Sunday, May 30, 2010

"ಹೀಗೊಬ್ಬಳು ಮದುಮಗಳು"


ಹುಡು ಹುಡುಕಿ ದಣಿದ ಮೇಲೆ 
ಸಿಕ್ಕಳಾಕೆ ಕಡು ಕಷ್ಟದಲ್ಲಿ......!
ಜೊತೆ ಹಿಡಿದೇ ನಡೆದೆ
ಬಿಡಲಾರದ ಪ್ರೀತಿಯಿಂದಲಿ......!

ಆಕೆಯೋ ಮದುಮಗಳು 
ವರಕವಿಯ ಪ್ರೀತಿಯ ಮಗಳು.......!
ಅವಳೆಂದರೆ ನನಗೆ ಬಹಳ ಪ್ರೀತಿ 
ಬಿಡಿಸಲಾಗದ ನಂಟು ಯಾಕೋ ಆ ರೀತಿ.......!

ಕುಂತಲ್ಲಿ ನಿಂತಲ್ಲಿ ಅವಳದೇ ಧ್ಯಾನ
ಮಲಗಿದರೂ ನಾ ಬಿಡಲಾರೆ ಅವಳನ್ನ....!
ಕೆಲಸದಲ್ಲೂ ಕಾಡುವಳು ನೆನಪಾಗಿ 
ಮಲಗಿದರೂ ಕಚಗುಳಿಯಿಡುವಳು ತುಂಟಿಯಾಗಿ......!

ಮದುಮಗಳ ಸ್ನೇಹ ನಾ ಬಿಡಲಾರೆ
ಉಸಿರಿರುವವರೆಗೂ ನಾ ಮರೆಯಲಾರೆ......
ಅವಳೇ ರಾಷ್ಟ್ರಕವಿಯ ನಲ್ಮೆಯ ಮಗಳು
ಜ್ಞಾನಪೀಠ ತಂದಿತ್ತ  "ಮಲೆಗಳಲ್ಲಿ ಮದುಮಗಳು!"

32 comments:

  1. wah wah kya baat hai..tuma chennagide.
    Nimmava,
    Raaghu.

    ReplyDelete
  2. 'ಮಲೆಗಳಲ್ಲಿ ಮದುಮಗಳು' ಪುಸ್ತಕವನ್ನು ಓದುವ ಸಂದರ್ಭದಲ್ಲಿ ನನ್ನ ಮನಸ್ಥಿತಿ ಹೀಗಿತ್ತು!
    ಧನ್ಯವಾದಗಳು.

    ReplyDelete
  3. ಪ್ರವೀಣ್...

    ನನ್ನ ದಾರಿಯನ್ನೂ ತಪ್ಪಿಸಿ ಬಿಟ್ರಲ್ಲಾ... !!
    ತುಂಬಾ ಸೊಗಸಾಗಿದೆ ..
    ತುಂಟತನದಿಂದ ಬರೆದಿದ್ದೀರಿ...

    ಹೊಟ್ಟೆಕಿಚ್ಚು ಬರುವಷ್ಟು ಚೆನ್ನಾಗಿದೆ...

    ಇಂಥಹ ಇನ್ನಷ್ಟು ಚಂದಗಳು ನಿಮ್ಮ ಬ್ಲಾಗಿನಲ್ಲಿ ಬರಲಿ...

    ಪ್ರೀತಿಯಿಂದ..

    ReplyDelete
  4. ಇದೇನು ಕಥೆ..!! ಮಧುಮಗಳಿಗೆ ಮನಸೋತೆ ಅಂತಿದ್ದೀರಲ್ಲಾ ಅಂತ ಗಾಭರಿ ಬಿದ್ದೆ ಹ್ಹ ಹ್ಹ ಹ್ಹ.....!! ಸುಂದರ ಕವನ ಪ್ರವೀಣ್ ಅವ್ರೆ. ಅಭಿನಂದನೆಗಳು.

    ReplyDelete
  5. ಮಲೆಯಲ್ಲಿ ಮದು ಮಗಳು ಪುಸ್ತಕ ನಿಮ್ಮ ಮೇಲೆ ಮಾಡಿದ ಪರಿಣಾಮದ ಪರಿಣಾಮದ
    ಬಗ್ಗೆ ಕವಿತೆ ಚೆನ್ನಾಗಿದೆ.

    ReplyDelete
  6. :). ಕೊನೆಯ ಸಾಲು ಓದುವವರೆಗೂ ರಹಸ್ಯ ತಿಳಿಯಲಿಲ್ಲ !. ತುಂಬ ಚೆನ್ನಾಗಿದೆ.

    ReplyDelete
  7. nice....ನಂಗೂ ಮದುಮಗಳು ಇಷ್ಟ.

    ReplyDelete
  8. ಪ್ರಕಾಶಣ್ಣ.....
    ಧನ್ಯವಾದಗಳು.

    ಚಿಕ್ಕವನಿದ್ದಾಗ ಓದಿದ್ದ ಕಾದಂಬರಿ ಬಹಳ ಕಾಡುತ್ತಿತ್ತು. ಕಳೆದ ತಿಂಗಳು ಬೆಂಗಳೂರಿಗೆ ಬಂದಾಗ "ಸ್ವಪ್ನಾ"
    ದಲ್ಲಿ ಹುಡುಕಿ ಕೊಂಡು ತಂದಿದ್ದೆ. ಅದನ್ನು ಓದುವ ಸಂದರ್ಭದಲ್ಲಿ ನನ್ನ ಪರಿಸ್ಥಿತಿ ಹೀಗಿತ್ತು!

    ReplyDelete
  9. ಓ ಮನಸೆ...............
    ಸುಸ್ವಾಗತ ನನ್ನ ಬ್ಲಾಗಿಗೆ.
    ನಮ್ಮ ಹೆಮ್ಮೆಯ ರಾಷ್ಟ್ರಕವಿಯ ಬರವಣಿಗೆಗೆ ಮನಸೋಲದವರು ಯಾರಿದ್ದಾರೆ ಅಲ್ವಾ?

    ReplyDelete
  10. @DTK ಸರ್...........
    ಮದುಮಗಳ ಪರಿಣಾಮವೇ ಅಂತಹುದು. ಧನ್ಯವಾದಗಳು.

    ReplyDelete
  11. @ಸುಬ್ರಮಣ್ಯ ಸರ್
    ಧನ್ಯವಾದಗಳು............


    @ಸುಮಾ ಅವರೇ............
    ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರ್ತಾ ಇರಿ.


    @ಸೀತಾರಾಂ ಸರ್.............
    ನಮಸ್ಕಾರ. ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.


    @ಪವನಾ ಮೇಡಂ....................
    ಮೊದಲ ಬಾರಿ ಬಂದಿದ್ದೀರಾ. ಹೀಗೆ ಬಂದು, ಓದಿ, ಅಭಿಪ್ರಾಯ ತಿಳಿಸ್ತಾ ಇರಿ. ಧನ್ಯವಾದಗಳು.

    ReplyDelete
  12. ಒಳ್ಳೇ ಚೆಲುವಾದ ಮದುಮಗಳ ಕೈಯನ್ನೇ ಹಿಡಿದಿದ್ದೀರಿ. ನೀವೂ ಸಹ ‘ಶಿಕಾರಿ’ಗಳೇ
    ಅಲ್ವೆ? ಅಭಿನಂದನೆಗಳು!

    ReplyDelete
  13. ಸುನಾಥ್ ಸರ್,
    ಆ ಮದುಮಗಳೇ ನನಗೆ ಶಿಕಾರಿಯ ಅನುಭವವನ್ನು ಬರೆಯಲು ಪ್ರೇರಣೆ!
    ಧನ್ಯವಾದಗಳು.

    ReplyDelete
  14. ಹಾಯ್ ಪ್ರವೀಣ್ ಸರ್....

    ತುಂಬಾ ಚೆನ್ನಾಗಿದೆ ನಿಮ್ಮ ಕವನ, ನಿಮ್ಮ ಪ್ರೇಮಿಯನ್ನು ನಾನೂ ಅಗಾಧವಾಗಿ ಪ್ರೀತಿಸುತ್ತೇನೆ. ....ನಿಮ್ಮ ಕವನ ಇಷ್ಟ ಆಯಿತು....

    ReplyDelete
  15. ವಾಹ್ ರೆ ವಾಹ್ ಪ್ರವೀಣ
    ಒಳ್ಳೆ twist.ಚೆನ್ನಾಗಿದೆ
    :-)
    ಮಾಲತಿ ಎಸ್

    ReplyDelete
  16. @ಸುಬ್ರಮಣ್ಯ ಸರ್,
    ಧನ್ಯವಾದಗಳು.



    ಅಶೋಕ್.....
    ನನ್ನ ಬ್ಲಾಗಿಗೆ ಸ್ವಾಗತ.....
    ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.


    @ಮಾಲತಿಯವರೇ,
    ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರ್ತಾ ಇರಿ.

    ReplyDelete
  17. Dear sushil,
    welcome to my blog and thanks for your comment.
    keep visiting...!

    ReplyDelete
  18. ಸೂಪರ್ರು ಕಣೋ,
    ಕೊನೆ ಸಾಲಿನವರೆಗೆ ಗೊತ್ತೇ ಆಗ್ಲಿಲ್ಲ! ಅಂತೂ ಮದುಮಗಳನ್ನೇ ಜೊತೆ ಮಾಡ್ಕೊಂಡೆ ಅಲ್ವಾ?

    ReplyDelete
  19. ಪುಟ್ಟಿ,
    ನನ್ನ ಬ್ಲಾಗಿಗೆ ಸ್ವಾಗತ......!
    ಅಪಾರ್ಥ ಮಾಡ್ಕೋಬೇಡ. ಅದು ಬರೀ ಕುವೆಂಪಜ್ಜನ ಕಾದಂಬರಿ ಅಷ್ಟೇ! ನೀನ್ಯಾಕೆ ಹೊಟ್ಟೆಕಿಚ್ಚು ಪಡ್ತೀ:)?????????????

    ReplyDelete
  20. ಪ್ರವೀಣ್ ಸರ್ ,
    ಮಧುಮಗಳನ್ನ ಅದೆಸ್ಟು ಚೆನ್ನಾಗಿ ವರ್ಣಿಸಿದ್ದೀರಿ ! .. ತುಂಬಾ ಚೆನ್ನಾಗಿದೆ :)

    ReplyDelete
  21. ಯಾವ ಮದುಮಗಳು ಎಂದು ಯೋಚಿಸುತ್ತಿರುವಾಗಲೆ ಕೊನೆಗೆ ಗೊತ್ತಾಗಿದ್ದು, ಇವಳು ರಾಷ್ಟ್ರಕವಿಯ 'ಮಗಳು' ಎಂದು. ಸುಂದರ ಕವಿತೆ

    ReplyDelete
  22. ರಂಜಿತ ಮೇಡಂ,
    ಧನ್ಯವಾದಗಳು.

    ReplyDelete
  23. ದೀಪಸ್ಮಿತಾ.....
    ತುಂಬಾ ದಿನಗಳ ನಂತರ ನನ್ನ ಬ್ಲಾಗ್ ಕಡೆ ಬಂದಿದ್ದೀರಿ, ಧನ್ಯವಾದಗಳು. ಹೀಗೆ ಬರ್ತಾ ಇರಿ.

    ReplyDelete
  24. ಮಲಗಿದ್ರೂ ಬಿಡಲ್ಲ ಅವಳನ್ನ ...!!!
    ಇದೇನಪ್ಪ..ಪ್ರವೀನ್ ಯಾಕೋ ...ಬಿಸಿಲ ಝಳಕ್ಕೆ..
    ..ಹಾ..ಹಾಂ..ಹೋಲ್ಡಾನ್...!!
    ಇದೋ ಕಥೆ....ಮದುಮಗಳ ಕಥೆ...ಹಹಹ
    ಚನ್ನಾಗಿದೆ...ಬೇಸ್ತು..ಸುಸ್ತು..

    ReplyDelete
  25. ಅಜಾದ್ ಸರ್,
    ಯಾಕೆ ಯೋಚನೆ ಎಲ್ಲೆಲ್ಲೋ ಹೋದಂಗಿತ್ತು?
    ಈಗ ಅರ್ಥ ಆಯ್ತಲ್ವಾ?
    ಹ್ಹ ಹ್ಹ ಹ್ಹಾ.............
    ಧನ್ಯವಾದಗಳು.

    ReplyDelete
  26. chennagi bestu beelisdira ellarannu. Madumagalu thumba chennagidale

    ReplyDelete
  27. ನೀವೂ ಬೇಸ್ತು ಬಿದ್ರಾ?
    ಹ್ಹ ಹ್ಹ ಹ್ಹಾ!
    ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  28. ಯಾರೋ ಹೇಳಿರುವ ಹಾಗೆ ಹೊಟ್ಟೆಕಿಚ್ಚು ಬರುವಷ್ಟು ಚೆನ್ನಾಗಿದೆ.

    ReplyDelete