Monday, May 10, 2010

ಕೋಪವೇಕೆ ಮೀನಾಕ್ಷಿ?






 ಹುಸಿ ಕೋಪ ನಿನಗೇಕೆ

ತುಸು ಸನಿಹ ಬರಬಾರದೆ

ನನ್ನ ಚೆಲುವೆ ನೀನೊಮ್ಮೆ

ಮನಬಿಚ್ಚಿ  ನಗಬಾರದೇ.............




ನೀ ನಕ್ಕರೆ ಮನತುಂಬಿ


 ಸಿಹಿ ಮುತ್ತ ಕೊಡುವೆ


ಮುತ್ತು ರತ್ನ ವಜ್ರ


ಕೊಡಲೇ ಬಂಗಾರದೊಡವೆ...........


ಹುಸಿಕೋಪ ತೊರೆದು


ತುಸು ದಯೆಯ ತೋರಿ 


ಹೊಸ ಪ್ರೇಮ ತೋರು


ಅರಳಿಸು ಮನಸೆಲ್ಲಾ................






ಮೊದಲ ದಿನ  ಕಂಡಾಗ


ನೀ ತೊದಲಿ ನುಡಿದಂತೆ


ಹೃದಯದ ವೀಣೆಯ ನುಡಿಸು


ಅಂದದ ಬಯಕೆ ತುಂಬಿತಲ್ಲಾ.............


ನಸು ನಾಚಿಕೆಯ ಕಿರುನಗು


ತುಸು ತಡೆದರೂ ಬಂದೀತು


ಪಿಸುಮಾತನಾಡಿ ಮನಗೆಲ್ಲೋ 


ಆಸೆ ಎದೆಯಲ್ಲೇ ಉಳಿದೀತು...............




ಕೊನೆಗೂ ಬಾರದೆ ಕರುಣೆ


ಮುಗುಳ್ನಗೆಯೂ ಮೂಡದೇ


ಇತ್ತ ಬಾರೊಮ್ಮೆ ಮೀನಾಕ್ಷಿ


ಕೋಪದ ಕೆಂಗಣ್ಣು ಬಿಡದೆ.........!




17 comments:

  1. ಮೀನಿನಂತಿರುವ ಅಕ್ಷಿಗಳು ನಿಮ್ಮ ಪ್ರೇಮ ಕೊಳದಲ್ಲಿ ಅರಾಮವಾಗಿರಲಿ ಎನ್ನುವ ಹಾರೈಕೆ !ಕವಿತೆ ಚೆನ್ನಾಗಿದೆ.

    ReplyDelete
  2. K D T ಸರ್,
    ಏನ್ಮಾಡೋದು ಹೇಳಿ,
    ಸುಮ್ಸುಮ್ನೆ ನನ್ನ ಗೋಳು ಹೊಯ್ದುಕೊಳ್ಳಲಿಕ್ಕಾದರೂ ಮೀನಾ ಕಂಗಳು ತೇವವಾಗುತ್ತವೆ!
    ಚಂದದ ಪ್ರತಿಕ್ರಿಯೆಗೆ ದನ್ಯವಾದಗಳು.

    ReplyDelete
  3. ಮೀನಾಕ್ಷಿ ಎಂದು ಹೇಳಿ ಕೋಪವೇ ಬಾರದಂತೆ ತಡೆದುಬಿಟ್ಟಿರಲ್ಲಾ ನೀವು !. ಇನ್ನೆಲ್ಲಿಯ ಕೆಂಗಣ್ಣು ? ..ನಿಮ್ಮ ಆಸೆ ಫಲಿಸಲಿ !. ಪ್ರೇಮ ಕವನ ಚೆನ್ನಾಗಿದೆ.

    ReplyDelete
  4. ಸುಬ್ರಮಣ್ಯ ಸರ್,
    ಮನಮೆಚ್ಚಿದವಳ
    ಮನದಿಚ್ಚೆ ಅರಿತು
    ಸ್ವಚ್ಛ ಮನದಿ
    ಆಕೆಯ ಕನಸು
    ನನಸಾಗಿಸಲು
    ಹೊಗಳಲೇ ಬೇಕಲ್ಲಾ!

    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಸಿಹಿಮುತ್ತ ಸುರಿದ ಮೇಲೆ ಮತ್ತೇಕೆ ವಜ್ರವೈಡುರ್ಯ ಬ೦ಗಾರದೊಡವೆ? ಚೆ೦ದದ ಕವನ.

    ReplyDelete
  6. ಸೀತಾರಾಮ ಸರ್,

    ಚಿನ್ನ ವಜ್ರದೊಡವೆಯ
    ಬಣ್ಣದ ಮೋಹವಾದರೂ
    ನನ್ನಾಕೆಯ ಕೋಪವನ್ನು
    ತಣ್ಣಗಾಗೀಸಿತೆಂಬ
    ಸಣ್ಣ ಆಸೆ ಅಷ್ಟೇ!

    ಪ್ರತಿಕ್ರಿಯಿಸಿದ್ದಕ್ಕೆ ದನ್ಯವಾದಗಳು.

    ReplyDelete
  7. ಮಿನಾಕ್ಷಿ ನಿಮಗೆ ಓಲೆಯಲಿ ಒಲಿದು ನಿಮ್ಮ ಬಾಲ ಹಸುನಾಗಿಸಲು , ,

    ಮಿನಾಕ್ಷಿ ನಿನ್ನ ಕಣ್ಣಮೇಲೆ . . .!! ;)

    ReplyDelete
  8. ಸಂಜು ಸರ್,
    ಮೀನಕ್ಸಿಯ ಕಣ್ಣ ಮೇಲೆ ಮುರಳಿಗೂ ಕಣ್ಣಿರಬಹುದೇನೋ....
    ಆದರೆ ನನ್ನ ಕಣ್ಣೆದುರು ಅವನಿಗೆ ಧೈರ್ಯ ಸಾಲಲ್ಲ ಬಿಡಿ!

    ದನ್ಯವಾದಗಳು.

    ReplyDelete
  9. ದಿನಕರ್ ಸರ್,
    ನಿಮ್ಮ ಮನೆಗೆ ಈಗಷ್ಟೇ ಹೋಗಿ ಬಂದೆ. ಹಾಗೂ ತಡವಾಗಿಯಾದರೂ ನಿಮ್ಮ ಹಿಂಬಾಲಕನಾಗಿದ್ದೇನೆ!
    ನೀವು ಯಾವಾಗಲೂ ನಮ್ಮನೆಗೆ ಬಂದು ಹೋಗುತ್ತಿದ್ದಿರಿ. ಅದಕ್ಕೆ ಈ ಬರಿ ನಾನು ನಿಮ್ಮಲ್ಲಿಗೆ ಹೋಗಿದ್ದೆ!

    ಚೆಂದದ ಪ್ರತಿಕ್ರಿಯೆಗೆ ದನ್ಯವಾದಗಳು.

    ReplyDelete
  10. ಇನ್ನೊಮ್ಮೆ ನಿಮ್ಮಾಕೆಗೆ ಸಿಟ್ಟು ಬಂದರೆ ... ಈ ಕವನ ತೋರಿಸಿ :) ...
    ತುಂಬಾ ಚೆನ್ನಾಗಿದೆ :)

    ReplyDelete
  11. ರಂಜಿತ ಮೇಡಂ?
    ಹಾಗೇನಾದರೂ ಈ ಕವನ ತೋರಿಸಿದರೆ ಮತ್ತೆ ನನ್ನ ಜೋಬಿಗೆ ಕುತ್ತು!
    ಯಾಕೆ ಬೇಕು ಸುಮ್ನೆ ಕೋಲು ಕೊಟ್ಟು ಪೆಟ್ಟು ತಿನ್ನುವುದು ಅಲ್ವಾ?
    ಧನ್ಯವಾದಗಳು ಪ್ರತಿಕ್ರಿಯಿಸಿದ್ದಕ್ಕೆ.

    ReplyDelete
  12. ಪ್ರವೀಣ್...

    ಮಸ್ತಾಗಿದೆ ಮೀನಾಕ್ಷೀ ...
    ಪ್ರೇಮ..
    ಮುನಿಸು... !

    ತುಂಬಾ ಚೆನ್ನಾಗಿ ಬರೆದಿದ್ದೀರಿ...

    ಅಭಿನಂದನೆಗಳು...

    ReplyDelete
  13. ದನ್ಯವಾದಗಳು ಪ್ರಕಾಶಣ್ಣ......
    ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

    ReplyDelete
  14. Shashi madam,
    welcome to my blog
    thanks for your valuable comment.
    keep visit

    ReplyDelete