಚನ್ನಾಗಿದೆ ಕವಿತೆ...
ReplyDeleteಅಜಾದ್ ಸರ್,
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
ನಿಮ್ಮ ಕವನ ಚೆನ್ನಾಗಿದೆ ಪ್ರವೀಣ್, ನಿಮ್ಮ ಮೇಲೆ ಇಷ್ಟವಿರಲಿಲ್ಲವೇನೋ ಅದಕ್ಕೆ ಇಷ್ಟು ಚೆಂದದ ಕವನವನ್ನೂ ಅರ್ಥ ಮಾಡಿಕೊಳ್ಳದೆ ಚೆನ್ನಾಗಿಲ್ಲವೆಂದು ಬಿಟ್ಟಿದ್ದಾರೆ....... ಎಂದೆನಿಸುತ್ತದೆ....
ReplyDeleteನಿಮ್ಮಲ್ಲಿ ಆ ಕವನಗಳ ಸಾಲು ಅಷ್ಟು ಹಿಂದೆಯೇ ಇಷ್ಟು ಸುಂದರವಾಗಿ ಸೃಷ್ಟಿಯಾಗಿದೆಯೆಂದರೆ ನಿಜಕ್ಕೂ ಮೆಚ್ಚಬೇಕು..... ಏನೇ ಇರಲಿ ಬೇಸರಿಕೆಯ ಬಿಸಿಯನ್ನು ನಿಮ್ಮ ಜೀವನಕ್ಕೆ ತಾಕಿಸಬೇಡಿ. ಪ್ರೀತಿ ಒಂದೇ ಜೀವನವಲ್ಲ.... ನಿಮ್ಮನ್ನು ಪ್ರೀತಿಸುವವರು ಬಹಳಷ್ಟು ಮಂದಿ ಇರುತ್ತಾರೆ ಅವರಿಗಾಗಿ ನಿಮ್ಮ ಜೀವನವನ್ನು ಮುಡುಪಾಗಿಡಿ. ನಿಮ್ಮನ್ನು ನಂಬಿರುವವರಿಗೆ ಆಧಾರವಾಗಿರಿ.
ನಿಮ್ಮ ಬಾಸ್ ಬೆಂಗಳೂರಿಂದ ಬಂದ ಕೂಡಲೆ ಆರೋಗ್ಯ ಕೆಟ್ಟಿದೆಯೆಂದರೆ ಏನು ತಿಳಿಯಬೇಕು ನಾವು ಹಹಹ ಹೆದರಿ ಜ್ವರ ಬಂದುಬಿಟ್ಟಿರಬೇಕು ಎಂದು ತಿಳಿಯೋಣವೇ... ಹಹಹಹ......
ಏನೇ ಇರಲಿ ಆದಷ್ಟು ಬೇಗ ಗುಣ ಮುಖರಾಗಿ ನಿಮ್ಮ ಕೆಲಸ ಕಾರ್ಯಗಳತ್ತ ಬೇಗ ಮರಳೆಂದು ಆಶಿಸುತ್ತೇನೆ.
ಶುಭವಾಗಲಿ
ವಂದನೆಗಳು
ಪ್ರವೀಣ್ ಸರ್,
ReplyDeleteತುಂಬಾ ಸುಂದರ ಸಾಲುಗಳು...ಯಾರಿಗೆ ಹಿಡಿಸಿತೋ ಇಲ್ಲವೋ...ನನಗಂತೂ ಈ ಕವನ ತುಂಬಾ ಇಷ್ಟ ಆಯಿತು....ನಿಮ್ಮ ಆರೋಗ್ಯ ಬಹುಬೇಗ ಸುಧಾರಿಸಲಿ.
[ಎರಡು ದಿವಸಗಳ ಹಿಂದೆ ಈ ಕವನದ ಮೇಲೆ ಕಾಮೆಂಟ್ ಮಾಡಿದ್ದೆ...ಯಾಕೋ ಏನೋ ಇಲ್ಲಿ ಪ್ರಕಟವಾಗಿಲ್ಲ..ಅದ್ಕೆ ಪುನಃ ಹಾಕಿದೆ]
'ಮನಸು' Madam,
ReplyDeleteಆ ಪ್ರೀತಿ ಕಳೆದುಕೊಂಡು ವರ್ಷಗಳೇ ಕಳೆದುಹೋಗಿವೆ.....
ಆಕೆಗೆ ಮದುವೆಯಾಗಿ ಎರೆಡು ಮಕ್ಕಳೂ ಇದ್ದಾರೆ. ಆದರೂ ಆಗೊಮ್ಮೆ ಈಗೊಮ್ಮೆ ಹಳೆಯ ಗೆಳತಿಯಾಗಿ ನೆನಪಾಗುತ್ತಾಳೆ ಅಷ್ಟೇ!
ಒಂದುಕಾಲದಲ್ಲಿ ಜೀವನವೇ ಮುಗಿಯಿತುಎನ್ದುಕೊನ್ದಿದ್ದು ಸತ್ಯ, ಆದರೆ ಈಗ ಆಗಿದ್ದು ಒಳ್ಳೆಯದಕ್ಕೆ ಎಂದುಕೊಂಡು ಆ ಗಾಯವನ್ನು ಮರೆತು ಬದುಕುತಿದ್ದೇನೆ.........
ನಿಮ್ಮ ಕಳಕಳಿಗೆ ಧನ್ಯವಾದಗಳು,
ನಿಜ ಹೇಳಬೇಕೆಂದರೆ ರಜೆ ಮಾಡದೆ ಮೂರು ತಿಂಗಳೇ ಆಗಿತ್ತು, ವಿಶ್ರಾಂತಿ ಇಲ್ಲದ ದೇಹ ಈ ರೀತಿ ವಿಶ್ರಾಂತಿ ಭಯಸಿತೇನೋ!(ನೀವು ಮತ್ತೇನೋ ಯೋಚಿಸುವುದು ಬೇಡ!)
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ............
ಆಗಾಗ ಬರ್ತಾ ಇರಿ,
ಅಶೋಕ್ ಸರ್,
ReplyDeleteಕವನ ಇಷ್ಟಪತ್ತಿದ್ದಕ್ಕೆ ಮತ್ತು ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
ಕವನ ಚನ್ನಾಗಿದೆ. ನಿಮ್ಮ ಆರೋಗ್ಯದ ಕಡೆ ಗಮನವಿರಲಿ. ಬೇಗ ಗುಣಮುಖರಾಗಿ
ReplyDeleteಹೊನ್ನ ಹನಿ
nimma blaag tumbaa chennaagide. kavana super.
ReplyDeleteಹರೀಶ್ ಅವರೇ,
ReplyDeleteಧನ್ಯವಾದಗಳು ನಿಮ್ಮ ಕಳಕಳಿಗೆ, ಹಾಗೂ ಪ್ರತಿಕ್ರಿಯೆಗೆ,
ಹೀಗೆ ಬರ್ತಾ ಇರಿ,
Balasubrahmanya sir,
ReplyDeleteThanks for visit my blog, and your comment
ರತಿಯತ೦ಗಿಯ ಬಗ್ಗೆ ಹೊಸ ಪರಿಚಯ ಮಾಡಿಸಿದ್ದೀರಿ. ಮನ್ಮಥನ ಎನ್ನುವುದು "ಮನ್ಮತನ" ಎ೦ದಾಗಿದೆ. ಒಟ್ಟಾರೆ ಕವನ ಮುದ ನೀಡಿತು.
ReplyDeleteಶುಭಾಶಯಗಳು
ಅನ೦ತ್
Hi Praveen..
ReplyDeletekavana mudavagide.. hosa tarada holike.. rati anno badalu avala tangige... satya heluvavanannu harischandrana mommaga anda haage..
chennagide
pravi
ಪ್ರವೀಣ್...ಮೊದಲು ನನ್ನ ಸಂಶಯ ನಿವಾರಣೆ ಮಾಡಿ...ರತಿ ತಂಗೀನೇ ಮದುವೆಯಾದ್ರಾ..? ಎಲ್ಲ ಚನ್ನಾಗಿದೆ...ನಿಮ್ಮ ಉತ್ತರದ ಮೇಲೆ ಆಧಾರಿತ ನನ್ನ ಅನಿಸಿಕೆ...ಹಹಹ...ಚನ್ನಾಗಿದೆ ಕವನ...
ReplyDeleteಅವಳಿಗೆ ನಿಮ್ಮ ಎದುರೇ ಚೆನ್ನಾಗಿದೆ ಅನ್ನೋಕೆ ಧೈರ್ಯ ಸಾಲಲಿಲ್ಲ ಅಥವಾ ನಾಚಿಕೆಯಾಯ್ತೇನೋ! ಅದಕ್ಕೆ ಚೆನ್ನಾಗಿಲ್ಲ ಅ೦ದಿದ್ದಾಳೆ.
ReplyDeleteಕವನ ತು೦ಬಾ ಚೆನ್ನಾಗಿದೆ. ನಿಮ್ಮ ಶಿಕಾರಿ ಸರಣಿಯ ಶೈಲಿ ಚೆನ್ನಾಗಿದೆ. ನಿಮ್ಮ ಸುಮಾರು ಬರಹಗಳನ್ನು ಓದಿದೆ. ಅಷ್ಟೂ ಓದ್ಲಿಕ್ಕಾಗಲಿಲ್ಲ. ನಿಧಾನವಾಗಿ ಓದ್ತೇನೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
kavana chennagide ,, rati deviya tangiya holike ishtavaytu :)
ReplyDeleteಅನಂತ್ ರಾಜ್ ಸರ್,
ReplyDeleteನನ್ನ ಬ್ಲಾಗಿಗೆ ಸ್ವಾಗತ,
ತಪ್ಪನ್ನು ತಿದ್ದಿಕೊಂಡಿದ್ದೇನೆ.
ಬಂದು ಕವನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು, ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.......
ಅಜಾದ್ ಸರ್,
ReplyDeleteಇದೇನು ಹೀಗೆ ಕೇಳ್ತಾ ಇದ್ದೀರಾ? ನನಗಿನ್ನೂ ಮದುವೆಯಾಗಿಲ್ಲ ಸ್ವಾಮಿ..... ಆಕೆಗೆ ಮಾತ್ರ ಮದುವೆಯಾಯ್ತು ಅದೂ ನನ್ನ ಸ್ನೇಹಿತನ ಜೊತೆಗೇ!
ಧನ್ಯವಾದಗಳು.
ಶ್ರೀಯುತ ರಾಘವೇಂದ್ರ ಅವರೇ,
ReplyDeleteನನ್ನ ಬ್ಲಾಗಿಗೆ ಬಂದು, ಓದಿ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಹೀಗೆ ಆಗಾಗ ಬಂದು ಬೆನ್ನು ತಟ್ಟುತ್ತಾ, ತಪ್ಪನ್ನು ತಿದ್ದುತ್ತಾ ಇರಿ.
ಧನ್ಯವಾದಗಳು.
ಶ್ರೀಧರ್ ಸರ್,
ReplyDeleteಧನ್ಯವಾದಗಳು ಕವನವನ್ನು ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಕ್ಕೆ.
ಆಗಾಗ ಬರ್ತಾ ಇರಿ.....
ಸ್ವಾಮೀ, ಈ ಕವನವನ್ನು ಇಂದಿನ ನಮ್ ಕನ್ನಡ ಚಿತ್ರ ರಂಗಕ್ಕೆ ಸಿಗದಂತೆ ಕಾಪಾಡ್ಬೇಕು... ಇಲ್ಲಾಂದ್ರೆ, ಮಚ್ಚು, ಲಾಂಗು, ಡಬ್ಬಾ, ಹಳೆ ಪಾತ್ರ, ಕಬ್ಬಿಣ ಅಂತೆಲ್ಲಾ ಸೇರಿಸಿ ಹಾಳು ಮಾಡ್ಯಾರು... ಕಾಪಾಡಿ ಕಾಪಾಡೀ...
ReplyDeleteಹ್ಹ ಹ್ಹ ಹ್ಹಾ.........
ReplyDeleteಆಗಲಿ,
ಧನ್ಯವಾದಗಳು ಪ್ರತಿಕ್ರಿಯೆಗೆ.........
kavana channagide sir.. :-) ishta aaytu...
ReplyDelete