Thursday, September 16, 2010

ಮರೆಯಲಾಗದ ಅನುಭವ.....

.ಗೆಳೆಯರೇ,
ಸಾವಿರಾರು ನೆನಪುಗಳ ಹೊತ್ತು, ಅನಿವಾರ್ಯದ ಕರೆಗೆ ಓಗೊಟ್ಟು ಊರನ್ನು ಬಿಟ್ಟು ನಗರವನ್ನು ಸೇರಿದ್ದೇನೆ. ಊರಲ್ಲಿ ಇದ್ದ ಒಂದು ತಿಂಗಳಲ್ಲಿ ಎಲ್ಲವೂ ಸಂತೋಷದ ಕ್ಷಣಗಳೇ,  ಬೆಂಗಳೂರಿನಲ್ಲಿ ಶುರುವಾದ ಸಂತೋಷ ಇಂದಿನವರೆಗೂ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಬೆಂಗಳೂರಿನಲ್ಲಿ ಬ್ಲಾಗ್ ಮಿತ್ರರೆಲ್ಲರ ಒಡನಾಟ ಎಂದೂ ಮರೆಯಲಾಗದ ಅನುಭವ. ನಗೆಗಡಲಲ್ಲಿ ತೇಲಿಸುವ ಪಕ್ಕು ಮಾಮ(ಪ್ರಕಾಶಣ್ಣ) ಆಶಾಕ್ಕ, ಸಜ್ಜನ ಸರ್ಜನರು ನಮ್ಮ ಡಾಕ್ಟರ್ ಅವರು, ಮುಗುಳ್ನಗೆಯ ಮಾಂತ್ರಿಕ ಪರಾಂಜಪೆ ಸರ್, ನಾರಾಯಣ ಭಟ್ಟರು, ಜ್ಞಾನ ಸಾಗರ ವಿ ಆರ್ ಭಟ್ಟರು, ಅನಿಲ್ ಬೆಡಗೆ, ನಾಗರಾಜ್, ಶಿವು ಮತ್ತು ಹೇಮಶ್ರೀ ಮೇಡಂ(ಮತ್ತು ಅವರ ಮನೆ ಊಟ!)............ಜೊತೆಗೆ ಸುಗುಣಕ್ಕ ಮಹೇಶ್ ಸರ್ ಮನೆಯ ಹಬ್ಬದ ಊಟ! ಪಕ್ಕು ಮಾಮನ ಜೊತೆ ಸುತ್ತಾಟ, ಸಿನಿಮಾ ನೋಡಾಟ, ಹುಡುಗಿ ನೋಡಾಟ,  ಅದಕ್ಕೂ ಕಿತ್ತಾಟ!
ಇವರೆಲ್ಲರೊಂದಿಗೆ ಕಳೆದ ಆ ಮಧುರ ಕ್ಷಣಗಳು ಮತ್ತೆ ಮರುಕಳಿಸುವುದು ಯಾವಾಗ? ಶಿವು ಮತ್ತು ಅಜಾದ್ ಅವರ ಪುಸ್ತಕ ಬಿಡುಗಡೆಯ ಕಾರ್ಯಕ್ರಮವಂತೂ ನಮ್ಮ ಮನೆಯ ಕಾರ್ಯಕ್ರಮದಂತೆ ನಡೆದು ಹೋಯಿತು. ಅಲ್ಲಿ ಎಲ್ಲರೂ ಅಪರಿಚಿತರೇ, ಆದರೆ ಯಾರಲ್ಲೂ ಆ ಬಾವನೆಯೇ ಇಲ್ಲ! ಒಟ್ಟಿಗೆ ತಿಂದು ಉಂಡು ಬೆಳೆದ ಸ್ನೇಹಿತರಿಗಿಂತಲೂ ಪರಿಚಯಸ್ತರು! ಸೀತಾರಾಂ ಸರ್, ನಮ್ಮೊಳಗೊಬ್ಬ ಬಾಲು ಸರ್, ಹಳ್ಳಿಮೇಷ್ಟ್ರು ನವೀನ್, ಬ್ರಹ್ಮಚಾರಿ ಶಿವಪ್ರಕಾಶ್,  ಚೇತನಾ, ನಂಜುಂಡ ದಂಪತಿಗಳು, ಶಿವಶಂಕರ್ ಯಳವತ್ತಿ, ದಿನಕರ್ ದಂಪತಿಗಳು, ಅಶೋಕ್ ಶೆಟ್ಟಿ, ನಗುಮೊಗದ ಹುಡುಗ ನಮ್ಮವ ರಾಘು, ದಿಲೀಪ್ ಹೆಗ್ಡೆ, ಪ್ರಗತಿ, ದಿವ್ಯ ಹೆಗ್ಡೆ, ಶೋಭಾ, ಶಶಿ ಅಕ್ಕ, ನಿಶಾ ಅಕ್ಕ, ಸುಮನ ವೆಂಕಟ್ ಜೋಡಿ................ಒಬ್ಬರ ಇಬ್ಬರಾ! 
ನಂತರ ನಡೆದ ಬಹುಮಾನ ವಿತರಣೆ! ಈ ಪ್ರೀತಿ, ಅಧರ, ಖುಷಿ, ಬೇರೆಲ್ಲೂ ಸಿಗಲಾರದೇನೋ..........ಎಲ್ಲಾ ಬ್ಲೋಗ್ ಮಿತ್ರರಿಗೂ ನಾನು ಚಿರಋಣಿ.

ಇನ್ನು ಮನೆಯಲ್ಲಿದ್ದ ಕ್ಷಣಗಳೆಲ್ಲವು  'ಆ ಸಮಯ......... ಆನಂದಮಯಾ............!' ಧೋ ಎಂದು ಸುರಿವ ಮಳೆ, ನಾಟಿ ಕೆಲಸ, ತೋಟದ ಕೆಲಸ, ದನ ಮೇಯಿಸುವ ಕೆಲಸ ಜೊತೆಯಲ್ಲೇ ಆಗಾಗ ತಿರುಗಾಟ! ಆಗುಂಬೆ, ಜೋಗ, ಕವಿಶೈಲ, ಶೃಂಗೇರಿ, ಮಾವನ ಮನೆ, ಚಿಕ್ಕಮ್ಮನ ಮನೆ ಎಲ್ಲಾ ಕಡೆ ತಿಂದು ಉಂಡು ತಿರುಗಿದ್ದೇ! ಶ್ರಾವಣ, ಗೌರಿ ಹಬ್ಬ, ಗಣೇಶ ಚತುರ್ಥಿ ಮುಂತಾದ ಹಬ್ಬಗಳ ಸರಮಾಲೆ! ಈಗ ಎಲ್ಲಾ ಬಿಟ್ಟು ನೆನಪುಗಳನ್ನು ಹೊತ್ತು ಮತ್ತೆ ದೆಹಲಿಗೆ ಬಂದಿದ್ದೇನೆ ಹೊಟ್ಟೆಪಾಡಿಗಾಗಿ!



ಹಲವಾರು ದಿನಗಳಿಂದ ನಿಮ್ಮ ಬ್ಲಾಗಿಗೆ ಭೇಟಿ ಕೊಟ್ಟಿರಲಿಲ್ಲ. ಈಗ ಒಂದೊಂದಾಗಿ ಓದುತ್ತೇನೆ. ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. 





ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ
ನಿಲ್ಲದ ಓಟಕ್ಕೆ 
ದುಡಿಯುವ ಛಲಕ್ಕೆ
ಗಳಿಸುವ ತವಕಕ್ಕೆ
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ

ಹಕ್ಕಿ ಪಕ್ಷಿಗಳ ಕಲರವ ಬಿಟ್ಟು
ಜುಳು ಜುಳು ನೀರಿನ ಸದ್ದನು ಮರೆತು
ತಂಗಾಳಿಯ ಸಹವಾಸ ದೂಡಿ
ಕಾರ್ಮುಗಿಲು ಬಿರುಮಳೆಗಂಜಿ
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ

ಹಳ್ಳಿಯ ಮುಗ್ಧ  ಮುಖಗಳ
ತಾಯಿಯಂತ ಮನೆಯ ಹಸುಗಳ
ಪ್ರೀತಿ ತೋರುವ ನಾಯಿಗಳ 
ಹಂಚಿನ ಬೆಚ್ಚನೆ ಮನೆಯ 
ಎಲ್ಲವ ಬಿಟ್ಟುಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ

ಮಲೆನಾಡ ಮಣ್ಣಿನ ಸುವಾಸನೆಯಂತ
ಅಮ್ಮನ ಪ್ರೀತಿಯ ಕೈತುತ್ತ ತಿಂದು 
ಅಪ್ಪನ ಕಣ್ಣನಚ ನೀರನು ಕಾಣದೆ
ತಮ್ಮನೊಂದಿಗಿನ ಆಟವ ನೆನೆಯುತ
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ,

ಗಡಿಬಿಡಿಯ ಪ್ರಪಂಚದಲ್ಲಿ 
ದುಡಿಮೆಯ ಗುರಿಯ ಬೆನ್ನಟ್ಟಿ
ಎಲ್ಲಾ ನೆನಪನು ಗಳಿಗೆ ಮರೆತು
ಯಂತ್ರದಂತೆ ತಿರುಗಲೆಂದು
ಮತ್ತೆ ಮರಳಿದ್ದೇನೆ ಅದೇ ಜೀವನಕ್ಕೆ,
ನಿಲ್ಲದ ಓಟಕ್ಕೆ 
ದುಡಿಯುವ ಛಲಕ್ಕೆ
ಗಳಿಸುವ ತವಕಕ್ಕೆ!

36 comments:

  1. Leaving our hometown for ಹೊಟ್ಟೆಪಾಡು is necessary alwaa?? nice memories u have shared.
    take care
    :-)
    malathi S

    ReplyDelete
  2. ಲೈಫು ಇಷ್ಟೇನೆ ...:) ಇದು ಅನಿವಾರ್ಯ ...ಚನ್ನಾಗಿದೆ ಕವನ

    ReplyDelete
  3. ನಿಮ್ಮ ಕವಿತೆ ಬಂದಿರಲು ಮನದಾಳ ದಿಂದ ಸ್ವಾಗತಿಸಿದೆನು ನಾನು ತೆರೆದ ಹೃದಯದಿಂದ , ಇರಲಿ ಹೀಗೆ ನಮ್ಮ ಸ್ನೇಹ ಅನುಭಂದ ,ಜೀವನ ಹೀಗಿದ್ದರೆ ಚಂದ. ಸಿಹಿಯ ರುಚಿ ತಿಳಿಯಲು ಬೇವು ಮೆದ್ದರೆ ಚಂದ ಅದುವೇ ಜೀವನ ಆನಂದ !!!

    ReplyDelete
  4. ಪ್ರವೀಣ್,

    ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಿಮ್ಮ ನಿರೂಪಣೆ ಸೊಗಸು ಮರೆಯುವಂತಿಲ್ಲ. ನಮ್ಮ ಮನೆಯಲ್ಲಿ ಕೂತು ಹರಟಿದ್ದು, ಸುತ್ತಾಡಿದ್ದು,.... ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.

    ReplyDelete
  5. ಬಹಳ ಚೆನ್ನಾಗಿ ಹಾು ಬರೆದಿರಿ, ವಿಷಯ ಹಂಚಿಕೊಂಡಿರಿ, ಆದರೆ ನನಗೆ ಜ್ಞಾನ ಸಾಗರ ಎಂದು ಕರೆದಿದ್ದು ಹೆಚ್ಚು ಎನಿಸಿತು, ಧನ್ಯವಾದಗಳು

    ReplyDelete
  6. namagoo eega ella savinenapugaLu.......thumba chennagittu nimmellara jothe idda dinagalu....

    ReplyDelete
  7. ಪ್ರವೀಣ್,
    ನಿಮ್ಮನ್ನು ನೋಡಿ ತುಂಬಾ ಖುಶಿಯಾಗಿತ್ತು... ನೋಡಿದೊಡನೆ ಗುರುತು ಸಿಕ್ಕಿತ್ತು...... ನಿಮ್ಮ ಜೊತೆ ಕಳೆದ ಘಳಿಗೆ ಮರೆಯಲಾರದ್ದು..... ಅದನ್ನು ಮತ್ತೆ ನೆನಪು ಮಾಡಿಸಿದಿರಿ.....
    ನೀವು ಬರೆದ ಕವನ ನಿಜಕ್ಕೂ ಸೊಗಸಾಗಿದೆ....... ಎಲ್ಲವನ್ನೂ ತುಂಬಿದೆ ಕವನ......

    ReplyDelete
  8. Hmm Blagigara koota tumba chennagittu anta tilitu..

    nice to hear .. hmm tumba tummba nenapugalannu hottu maraliddeeri.. hotte padu anivarya ellarigu..

    halliya odanata.. peteya janjata.. kavana tumba chennagide

    Pravi

    ReplyDelete
  9. ಪ್ರವೀಣ,
    ಇಲ್ಲೂ ಸಹ ನಿಮ್ಮ ಜೀವನ ಉಲ್ಲಾಸಕರವಾಗಿರಲಿ.

    ReplyDelete
  10. ಮಾಲತಿ ಅಕ್ಕ,
    ನೀವು ಹೇಳುವುದು ನಿಜ,

    ಆದರೆ ನಗರ ಜೀವನದ ಎಲ್ಲಾ ಜಂಜಾಟಗಳನ್ನು ಬದಿಗೊತ್ತಿ ಕೆಲವು ದಿನಗಳನ್ನು ಹಳ್ಳಿಯಲ್ಲಿ ಕಳೆದ ಆ ಕ್ಷಣಗಳು ಮಧುರ ನೆನಪಿನ ಬುತ್ತಿ. ಅದನ್ನು ಎಂದಿಗೂ ಮರೆಯಲಾಗದು.
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ......

    ReplyDelete
  11. ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ,
    Yes,
    ಲೈಫು ಇಷ್ಟೇನೆ ...:)
    ನೆನಪುಗಳ ಮಧುರ ವೆಧನೆಯೊಂದಿಗೆ ಜೀವನ ಸಾಗಲೇಬೇಕು..........

    ReplyDelete
  12. ಬಾಲು ಸರ್,
    ಧನ್ಯವಾದಗಳು,
    ನಿಮ್ಮೆಲ್ಲರೊಂದಿಗೆ ಕಳೆದ ಆ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಲೇ ಕೆಲಸ ಆರಂಭಿಸಿದ್ದೇನೆ.......

    ReplyDelete
  13. ಶಿವಣ್ಣ,
    ನಾನೂ ಕೂಡಾ ನಿಮ್ಮೆಲ್ಲರನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಒಡನಾಟ ಸದಾ ನನ್ನ ಕಣ್ಮನದಲ್ಲಿ ತುಂಬಿ ತುಳುಕುತ್ತಿದೆ.......
    ಧನ್ಯವಾದಗಳು.

    ReplyDelete
  14. ವಿ ಆರ್ ಭಟ್ ಸರ್,
    ನೀವು ಜ್ಞಾನ ಸಾಗರವೇ ಹೌದು, ನಿಮ್ಮಂದ ತಿಳಿದುಕೊಂಡ ವಿಷಯಗಳು ಕಡಿಮೆಯೇ.....ನಿಮ್ಮೊಂದಿಗಿದ್ದ ಸಮಯ ಕಡಿಮೆಯಾದರೂ ತಿಳಿದುಕೊಂಡಿದ್ದು ಬಹಳ ಇದೆ.
    ಧನ್ಯವಾದಗಳು ನಿಮಗೆ ಹಾಗೂ ನಿಮ್ಮ ಪ್ರತಿಕ್ರಿಯೆಗೆ........

    ReplyDelete
  15. ಸುಬ್ರಮಣ್ಯ ಮಾಚಿಕೊಪ್ಪ

    ......:-)
    Thanks

    ReplyDelete
  16. ಮಹೇಶಣ್ಣ,
    ನೆನಪುಗಳಿಗೆಂದೂ ಕೊನೆಯಿಲ್ಲ ಏನಂತೀರಾ? ಸುಗುಣಕ್ಕ ಮತ್ತು ನಿಮ್ಮ ಪ್ರೀತಿ ವಿಶ್ವಾಸ ಈ ತಮ್ಮನ ಮೇಲೆ ಹೀಗೆ ಇರಲಿ......
    ಧನ್ಯವಾದಗಳು.........

    ReplyDelete
  17. ದಿನಕರ್ ಸರ್,
    ಎಂದೂ ಭೇಟಿಯೇ ಆಗಿರದಿದ್ದ ನಾವೆಲ್ಲ ಆದಿವಾಸ ಒಂದೇ ಕುಟುಂಬದವರಂತೆ ಎಷ್ಟೋ ವರ್ಷಗಳ ಚಿರಪರಿಚಿತರಂತೆ ಒಂದಾಗಿದ್ದು ನಿಜಕ್ಕೂ ಮರೆಯಲಾಗದ ನೆನಪುಗಳು.
    ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ....
    ಧನ್ಯವಾದಗಳು.

    ReplyDelete
  18. ಪ್ರವೀಣ್ ಭಟ್,
    ಹೌದು, ಹೊಟ್ಟೆ ಪಾಡು ಅನಿವಾರ್ಯ, ಹಲವಾರು ನೆನಪುಗಳನ್ನು ಹೊತ್ತು ಮರಳಿದರೂ ಮನಸ್ಸಿನ್ನೂ ಅಲ್ಲೇ ಇದೆ..........
    ಧನ್ಯವಾದಗಳು...

    ReplyDelete
  19. ಸುನಾಥ್ ಜೀ,
    ನಿಮ್ಮೆಲ್ಲರ ಆಶಿರ್ವಾದ ಹಾರೈಕೆ ಹೀಗೆ ಇರಲಿ.......
    ಧನ್ಯವಾದಗಳು.

    ReplyDelete
  20. sada nenapinalli uLiyuvantaha dinagaLu....

    ReplyDelete
  21. ಪ್ರವೀಣ್...ನಿಮ್ಮ ಮೊದಲ ಮಾತು ನಮ್ಮ ಪುಸ್ತಕ ಬಿಡುಗಡೆ ಸಮಾರಂಭದ್ದು..ನನಗೆ ಸದಾ ನೆನಪಿರುತ್ತೆ...ನಿಮ್ಮ ಎಲ್ಲ ಸಹಕಾರಗಳಿಗೆ ಧನ್ಯವಾದ...(ಆತ್ಮೀಯರಲ್ಲಿ ಈ ಉಪಚಾರದ ಮಾತು ಇರಬಾರದು ..ಅದ್ರೂ..).

    ReplyDelete
  22. ಮಲೆನಾಡಿನ ರಮ್ಯತೆಯಿ೦ದ ಕಾ೦ಕ್ರೀಟ್ ನಾಡಿನ ರ೦ಗಿನೆಡೆಗೆ..ದುಡಿಯುವ, ಗಳಿಸುವ ಅನಿವಾರ್ಯತೆ..ಆದರೆ ಸ್ನೇಹಕ್ಕೇನೂ ಕೊರೆತೆಯಿಲ್ಲ ಬ್ಲಾಗಿಗರ ಕೂಟವಿದೆ..!
    ಶುಭಾಶಯಗಳು ಪ್ರವೀಣ್.


    ಅನ೦ತ್

    ReplyDelete
  23. ಪ್ರವೀಣ್,

    ಆ ದಿವಸ ಅಲ್ಲಿ ಎಲ್ಲರನ್ನು ನನಗೆ ಪರಿಚಯಿಸಿದ ನಿಮಗೆ ಮತ್ತೊಮ್ಮೆ ಧನ್ಯವಾದಗಳು. ಅದೊಂದು ಮರೆಯಲಾಗದ ಅನುಭವ. ನಿಮ್ಮ ಕವನ ಸೊಗಸಾಗಿದೆ. ಧನ್ಯವಾದಗಳು..

    ReplyDelete
  24. ಅಕ್ಕ,
    ಖಂಡಿತವಾಗಿಯೂ, ಸದಾ ನೆನಪಿನಲ್ಲಿ ಉಳಿಯುವ ಸುಂದರ ಕ್ಷಣಗಳು,
    ಧನ್ಯವಾದಗಳು...

    ReplyDelete
  25. ಅಜಾದ್ ಸರ್,
    ನಾವೆಲ್ಲರೂ ಬ್ಲಾಗೆಂಬ ಒಂದೇ ಕುಟುಂಬದವರು, ನಮ್ಮಲ್ಲಿ ಈ ಉಪಚಾರ ಸಲ್ಲ, ಅಷ್ಟಕ್ಕೂ ನಾವು ಮಾಡಿರುವುದಾದರೂ ಏನು? ನಿಮ್ಮೆಲ್ಲರೊಂದಿಗೂ ಕಳೆದ ಸುಂದರ ಕ್ಷಣಗಳಿಗೆ ಒಂದು ರೀತಿಯಲ್ಲಿ ನೀವು ಮತ್ತು ಶಿವಣ್ಣ ಕಾರಣರಲ್ಲವೇ?

    ReplyDelete
  26. ಅನಂತರಾಜ್ ಸರ್,
    ನಿಮ್ಮ ಮಾತು ಅಕ್ಷರಃ ಸತ್ಯ.....
    ಧನ್ಯವಾದಗಳು ನಿಮ್ಮೆಲ್ಲರ ಸಹಕಾರಕ್ಕೆ.

    ReplyDelete
  27. ಅಶೋಕ್,
    ಅಷ್ಟು ದೂರದಿಂದ ಬ್ಲಾಗಿಗರನ್ನೆಲ್ಲ ಒದಗೂದಳು ಬಂದ ನಿಮಗೆ ಮೊದಲು ಧನ್ಯವಾದಗಳನ್ನು ತಿಳಿಸಬೇಕು,
    ಕವನ ಮೆಚ್ಚಿದ್ದಕ್ಕೆ ನಾನು ನಿಮಗೆ ಅಭಾರಿ.........

    ReplyDelete
  28. ಯಳವತ್ತಿ ಸಾಹೇಬ್ರೆ,
    ನಿಮ್ಮೆಲ್ಲರ ಒಡನಾಟ ಮರೆಯಲಾಗದ ಅನುಭವ, ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ......

    ReplyDelete
  29. ಪ್ರವೀಣ್,

    ಎಲ್ಲರೂ ಹಾಗೇ ಅಲ್ವಾ..
    ಯಾವುದೋ ಒಂದು ಕನಸಿನ-ಒಂದು ಒತ್ತಡದ-ಒಂದು ತುಡಿತದ ಹಿಂದೆ ಸಾಗಿ ಮನೆ ಊರು ಬಿಟ್ಟು , ಎಲ್ಲೋ ಒಂದೆಡೆ ನಮ್ಮದೇ ಜೀವನ ಕಟ್ಟಿಕೊಳ್ಳುವ ತವಕದಲ್ಲಿರುತ್ತೇವೆ.

    ಸುಂದರ ಬರಹ

    ReplyDelete
  30. ಅಪ್ಪ-ಅಮ್ಮ..........
    ನಿಮ್ಮ ಅಭಿಪ್ರಾಯ ನಿಜ.
    ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ.

    ReplyDelete
  31. ಶಿಪ್ರ,
    ಹಾಗಂತೀಯಾ? ಏನು ಮಾಡೋಣ ಅನುಭವಿಸಲೇ ಬೇಕು ಅಲ್ವಾ?
    ಧನ್ಯವಾದಗಳು.........

    ReplyDelete
  32. ತುಂಬಾ ಮುದ್ದಾದ ಕವಿತೆ.
    ನಿಮ್ಮ ಭಾವನೆಗಳು ತೀಕ್ಷ್ಣವಾಗಿವೆ.
    ಬ್ಲಾಗಿಗರ ಕೂಟ ನಿಮ್ಮಂತೆ ಎಲ್ಲರಿಗೂ ರಸದೌತಣ.
    ಹಳ್ಳಿ ಜೆವನದಲ್ಲಿನ ಬದುಕು ನಿಮ್ಮ ಸಂತೋಷವೆ೦ದಿರುವಿರಿ. ದೆಹಲಿಗೆ ಹೋಗುವ ಅನಿವಾರ್ಯತೆಗೆ ವಿಷಣ್ಣರಾಗಿರುವಿರಿ.
    ಎರಡು ತಿಂಗಳಲ್ಲಿ ನೀವು ಪಡೆದದ್ದೇನು ಕಳೆದುಕೊಂಡದ್ದೇನು? ಎಂಬುದರ ಮೆಲುಕುಹಾಕಿದ್ದೀರಿ.
    ಎಲ್ಲ ನೋಡಲಾಗಿ ನನಗನ್ನಿಸಿದ್ದು-
    ದಯವಿಟ್ಟು ಈ ಪ್ರಶ್ನೆಗೆ ಅನ್ಯಥ ಬಾವಿಸಬೇಡಿ -ದೆಹಲಿ ಕೆಲಸ ನಿಮಗೆ ಅನಿವಾರ್ಯವೇ?

    ReplyDelete
  33. ಸಿತಾರಾಮ್ ಸರ್,
    ಇದೇ ಜೀವನ ಅಲ್ವಾ? ಅನಿವಾರ್ಯತೆಯಲ್ಲಿ ನಮ್ಮ ಇಷ್ಟವನ್ನು ಮುಚ್ಚಿಡಲೇ ಬೇಕು.
    ದೆಹಲಿ ಕೆಲಸ ಅನಿರ್ಧಿಷ್ಟ ಸಮಯದವರೆಗೆ ಅನಿವಾರ್ಯವೇ..........!
    ಧನ್ಯವಾದಗಳು..........

    ReplyDelete