ಪ್ರೀತಿಯೇ ನೀನೇಕೆ ಹೀಗೆ?
ಒಂದೂ ಅರಿಯದ ಭಾವದ ಹಾಗೆ...........
ಮುಡಿದ ಹೂ ಬಾಡಿದ ಮೇಲೆ
ಕಸವಾಗಿ ಹೋಯಿತು ಅದಕ್ಕೆಲ್ಲಿ ಬೆಲೆ..........?
ಅಂದು ನಿನ್ನ ಕಂಡಾಗ ನನಗಾದ ಪರಿಣಾಮ
ನಿದೆರೆ ಹಸಿವು ಮರೆತ ನಿನ್ನ ಗುಲಾಮ............
ನೀನೇ ಉಸಿರು, ನೀನೇ ನನ್ನ ಪ್ರಾಣ
ಎಂದುಕೊಂಡು ಮನ ಕಟ್ಟಿತ್ತು ತೋರಣ.............
ಇಂದೇಕೆ ಬೇಡ ನಾ ನಿನಗೆ
ಗೆದ್ದಿತೆ ಆಸೆ ಲೋಭವು ಕೊನೆಗೆ............
ಇದರ ಕಾರಣ ತಿಳಿಯುವುದೇ ಅನುಮಾನ
ಒಳಗೂ ಹೊರಗೂ ಬರೀ ಮೌನ......
ಮುಳ್ಳಿನ ನಡುವೆ ಹೂ ನಗುವಂತೆ
ನೋವಲ್ಲೂ ನಗುವ ಈ ಮುಖವಾಡದಂತೆ........
ನಾಟಕವಾಡಿದೆ ಬದುಕ ರಂಗದಲಿ
ಕಳೆದುಹೋದ ಪ್ರೀತಿಯ ನೆನಪಿನಲ್ಲಿ...........
ಈ ಪ್ರೀತಿ ನನ್ನ ಸಾಯಿಸಲಿಲ್ಲ
ನೆಮ್ಮದಿಯಲಿ ಬದುಕಲೂ ಬಿಡಲಿಲ್ಲ........
ಆದರೂ ಜೀವಿಸಿದೆ ಜೀವನಕಾಗಿ
ಕಾಣದ ಪ್ರೀತಿಯ ಭರವಸೆಗಾಗಿ...........
ಇನ್ನು ನೋವಿನಲ್ಲಿ ಇದೀರಾ, ಹೊರಗೆ ಬನ್ನಿ, nothing to worry, enjoy life
ReplyDeleteಪ್ರವೀಣ,
ReplyDeleteಪ್ರೀತಿಯಲ್ಲಿ ಸಿಲುಕಿ ಒದ್ದಾಡುತ್ತಿರುವಿರಲ್ಲ. ಯಾಕೆ ಪ್ರೀತಿಸಬೇಕಾಗಿತ್ತು? ಇರಲಿ, ನಿಮ್ಮ ಪ್ರೀತಿಯು ಒಂದು ಚೆಲುವಾದ ಕವನಕ್ಕೆ ಜನ್ಮ ಕೊಟ್ಟಿದೆಯಲ್ಲ. ಆ ಪ್ರೀತಿಗೆ thanks!
Kavana Super Agide... Niv dellinalli Idkondu kavana baritira andre Great.Nimminda innu Hecchu Kavana moodibarali..Thanking You..
ReplyDeleteManjunath Begar.
ಕವನ ಪ್ರೀತಿಯ ಲೌಕಿಕ ವ್ಯಾಪಾರದ ಬಗ್ಗೆ ಬರೆದಂತಿದೆ.
ReplyDeleteನಿಮ್ಮ ಜೀವನ ಪ್ರೀತಿಯ ಬಗ್ಗೆ ಬರೆಯಿರಿ. ಓದುಗರಾಗಿ ನಮಗೂ ಖುಷಿ ಸಿಗಲಿ..ಏನಂತೀರಾ?
ಪ್ರವೀಣ್ ಇದು ವಿಫಲ ಪ್ರೇಮವೇ ಅಥವಾ ವ್ಯಕ್ತ ಪಡಿಸಲಾಗದ ಪ್ರೇಮವೇ..? ಆದ್ರೆ ಮನದ ವ್ಯಾಕುಲತೆ ಅರ್ಥ ಮತ್ತು ಕಳೆದ ನೆನಪುಗಳು ಮನದಲ್ಲಿ ಮೂಡಿಸುವ ಹುಯ್ದಾಟ ಚನ್ನಾಗಿ ಮೂಡಿದೆ.
ReplyDeleteಪ್ರೀತಿಯ ನಿರಾಸೆ ಒಳ್ಳೆಯ ಕವನ ಹೊರತರುವಲ್ಲಿ ಫಲಿಸಿದೆ.
ReplyDeleteಪ್ರೀತಿಯೇ ಹಾಗೇ ಮನಸ್ಸಿಗೆ ಹೇಳಲಾರದ ಭಾವನೆಗಳನ್ನೂ, ಸ೦ತಸವನ್ನೂ ಹಾಗೆಯೇ ಅಗಲುವಿಕೆಯ ನೋವನ್ನೂ ನೀಡುತ್ತದೆ. ಸ೦ತೈಸಿಕೊಳ್ಳಿ. ನಮ್ಮನ್ನು ಪ್ರೀತಿಸದಿದ್ದವರ್ರೊ೦ದಿಗೆ ನಮ್ಮ ಸು೦ದರ ಸನ್ನಿವೇಶಗಳನ್ನು ಹ೦ಚಿಕೊಳ್ಳುವುದಕ್ಕಿ೦ತ ನಮ್ಮನ್ನು ಪ್ರೀತಿಸುವವರೊ೦ದಿಗೆ ನಮ್ಮ ನೋವನ್ನೇಲ್ಲಾ ಬಿಚ್ಚಿಡುವುದು ಒಳಿತು.
ReplyDeleteಅಶ್ವಥ್ ಹಾಡಿದ“ ಹೇಳಿಹೋಗು ಕಾರಣ“ ಭಾವಗೀತೆಯ ನೆನಪಾಯ್ತು. ಸು೦ದರವಾಗಿದೆ. ನಿಜವಾಗಿ ಹೇಳಬೇಕೆ೦ದರೆ ಈ ಕಾವ್ಯವಸ್ತು ಇ೦ದು ಬೆಳಗ್ಗಿನಿ೦ದ ನನ್ನ ತಲೆತಿನ್ನುತ್ತಿತ್ತು!ಅದನ್ನು ಅಕ್ಷರರೂಪಕ್ಕೆ ಸು೦ದರವಾಗಿ ಇಳಿಸಿದ್ದೀರಿ.
ನಮಸ್ಕಾರಗಳೊ೦ದಿಗೆ,
ಚೆನ್ನಾಗಿದೆ ಸರ್ ಕವನ.... ಮನದಾಳದಿಂದ ಬಂದಂತಿದೆ..
ReplyDeleteಇದು ಕೇವಲ ಕವನವೋ ಅಥ್ವಾ ಜೀವನದ ಘಟನೆಯೋ ತಿಳಿಯಲಿಲ್ಲ, ಜೀವನದ ಘಟನೆಯಾದರೆ ಪರಾಂಜಪೆಯವರು ಹೇಳಿದ್ದು ಸರಿ, ಬರೇ ಕವನವಾದರೆ ನಿಮ್ಮ ಕಲ್ಪನೆ ಚೆನ್ನಾಗಿದೆ, ಒಂದು ಮಾತು ನೆನಪಿಡಿ ಈ ಜೀವನದ ಯಾವುದೂ ಶಾಶ್ವತವಲ್ಲ, ನಿಮಗೆ ಅಮ್ಮ ಕೊಡುವ ಪ್ರೀತಿಯನ್ನು ನಿಮ್ಮ ಪ್ರೇಯಸಿ ಕೊಡುವುದಿಲ್ಲ, ಇವತ್ತಿನ ಜಗದ ಪ್ರೇಮ-ಪ್ರೀತಿ ಎಲ್ಲಾ, ಜೇಬಲ್ಲಿ ಝಣ ಝಣ, ಮೊಬೈಲಲ್ಲಿ ಬ್ಯಾಲೆನ್ಸ್ , ಬಂಗಲೆ, ಬ್ಯಾಂಕ್ ಖಾತೆಯಲ್ಲಿ ಒಂದಷ್ಟು, ಬಳಸಲು ೫ ಲಕ್ಷದ ಕಾರು ಇವೆಲ್ಲಾ ಇರುವವರೆಗೆ ಮಾತ್ರ ! ಅದರ ಹೊರತೂ ನಿಮಗೆ ನಿಮ್ಮ ಹೃದಯದ ಅನಿಸಿಕೆಯನ್ನು ನಿಜವಾಗಿಯೂ ನೋಡಿ ಪ್ರೀತಿ ಹರಿಸುವವಳು ತಾಯಿ ಮಾತ್ರ, ನೀವು ತೊಳಲಾಟದಲ್ಲಿದ್ದರೆ ನಿಮಗೆ ಬೆಳಕು ಹರಿಸುವುದು ಧ್ಯಾನ ಮಾತ್ರ, ಅದನ್ನು ಗುರುವನ್ನು ಕಂಡು ಮಾಡಿ ! ನಿಮಗೆ ಜಯವಾಗಲಿ
ReplyDeleteಭಾವನೆಗಳನ್ನು ಚೆನ್ನಾಗಿ ಪ್ರಕಟಿಸಿದ್ದೀರಿ.ಸು೦ದರವಾಗಿದೆ.
ReplyDeleteಹೇಳಿ ಹೋಗು ಕಾರಣ ನೆನಪಾಯ್ತು !. ಎಂತಹ ಭಾವ ತುಂಬಿದ ಕವನ ನಿಮ್ಮದು.ತುಂಬ ಚೆನ್ನಾಗಿದೆ
ReplyDeleteಚೆನ್ನಾಗಿದೆ..ಕಲ್ಪನೆ ಚೆನ್ನಾಗಿದೆ
ReplyDeleteನಮಸ್ಕಾರ
ಪ್ರವೀಣ್ ಸರ್,
ReplyDeleteನಿಮ್ಮ ಮನಸ್ಸಿನ ಭಾವನೆಗಳು ಕವನದಲ್ಲಿ ಚೆನ್ನಾಗಿ ವ್ಯಕ್ತವಾಗಿವೆ.
:-)
ReplyDeleteಪ್ರವೀಣ್...
ReplyDeleteಚಂದದ ಕವನಕ್ಕೆ ಅಭಿನಂದನೆಗಳು..
ಇಂದು ನಿಮ್ಮ ಜನುಮದಿನ..
ಸದಾ.. ಸಂತೋಷದಿಂದ... ನಗುನಗುತ್ತಾ ಇರಿ..
ಶುಭಾಶಯಗಳು..
ಪರಾಂಜಪೆ ಸರ್,
ReplyDeleteಇದು ನೋವಲ್ಲ, ಒಂದು ರೀತಿಯ ಸುಖ! ಯಾಕೋ ತುಂಬಾ ನೆನಪಾಗಿ ಈ ಕವನದ ಹುಟ್ಟಿಗೆ ಕಾರಣ ಆಯ್ತು. ಧನ್ಯವಾದಗಳು.
ಕವನದ ಸಾಲುಗಳಲ್ಲಿ ದುಖವೇ ಮಡುಗಟ್ಟಿದೆ, ಚೆನ್ನಾಗಿದೆ
ReplyDeleteಸುನಾಥ್ ಸರ್,
ReplyDeleteಏನು ಮಾಡೋದು ಹೇಳಿ,
ಸಿಕ್ಕಿಹಾಕಿಕೊಂಡು ತಪ್ಪಿಸಿಕೊಳ್ಳಲಾಗದೆ ಒದ್ದಾಡಿ ಎಡವಿ ಬಿದ್ದು ಸುಧಾರಿಸಿಕೊಂಡು ಬದುಕುತ್ತಿದ್ದೇನೆ.
ಧನ್ಯವಾದಗಳು ಪ್ರತಿಕ್ರಿಯೆಗೆ.
ಮಂಜುನಾಥ್ ಅವರೆ,
ReplyDeleteಧನ್ಯವಾದಗಳು ನಿಮ್ಮ ಬೇಟಿಗೆ ಮತ್ತು ಪ್ರತಿಕ್ರಿಯೆಗೆ. ನಿಮ್ಮೆಲ್ಲರ ಪ್ರೊತ್ಸಾಹವೇ ನನಗೆ ಪ್ರೇರಣೆ.
ದಿವ್ಯಪ್ರಕಾಶ್,
ReplyDeleteಏನು ಮಾಡೊದು ಹೇಳಿ, ಜೀವನವೇ ಲೌಖಿಕ ವ್ಯಾಪಾರ. ಅಲ್ಲಿ ಪ್ರೀತಿ, ದುಃಖ, ಸುಖ, ಕಷ್ಟ ಎಲ್ಲವೂ ಇರತ್ತಲ್ವಾ?
ಧನ್ಯವಾದಗಳು.
ಅಜಾದ್ ಸರ್,
ReplyDeleteಇದು ವ್ಯಕ್ತಪಡಿಸಿದ ವಿಫಲ ಪ್ರೆಮ.......!
ನೆನಪುಗಳಿಗೆ ಸಾವುಂಟೇ? ಕಾಡುತ್ತಲೇ ಇರುತ್ತವೆ.
ನಿಮ್ಮ ಪ್ರೊತ್ಸಾಹ, ಪ್ರತಿಕ್ರಿಯೆಗೆ ಧನ್ಯವಾದಗಳು
ಡಾಕ್ಟರ್ ಸರ್,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು,
ಕೆ ಎಸ್ ರಾಘವೆಂದ್ರ ನಾವಡರೆ,
ReplyDeleteನಿಮ್ಮ ಮಾತು ನೂರಕ್ಕೆ ನೂರು ನಿಜ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಭಾವನೆಗಳು ಮನದಾಳದಿಂದ ಉಕ್ಕಿದಂತಿದೆ . . . .
ReplyDelete"ಬಾಳ ಕದನದಲ್ಲಿ ಭರವಸೆಗಳು ಬೇಕು , ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು" ನೆನಪಿದೆಯಲ್ಲ 'ಆಕಸ್ಮಿಕ' ಹಾಡು.
ಪ್ರಗತಿಯವರೆ,
ReplyDeleteಹೌದು,
ಕಾಡಿದ ನೆನಪುಗಳು ಕವನವಾಗಿ ಮನದಾಳದಿಂದ ಬಂದಿದೆ.
ಧನ್ಯವಾದಗಳು.........
kavana chennagide.... yochane bidi munde saagi...
ReplyDeleteElla sarihogutte bidi... ;)
ReplyDeleteನೋವು ತುಂಬಿರೋ ಪ್ರೀತಿ ಕವನ ,,,,,,,,,,,
ReplyDeletecheer up ......
ಸಾಲುಗಳು ಚೆನ್ನಾಗಿವೆ..
ReplyDeleteನಿಮ್ಮ ಥೀಮ್ ನಿಂದ ಓದೋದು ಸ್ವಲ್ಪ ಕಷ್ಟವಾಯ್ತು..
ಪ್ರವೀಣ!!
ReplyDeleteಕವನ ಕೂಡ ಬರೀತೀರಾ??
ಚೆನ್ನಾಗಿದೆ. will read all your updated blog slowly.
take care
:-)
ಮಾಲತಿ ಎಸ್.
ವಿ ಆರ್ ಭಟ್ ಸರ್,
ReplyDeleteಇದು ನಿಜ ಜೀವನದ ಕವನ, ಅಂತಹ ಒಂದು ತೊಳಲಾಟ ಇದ್ದ ಸಂದರ್ಭದಲ್ಲಿ ನಾನೊಬ್ಬ ಮನುಷ್ಯನಾಗಿದ್ದೇ ಧ್ಯಾನದಿಂದ.
ನಿಮ್ಮ ಪ್ರತಿಕ್ರಿಯೆಗೆ ಮತ್ತು ಮಾಹಿತಿಗೆ ಧನ್ಯವಾದಗಳು.
ಕುಸುಮು ಸರ್, ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ReplyDeleteಸುಬ್ರಮಣ್ಯ ಸರ್,
ReplyDeleteಧನ್ಯವಾದಗಳು,
ವಿಜಯಶ್ರಿ ಮೇಡಮ್, ಧನ್ಯವಾದಗಳು.
ReplyDeleteಶಿವು ಸರ್,
ReplyDeleteಮನಸ್ಸಿನ ಭಾವನೆಗಳಿಗೆ ಕಡಿವಾಣಗಳೆಲ್ಲಿ?
ಧನ್ಯವಾದಗಳು.
ಸುಬ್ರಮಣ್ಯ ಸರ್,
ReplyDelete:)
ಪ್ರಕಾಶಣ್ಣ,
ReplyDeleteನಿಮ್ಮ ಶುಭಾಶ್ಃಅಯಗಳಿಗೆ, ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ಸಾಗರಿ,
ReplyDeleteಎನು ಮಾಡೊದು ಹೆಳಿ, ದುಖದ ಮನಸ್ಸಿಗೆ ನೆನಪಾಗಿದ್ದೆ ಇದು.
ಧನ್ಯವಾದಗಳು.
ನಾಗರಾಜ್ ಅವರೆ,
ReplyDeleteಖಂಡಿತಾ ನೆನಪಿದೆ. ಅ ಭರವಸೆಯೇ ಜೀವಾಳವಾಗಿ ಬದುಕು ನಡೆಸುತ್ತಿರುವೆ.
ಧನ್ಯವಾದಗಳು.
ಸುಗುಣ ಮೆಡಮ್,
ReplyDeleteಯೋಚನೆ ಬಿಟ್ಟರೂ ನೆನಪಾಗಿ ಮತ್ತೆ ಕಾಡುತಾಳ ನೊಡಿ!
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ
ಶಿವಪ್ರಕಾಶ್ ಅವರೆ,
ReplyDeleteಅದೆಲ್ಲ ಸರಿಯಾದಂತೆ ಕಂಡರೂ ಎಂದಿಗೂ ಸರಿಯಾಗುವುದಿಲ್ಲ.
ಧನ್ಯವಾದಗಳು.
ಶೆಟ್ಟರೆ,
ReplyDeleteಧನ್ಯವಾದಗಳು.
ಕತ್ತಲೆ ಮನೆ:-
ReplyDeleteಬರೀ ಓದಿ ಸಾಕು.......:)
ಧನ್ಯವಾದಗಳು.
ಮಾಲತಿ ಮೆಡಮ್,
ReplyDeleteಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.
ಸೊಗಸಾದ ಕವನ.
ReplyDeleteಬೊಗೆದಾಗ ಕೈಯಲ್ಲಿ ಬಂದು ಬೆರಳಸಂದಿನಿಂದ ಜಾರಿದ ನೀರ ಹನಿಯಂತ ಮನದ ವಿಷಣ್ಣತೆಯ ಹಳೆಯ ನೆನಪುಗಳು ಒಮ್ಮೊಮ್ಮೆ ಕಾಡಿದಾಗ ಬರುವ ಕವನಗಳು ಮನವನ್ನ ಹಗುರಾಗಿಸುತ್ತವೆ ಅಲ್ಲವೇ ಮನದಾಳದ ಪ್ರವೀಣರೇ!
ReplyDeleteಚಂದದ ಕವನ
ದೆಲ್ಹಿಯಲ್ಲಿ ಬಂದು ನನ್ನನ್ನು ಭೇಟಿಯಾಗಿ ತಮ್ಮ ಅಮೂಲ್ಯ ಸಮಯವನ್ನ ನನ್ನ ಜೊತೆ ಕಳೆದದ್ದಕ್ಕೆ ನಾನು ಆಭಾರಿ. ತಮ್ಮ ಈ ಸ್ನೇಹ-ಪ್ರೀತಿ ಸದಾ ಇರಲಿ.
ಸೀತಾರಾಂ ಸರ್,
ReplyDeleteನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಅಷ್ಟು ದೂರದಿಂದ ಬಂದ ನಿಮ್ಮನ್ನು ಭೇಟಿ ಮಾಡಿ ಕೇವಲ ಒಂದು ಘಂಟೆ ನಿಮ್ಮೊಂದಿಗೆ ಕಳೆದಿದ್ದಾದರೂ ಸದಾ ನೆನಪಿನಲ್ಲಿ ಉಳಿಯುವಂತಹ ಕ್ಷಣಗಳು ಅವು, ಸಮಯದ ಅಭಾವವಿದ್ದರೂ ನನ್ನೊಂದಿಗೆ ಅಷ್ಟು ಸಮಯ ವಿನಿಯೋಗಿಸಿದ್ದೀರಾ, ನಿಮ್ಮ ಈ ಪ್ರೀತಿಗೆ ನಾನು ಚಿರಋಣಿ........
ಶಶಿ ಅಕ್ಕಾ,
ReplyDeleteಧನ್ಯವಾದಗಳು.......
ಪ್ರವೀಣ್ ಸರ್....
ReplyDeleteತಡವಾಗಿ ಪ್ರತಿಕ್ರಿಯಿಸುತ್ತಿರುವುದಕ್ಕೆ ಕ್ಷಮೆ ಇರಲಿ...ನಿಮ್ಮ ಕವನ ನಂಗೆ ತುಂಬಾನೇ ಹಿಡಿಸಿತು... ಪ್ರೀತಿಯ ವರ್ಣನೆ ತುಂಬಾ ಚೆನಾಗಿ ಮೂಡಿ ಬಂದಿದೆ...ತುಂಬಾ ಚೆನ್ನಾಗಿದೆ,,,,ಧನ್ಯವಾದಗಳು....